ಗುರುವಾರ , ಜುಲೈ 29, 2021
21 °C

ಮಾಸ್ಕ್‌ ಧರಿಸದ ಕಾನ್‍ಸ್ಟೆಬಲ್‍ಗೆ ದಂಡ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದಾವಣಗೆರೆ: ಮಾಸ್ಕ್ ಧರಿಸದ ಇಲ್ಲಿನ ಬಡಾವಣೆ ಪೊಲೀಸ್ ಠಾಣೆಯ ಕಾನ್‍ಸ್ಟೆಬಲ್‌ ಒಬ್ಬರಿಗೆ ಗುರುವಾರ ₹ 200 ದಂಡ ವಿಧಿಸಲಾಗಿದೆ.

ದ್ಚಿಚಕ್ರ ವಾಹನದಲ್ಲಿ ಹಳೇ ಬಸ್‍ನಿಲ್ದಾಣದ ಸಮೀಪ ಬರುತ್ತಿದ್ದಾಗ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಹಾಗೂ ಎಸ್‍ಪಿ ಹನುಮಂತರಾಯ ತಡೆದು, ಕರ್ತವ್ಯ ಮೇಲಿದ್ದಾಗ ಮಾಸ್ಕ್ ಧರಿಸದೆ ಬರುತ್ತಿದ್ದ ಸಂಬಂಧ ದಂಡ ವಿಧಿಸಿದರು. ಅವರಿಗೆ ಉಚಿತ ಮಾಸ್ಕ್ ನೀಡಿದರು.

ಕಾನೂನು ಕಾಪಾಡುವವರೇ ಕಾನೂನು ಉಲ್ಲಂಘಿಸುವುದು ಸರಿಯಲ್ಲ ಎಂದು ಎಸ್ಪಿ ಕಾನ್‍ಸ್ಟೆಬಲ್‍ಗೆ ಎಚ್ಚರಿಕೆ ನೀಡಿದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.