ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಕಾಯಿತರಿಂದ ₹ 31 ಲಕ್ಷ ಮೌಲ್ಯದ ನಗನಾಣ್ಯ ಲೂಟಿ

ಚನ್ನಗಿರಿ ತಾಲ್ಲೂಕಿನ ಹೆಬ್ಬಳಗೆರೆ ಗ್ರಾಮದಲ್ಲಿ ನಡೆದ ಘಟನೆ
Last Updated 19 ಸೆಪ್ಟೆಂಬರ್ 2021, 5:08 IST
ಅಕ್ಷರ ಗಾತ್ರ

ಚನ್ನಗಿರಿ: ತಾಲ್ಲೂಕಿನ ಹೆಬ್ಬಳಗೆರೆ ಗ್ರಾಮದ ಮನೆಯೊಂದಕ್ಕೆ ಶುಕ್ರವಾರ ರಾತ್ರಿ ನುಗ್ಗಿದ ಏಳರಿಂದ ಎಂಟು ಜನರಿದ್ದ ಡಕಾಯಿತರ ಗುಂಪು, ₹ 16 ಲಕ್ಷ ನಗದು ಹಾಗೂ ₹ 15 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ಲೂಟಿ ಮಾಡಿದೆ.

ಮನೆಯ ಮಾಲೀಕ ಶಿವಮೂರ್ತಪ್ಪ ಹಾಗೂ ಪತ್ನಿ ರತ್ನಮ್ಮ ಅವರನ್ನು ಕಟ್ಟಿಹಾಕಿದ ಡಕಾಯಿತರು, ಲಾಕರ್ ಅನ್ನು ಹಾರೆಯಿಂದ ಒಡೆದು ನಗದು ಹಾಗೂ ಚಿನ್ನಾಭರಣಗಳನ್ನು ದೋಚಿಕೊಂಡು ಹೋಗಿದ್ದಾರೆ.

‘ಎಲ್ಲರೂ ಮಂಕಿ ಕ್ಯಾಪ್, ಜರ್ಕಿನ್ ಹಾಗೂ ಪ್ಯಾಂಟ್ ಧರಿಸಿದ್ದರು. ಕನ್ನಡ ಮಾತನಾಡುತ್ತಿದ್ದರು. ಸುಮಾರು 25ರಿಂದ 30 ವರ್ಷದವರಾಗಿದ್ದರು. ಕೈಗೆ ಕಟ್ಟಿದ್ದ ಹಗ್ಗವನ್ನು ಹೆಂಡತಿ ಹೇಗೋ ಬಿಚ್ಚಿಕೊಂಡು, ನನ್ನನ್ನೂ ಮುಕ್ತಗೊಳಿಸಿದಳು. ನಂತರ ಸಂಬಂಧಿ ಶಿವಣ್ಣ ಅವರಿಗೆ ಕರೆ ಮಾಡಿ ತಿಳಿಸಿದೆವು. ಬಳಿಕ ಪೊಲೀಸ್ ಠಾಣೆಗೆ ದೂರು ನೀಡಿದೆವು’ ಎಂದು ಶಿವಮೂರ್ತಪ್ಪ ಮಾಹಿತಿ ನೀಡಿದರು.

ಸಿಪಿಐ ಮಧು ಹಾಗೂ ಪೊಲೀಸ್ ಸಿಬ್ಬಂದಿ ಶ್ವಾನ ದಳದೊಂದಿಗೆ ಬಂದು ಸ್ಥಳ ಪರಿಶೀಲಿಸಿದರು. ‘ಒಂಟಿ ಮನೆಗಳಲ್ಲಿ ವಾಸ ಮಾಡುವವರು ಜಾಗರೂಕರಾಗಿರಬೇಕು. ಸಿಸಿಟಿವಿ ಕ್ಯಾಮೆರಾ ಅಳವಡಿಸಿಕೊಳ್ಳುವುದು ಸೂಕ್ತ’ ಎಂದು ಸಲಹೆ ನೀಡಿದರು.

ಚನ್ನಗಿರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT