ನ್ಯಾಮತಿ: ‘ಅನುಭವ ಮಂಟಪದ ಮೂಲಕ ಜಾತಿ, ಮತ, ಪಂಥ ಎನ್ನದೇ ಸರ್ವರಿಗೂ ಮುಕ್ತ ಅವಕಾಶ ನೀಡಿದವರು ಬಸವಣ್ಣ’ ಎಂದು ವೀರಶೈವ ಲಿಂಗಾಯತ ಮಹಾಸಭಾದ ತಾಲ್ಲೂಕು ಘಟಕದ ಅಧ್ಯಕ್ಷ ಲಿಂಗರಾಜು ಹವಳದ ಅಭಿಪ್ರಾಯಪಟ್ಟರು.

ಭಾನುವಾರ ಬಸವಾದಿ ಶರಣರ ಪರ ಸಂಘಟನೆಗಳು ಬಸವೇಶ್ವರ ಜಯಂತ್ಯುತ್ಸವ ಆಚರಣೆ ಕುರಿತು ಕರೆದಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.

‘ಏ. 25ರಂದು ಸಂಜೆ 4 ಗಂಟೆಗೆ ಕಲ್ಲುಮಠದಿಂದ ಅಲಂಕೃತ ವಾಹನದಲ್ಲಿ ಬಸವೇಶ್ವರರ ಭಾವಚಿತ್ರವನ್ನು ಮೆರವಣಿಗೆ ಮೂಲಕ ಮಹಾಂತೇಶ್ವರ ಕಲ್ಯಾಣ ಮಂದಿರಕ್ಕೆ ತರಲಾಗುವುದು. ಬಳಿಕ ವೇದಿಕೆ ಕಾರ್ಯಕ್ರಮ ನಡೆಯಲಿದೆ. ಮಾದನಭಾವಿ ಗುರುನಂಜಪ್ಪ ಗೌಡ ಅಧ್ಯಕ್ಷತೆ ವಹಿಸಲಿದ್ದಾರೆ’ ಎಂದು ತಿಳಿಸಿದರು.

ಲಿಂಗಾಯತ ಮಹಾಸಭಾ ತಾಲ್ಲೂಕು ಘಟಕದ ಅಧ್ಯಕ್ಷ ಎಚ್. ಮಹೇಶ್ವರಪ್ಪ, ಶರಣ ಸಾಹಿತ್ಯ ಪರಿಷತ್ ತಾಲ್ಲೂಕು ಘಟಕದ ಅಧ್ಯಕ್ಷ ಎಂ.ಬಿ. ಶಿವಯೋಗಿ, ಮುಖಂಡರಾದ ಎಚ್. ವಿರೂಪಾಕ್ಷಪ್ಪ, ಜಿ. ವಿಜಯಕುಮಾರ, ಮೆರವಣಿಗೆ ಜಯದೇವಪ್ಪ, ಕೆಂಚಿಕೊಪ್ಪ ಕೋಮೇಶ್ವರಪ್ಪ, ಮಂಡಕ್ಕಿ ಶಿವರಾಜ, ಆರುಂಡಿ ಬಿ.ಜಿ. ನಾಗರಾಜ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260420-43-790975631

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.