ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾಯಾಗಡ್: ಧಾರ್ಮಿಕ ಕಾರ್ಯಕ್ರಮ ರದ್ದು

Last Updated 22 ಜನವರಿ 2022, 4:35 IST
ಅಕ್ಷರ ಗಾತ್ರ

ಭಾಯಾಗಡ್ (ನ್ಯಾಮತಿ): ಸೇವಾಲಾಲ್ ಅವರ 283ನೇ ಜಯಂತಿ ಅಂಗವಾಗಿ ಭಾಯಾಗಡ್‌ನಲ್ಲಿ ಫೆಬ್ರುವರಿ 13,14 ಮತ್ತು 15ರಂದು ಯಾವುದೇ ಧಾರ್ಮಿಕ ಕಾರ್ಯಕ್ರಮ ನಡೆಯುವುದಿಲ್ಲ. ಭಕ್ತರಿಗೆ ಪ್ರವೇಶ ನಿಷೇಧಿಸಲಾಗಿದೆ ಎಂದು ಸೇವಾಲಾಲ್ ಮಠದ ಸಮಿತಿ ಅಧ್ಯಕ್ಷ ಈಶ್ವರನಾಯ್ಕ ತಿಳಿಸಿದರು.

ರಾಜ್ಯದಲ್ಲಿ ಕೋವಿಡ್ ರೋಗ ನಿವಾರಣೆಗೆ ಪ್ರಾರ್ಥಿಸಿ ಸೇವಾಲಾಲ್ ಮತ್ತು ಮರಿಯಮ್ಮಗೆ ಗುರುವಾರ ಪೂಜೆ ನೆರವೇರಿಸಿ ಅವರು ಮಾತನಾಡಿದರು.

ಕೊರೊನಾ ಕಾರಣ ಸರ್ಕಾರದ ನಿಯಮಗಳನ್ನು ಪಾಲಿಸಬೇಕಿರುವುದರಿಂದ ರಾಜ್ಯ ಕಮಿಟಿ, ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ, ಶಾಸಕ ಎಂ.ಪಿ. ರೇಣುಕಾಚಾರ್ಯ, ತಾಂಡ ಅಭಿವೃದ್ಧಿ ನಿಗಮ ಅಧ್ಯಕ್ಷ ರಾಜೀವ ಮತ್ತು ಸಮುದಾಯದ ಮುಖಂಡರ ತೀರ್ಮಾನದಂತೆ ಜಾತ್ರೆ ರದ್ದುಪಡಿಸಲಾಗಿದೆ ಎಂದರು.

ಮುಖಂಡರಾದ ಸುರೇಂದ್ರನಾಯ್ಕ, ತಾಂಡಾ ಅಭಿವೃದ್ಧಿ ನಿಗಮ ನಿರ್ದೇಶಕ ಮಾರುತಿನಾಯ್ಕ, ಅರಸುನಾಯ್ಕ ಮಾತನಾಡಿ, ‘ಜಯಂತಿ ರದ್ದುಪಡಿಸಲು ಶಾಸಕ ಎಂ.ಪಿ. ರೇಣುಕಾಚಾರ್ಯ ಅವರೇ ಕಾರಣ ಎಂದು ಕೆಲ ಕಿಡಿಗೇಡಿಗಳು ಸಾಮಾಜಿಕ ತಾಲತಾಣದಲ್ಲಿ ಸುದ್ದಿ ಹರಡಿರುವುದು ಅಕ್ಷಮ್ಯ’ ಎಂದರು.

ಮುಖಂಡರಾದ ಜಿ. ಶಿವರಾಮನಾಯ್ಕ, ಎಸ್.ಎನ್. ಗೋಪಾಲನಾಯ್ಕ, ಓಂಕಾರನಾಯ್ಕ, ಭೋಜ್ಯನಾಯ್ಕ, ಜುಂಜಾನಾಯ್ಕ, ರೇಣುನಾಯ್ಕ, ಎಸ್.ಬಿ. ಸುರೇಶನಾಯ್ಕ, ದೂದ್ಯಾನಾಯ್ಕ, ಗೋಪಿಚಂದ್, ಕಿರಣಕುಮಾರ, ಮಠದ ಸಿಬ್ಬಂದಿ ಹನುಮಂತಪ್ಪ, ಸೇವ್ಯಾನಾಯ್ಕ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT