ದಾವಣಗೆರೆ: ಜಿಲ್ಲೆಯಲ್ಲಿ ಅಡುಗೆ ಅನಿಲ, ಪೆಟ್ರೋಲ್ ಮತ್ತು ಡೀಸೆಲ್ ಸೇರಿದಂತೆ ಇಂಧನಕ್ಕೆ ಕೊರತೆ ಇಲ್ಲ. ಆತಂಕಕ್ಕೆ ಒಳಗಾಗಿ ಸಿಲಿಂಡರ್ ಮುಂಗಡ ಕಾಯ್ದಿರಿಸುವಿಕೆಯ ಅಗತ್ಯವಿಲ್ಲ. ವಾಣಿಜ್ಯ ಬಳಕೆಯ ಸಿಲಿಂಡರ್ ಕೂಡ ಪೂರೈಕೆ ಮಾಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ ತಿಳಿಸಿದರು.

‘ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಸಂಘರ್ಷದ ಪರಿಣಾಮವಾಗಿ ವಾಣಿಜ್ಯ ಬಳಕೆಯ ಸಿಲಿಂಡರ್ಗೆ ಆರಂಭದಲ್ಲಿ ತೊಂದರೆಯಾಗಿತ್ತು. ಈ ಸಮಸ್ಯೆಗೆ ಪರಿಹಾರ ಸಿಕ್ಕಿದ್ದು, ಅಗತ್ಯ ಇರುವಷ್ಟು ಇಂಧನ ಪೂರೈಕೆ ಆಗುತ್ತಿದೆ. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ವದಂತಿ ಹರಡಿದರೆ ನಿರ್ದಾಕ್ಷಿಣ್ಯ ಕ್ರಮ ಜರುಗಿಸಲಾಗುತ್ತದೆ’ ಎಂದು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಎಚ್ಚರಿಕೆ ನೀಡಿದರು.

ಬುಕ್ಕಿಂಗ್ 5 ಪಟ್ಟು ಹೆಚ್ಚಳ:

‘ಸರ್ಕಾರಿ ಸ್ವಾಮ್ಯದ ಹಿಂದೂಸ್ತಾನ್ ಪೆಟ್ರೋಲಿಯಂ (ಎಚ್ಪಿ), ಭಾರತ್ ಹಾಗೂ ಇಂಡೇನ್ ಆಯಿಲ್ ಕಂಪನಿಯ (ಐಒಸಿ) 41 ಗ್ಯಾಸ್ ಏಜೆನ್ಸಿಗಳು ಜಿಲ್ಲೆಯಲ್ಲಿವೆ. ಯುದ್ಧ ಆರಂಭವಾಗುವುದಕ್ಕೂ ಮೊದಲು ನಿತ್ಯ ಸರಾಸರಿ 9,546 ಅಡುಗೆ ಅನಿಲದ ಸಿಲಿಂಡರ್ ಬುಕ್ಕಿಂಗ್ ಆಗುತ್ತಿದ್ದವು. ಇದರಲ್ಲಿ 9,427 ಸಿಲಿಂಡರ್ಗಳು ಪ್ರತಿದಿನ ಗ್ರಾಹಕರ ಮನೆಗಳಿಗೆ ತಲುಪುತ್ತಿದ್ದವು. ಬುಕ್ಕಿಂಗ್ ಮಾಡಿದ 24 ಗಂಟೆಯೊಳಗೆ ಸೇವೆ ಒದಗಿಸಲಾಗುತ್ತಿತ್ತು’ ಎಂದು ವಿವರಿಸಿದರು.

‘ಯುದ್ಧ ಆರಂಭವಾದ ಬಳಿಕ ಜನರಲ್ಲಿ ಆತಂಕ ಸೃಷ್ಟಿಯಾಗಿದೆ. ಇದರ ಪರಿಣಾಮವಾಗಿ ಅಡುಗೆ ಅನಿಲದ ಬುಕ್ಕಿಂಗ್ ನಿತ್ಯ ಸರಾಸರಿ 46,345ಕ್ಕೆ ಏರಿಕೆಯಾಗಿದೆ. ಈ ಹಿಂದಿಗಿಂತ 5 ಪಟ್ಟು ಬುಕ್ಕಿಂಗ್ ಏರಿಕೆ ಆಗಿರುವುದು ಜನರ ಆತಂಕವನ್ನು ತೋರಿಸುತ್ತಿದೆ. ಈಗಲೂ ನಿತ್ಯ ಸರಾಸರಿ 9,566 ಸಿಲಿಂಡರ್ಗಳನ್ನು ಗ್ರಾಹಕರಿಗೆ ವಿತರಿಸಲಾಗುತ್ತಿದೆ. ಗೃಹ ಬಳಕೆಯ ಅಡುಗೆ ಅನಿಲಕ್ಕೆ ಜಿಲ್ಲೆಯಲ್ಲಿ ಈವರೆಗೆ ತೊಂದರೆ ಆಗಿಲ್ಲ’ ಎಂದು ಸ್ಪಷ್ಟಪಡಿಸಿದರು.

35 ದಿನಕ್ಕೊಂದು ಸಿಲಿಂಡರ್:

‘14.5 ಕೆ.ಜಿಯ 1 ಸಿಲಿಂಡರ್ ಹೊಂದಿರುವ ಕುಟುಂಬ ಅಡುಗೆ ಅನಿಲದ ಬುಕ್ಕಿಂಗ್ ಅಂತರವನ್ನು 25 ದಿನಗಳಿಗೆ ನಿಗದಿಪಡಿಸಲಾಗಿದೆ. 2 ಸಿಲಿಂಡರ್ ಹೊಂದಿದ ಕುಟುಂಬ 35 ದಿನಕ್ಕೊಂದು ಸಿಲಿಂಡರ್ ಕಾಯ್ದಿರಿಸಬಹುದಾಗಿದೆ. 10 ಕೆ.ಜಿಯ ಸಿಲಿಂಡರ್ಗೆ ನಗರದಲ್ಲಿ 18 ದಿನ ಹಾಗೂ ಗ್ರಾಮೀಣ ಪ್ರದೇಶದಲ್ಲಿ 32 ದಿನಗಳ ಅಂತರ ನಿಗದಿಪಡಿಸಲಾಗಿದೆ. 5 ಕೆ.ಜಿ. ಸಿಲಿಂಡರ್ಗೆ ಗ್ರಾಮೀಣ ಪ್ರದೇಶದಲ್ಲಿ 9 ದಿನ ಹಾಗೂ ನಗರದಲ್ಲಿ 16 ದಿನಗಳ ಅಂತರವಿದೆ’ ಎಂದರು.

‘ಕೆಲ ದಿನ ಸ್ಥಗಿತವಾಗಿದ್ದ ವಾಣಿಜ್ಯ ಬಳಕೆಯ ಸಿಲಿಂಡರ್ ಪೂರೈಕೆ ಪುನರಾರಂಭಗೊಂಡಿದೆ. ನಿತ್ಯ ಜಿಲ್ಲೆಯಲ್ಲಿ 182 ವಾಣಿಜ್ಯ ಬಳಕೆಯ ಸಿಲಿಂಡರ್ ಬುಕ್ಕಿಂಗ್ ಆಗುತ್ತಿದ್ದು, ವಿತರಣೆ ಕೂಡ ನಡೆಯುತ್ತಿದೆ. 9 ದಿನಗಳಿಗೆ ಸಾಕಾಗುವಷ್ಟು ದಾಸ್ತಾನು ಇದ್ದು, ಅಗತ್ಯಕ್ಕೆ ಅನುಗುಣವಾಗಿ ಸರಬರಾಜು ಆಗುತ್ತಿದೆ. ಆದರೂ, ಗ್ರಾಹಕರು ಅಡುಗೆ ಅನಿಲದ ಮಿತ ಬಳಕೆಗೆ ಒತ್ತು ನೀಡುವುದು ಸೂಕ್ತ. ಹಳ್ಳಿ ಜನರು ಬಯೋಗ್ಯಾಸ್ ಉಪಯೋಗಿಸಿದರೆ ಅನುಕೂಲ’ ಎಂದು ಸಲಹೆ ನೀಡಿದರು.

ಪೊಲೀಸ್ ವರಿಷ್ಠಾಧಿಕಾರಿ ಡಾ.ಎಚ್.ಟಿ.ಶೇಖರ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗಿತ್ತೆ ಮಾಧವ ವಿಠ್ಠಲರಾವ್ ಹಾಜರಿದ್ದರು.

‘ಡಬ್ಬಿಯಲ್ಲಿಇಂಧನ ತುಂಬುವಂತಿಲ್ಲ’

‘ಜಿಲ್ಲೆಯಲ್ಲಿ 220 ಪೆಟ್ರೋಲ್ ಬಂಕ್ಗಳಿದ್ದು, ಪೆಟ್ರೋಲ್ ಮತ್ತು ಡೀಸೆಲ್ ದಾಸ್ತಾನು ಇದೆ. ಆಟೊಗಳಿಗೆ ಬಳಸುವ ಎಲ್ಪಿಜಿ ಪೂರೈಕೆ ಕೂಡ ಸರಿಹೋಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಹರಡುವ ವದಂತಿಗಳಿಗೆ ಜನರು ಕಿವಿಗೊಡಬಾರದು’ ಎಂದು ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ ಮನವಿ ಮಾಡಿದರು.

‘ದೇಶದಲ್ಲಿ ಮುಂದಿನ 5 ತಿಂಗಳಿಗೆ ಸಾಕಾಗುವಷ್ಟು ಇಂಧನ ದಾಸ್ತಾನು ಇದೆ ಎಂಬುದನ್ನು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ. ನಿತ್ಯ ಮಂಗಳೂರಿನಿಂದ ದಾವಣಗೆರೆಗೆ ಇಂಧನ ಪೂರೈಕೆ ಆಗುತ್ತಿದೆ. ಜನರು ಆತಂಕಕ್ಕೆ ಒಳಗಾಗಿ ಕ್ಯಾನ್ ಹಿಡಿದು ಬಂಕ್ಗಳಿಗೆ ಬರುತ್ತಿರುವ ಬಗ್ಗೆ ಮಾಹಿತಿ ಬಂದಿದೆ. ಇಂತಹ ಕ್ಯಾನ್ಗಳಿಗೆ ಇಂಧನ ತುಂಬದಂತೆ ಬಂಕ್ಗಳಿಗೆ ಸೂಚನೆ ನೀಡಲಾಗಿದೆ’ ಎಂದರು.

90 ಎಲ್ಪಿಜಿ ಸಿಲಿಂಡರ್ ವಶ

ಗೃಹ ಬಳಕೆಯ ಸಿಲಿಂಡರ್ಗಳನ್ನು ವಾಣಿಜ್ಯ ಉದ್ದೇಶಕ್ಕೆ ಬಳಸುತ್ತಿದ್ದ ಹೋಟೆಲ್, ಅಂಗಡಿಗಳ ಮೇಲೆ ದಾಳಿ ನಡೆಸಲಾಗಿದ್ದು, ಈವರೆಗೆ 90 ಎಲ್ಪಿಜಿ ಸಿಲಿಂಡರ್ಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಜಿಲ್ಲಾಧಿಕಾರಿ ಗಂಗಾಧರಸ್ವಾಮಿ ತಿಳಿಸಿದರು.

‘ಗೃಹ ಬಳಕೆಯ ಸಿಲಿಂಡರ್ಗಳನ್ನು ಆಟೊಗಳಿಗೆ ರೀಫಿಲ್ ಮಾಡುತ್ತಿದ್ದ ಕೇಂದ್ರದ ಮೇಲೆ ದಾಳಿ ನಡೆಸಿ ಕಾನೂನು ಕ್ರಮ ಜರುಗಿಸಲಾಗಿದೆ. ಇನ್ನೂ ಇಂತಹ 2 ರೀಫಿಲ್ಲಿಂಗ್ ಕೇಂದ್ರಗಳಿರುವ ಬಗ್ಗೆ ಮಾಹಿತಿ ಇದೆ. ಇವುಗಳ ಮೇಲೂ ದಾಳಿ ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಇಲ್ಲಿಗೆ ಸಿಲಿಂಡರ್ ಮಾರಾಟ ಮಾಡುವ ಗ್ರಾಹಕರ ವಿರುದ್ಧವೂ ಎಫ್ಐಆರ್ ದಾಖಲಿಸಲಾಗುತ್ತದೆ’ ಎಂದು ಎಚ್ಚರಿಕೆ ನೀಡಿದರು.

ಗ್ಯಾಸ್ ಏಜೆನ್ಸಿ ಎದುರು ಎಲ್ಪಿಜಿ ಸಿಲಿಂಡರ್ಗೆ ಕಾಯುವಂತಿಲ್ಲ. ಬುಕ್ಕಿಂಗ್ ಮಾಡಿದ ಗ್ರಾಹಕರ ಮನೆಬಾಗಿಲಿಗೆ ಪೂರೈಕೆ ಮಾಡಲಾಗುತ್ತದೆ. ಅನಗತ್ಯ ಗುಂಪುಗೂಡಿ ಅಶಾಂತಿ ಸೃಷ್ಟಿಸಿದರೆ ಕಾನೂನು ಕ್ರಮ ನಿಶ್ಚಿತ
ಜಿ.ಎಂ. ಗಂಗಾಧರಸ್ವಾಮಿ, ಜಿಲ್ಲಾಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.