ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾವಣಗೆರೆ: ಸೇವಾ ಭದ್ರತೆಗಾಗಿ ಎನ್ಎಚ್‌ಎಂ ನೌಕರರ ಪ್ರತಿಭಟನೆ

Last Updated 28 ಜುಲೈ 2020, 15:00 IST
ಅಕ್ಷರ ಗಾತ್ರ

ದಾವಣಗೆರೆ: ಎನ್‌ಎಚ್‌ಎಂ ಗುತ್ತಿಗೆ ನೌಕರರಾಗಿ ಆರೋಗ್ಯ ಇಲಾಖೆಯಲ್ಲಿ ಕೆಲಸ ಮಾಡುತ್ತಿರುವವರನ್ನು ಕಾಯಂಗೊಳಿಸಿ ಸೇವಾ ಭದ್ರತೆ ನೀಡಬೇಕು ಎಂದು ಆಗ್ರಹಿಸಿ ಜಿಲ್ಲಾಧಿಕಾರಿ ಕಚೇರಿ ಎದುರು ಮಂಗಳವಾರ ನೌಕರರು ಪ್ರತಿಭಟನೆ ನಡೆಸಿದರು.

‘ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯರು, ಶುಶ್ರೂಷಕರಿಯರು, ಪ್ರಯೋಗಾಲಯದ ತಂತ್ರಜ್ಞರು, ನೇತ್ರಾ ಅಧಿಕಾರಿಗಳು, ಫಾರ್ಮಾಸಿಸ್ಟ್ಸ್‌ ಕೆಲಸ ಮಾಡುತ್ತಿದ್ದಾರೆ. ಅವರ ಬೇಡಿಕೆಗಳನ್ನು ನೆರವೇರಿಸುವಂತೆ ಆಗ್ರಹಿಸಿ ಹಲವು ಮಾಡಿ ಮನವಿ ಮಾಡಿದರೂ ಸ್ಪಂದಿಸಿಲ್ಲ. ಗುತ್ತಿಗೆ ಆಧಾರದಲ್ಲಿಯೇ ಹೊಸತಾಗಿ ನೇಮಕವಾಗುತ್ತಿರುವ ಶುಶ್ರೂಷಕರಿಯರಿಗೆ ₹ 25 ಸಾವಿರ, ಫಾರ್ಮಾಸಿಸ್ಟ್ಸ್‌, ತಂತ್ರಜ್ಞರಿಗೆ ₹ 20 ಸಾವಿರ ನೀಡಲಾಗುತ್ತಿದೆ. ಆದರೆ 16 ವರ್ಷಗಳಿಂದ ಕೆಲಸ ಮಾಡುತ್ತಿರುವ ನಮಗೆ ₹ 12 ಸಾವಿರ ಮತ್ತು ₹ 8,800 ಅಷ್ಟೇ ಇದೆ. ವಿಮಾ ಸೌಲಭ್ಯವೂ ಇಲ್ಲ’ ಎಂದು ಪ್ರತಿಭಟನಕಾರರು ಆಕ್ರೋಶ ವ್ಯಕ್ತಪಡಿಸಿದರು.

ಕೆಲಸ ಕಾಯಂಗೊಳಿಸಬೇಕು. ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು. ಆರೋಗ್ಯ ವಿಮೆ, ವಿಶೇಷ ಭತ್ಯೆ ನೀಡಬೇಕು. ರಜಾದಿನಗಳಲ್ಲಿ ಕೆಲಸ ಮಾಡಿದರೆ ಹೆಚ್ಚುವರಿ ವೇತನ ಇಲ್ಲವೇ ಪರಿಹಾರ ರಜೆ ನೀಡಬೇಕು. ಕೋವಿಡ್‌ ವಿಶೇಷ ಭತ್ಯೆ ನೀಡಬೇಕು. ಸರ್ಕಾರಿ ಆಸ್ಪತ್ರೆಗಳ ಖಾಸಗೀಕರಣ ಕೈಬಿಡಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಆನಂದರಾಜು, ಹುಲಿಗಮ್ಮ, ಶ್ವೇತಾ, ಸುಶೀಲಾ, ನೂರ್‌ ಜಹಾನ್‌, ಖಾಜಾ ಮೈನುದ್ದೀನ್‌, ಪ್ರಶಾಂತ್‌ ಕುಮಾರ್‌, ತಿಪ್ಪೇಸ್ವಾಮಿ, ಶಾಹನಾಜ್‌, ಉಮಾಭಾಯಿ, ಲೀಲಾವತಿ, ಶೋಭಾ, ಪದ್ಮ, ಗಣೇಶ್‌, ಬಸವರಾಜಯ್ಯ ಅವರೂ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT