ನ್ಯಾಮತಿ: ‘ಬೆಂಕಿ, ನೀರು, ವಿದ್ಯುತ್ ಕುರಿತು ಎಚ್ಚರ ವಹಿಸಿ’ ಎಂದು ಹೊನ್ನಾಳಿ ಅಗ್ನಿಶಾಮಕ ಠಾಣಾಧಿಕಾರಿ ಟಿ.ಆರ್.ಪರಶುರಾಮಪ್ಪ ಮನವಿ ಮಾಡಿದರು.

ಅಗ್ನಿಶಾಮಕ ಸೇವಾ ಸಪ್ತಾಹದ ಅಂಗವಾಗಿ ಶನಿವಾರ ನ್ಯಾಮತಿ ಬೆಸ್ಕಾಂ ಸಿಬ್ಬಂದಿಗೆ ಬೆಂಕಿ ಅವಘಡ, ಸುರಕ್ಷತೆ ಬಗ್ಗೆ ಅರಿವು ಮೂಡಿಸಿ ಮಾತನಾಡಿದರು.

‘ಬೆಂಕಿ ಅವಘಡ ಸಂಭವಿಸಿದ ಸಮಯದಲ್ಲಿ ಸಾರ್ವಜನಿಕರು ಗಾಬರಿಯಾಗದೇ ಸರಿಯಾದ ವಿಳಾಸ, ಹೆಸರು, ದೂರವಾಣಿ ಸಂಖ್ಯೆ, ಯಾವ ರೀತಿಯ ಬೆಂಕಿ ಹಾಗೂ ಮಾರ್ಗವನ್ನು ಸರಿಯಾದ ರೀತಿಯಲ್ಲಿ ತಿಳಿಸಿದರೆ ಹತ್ತಿರದ ಅಗ್ನಿಶಾಮಕ ಠಾಣೆಯಿಂದ ಶೀಘ್ರದಲ್ಲಿ ಅಗ್ನಿಶಾಮಕ ವಾಹನವು ಘಟನಾ ಸ್ಥಳಕ್ಕೆ ಹೋಗಲು ಅನುಕೂಲವಾಗುತ್ತದೆ’ ಎಂದರು.

‘ಈಗಾಗಲೇ ಹೊನ್ನಾಳಿ ತಾಲ್ಲೂಕಿನ ಸುಂಕದಕಟ್ಟೆ ಐಟಿಐ ಮತ್ತು ಪಾಲಿಟೆಕ್ನಿಕ್ ಕಾಲೇಜು, ನ್ಯಾಮತಿಯ ಐಟಿಐ ತರಬೇತಿ ಕೇಂದ್ರ ಹಾಗೂ ನ್ಯಾಮತಿಯ ಸಾರ್ವಜನಿಕ ಸ್ಥಳಗಳಲ್ಲಿ ಪ್ರಾತ್ಯಕ್ಷಿಕೆ ಮೂಲಕ ಜಾಗೃತಿ ಮೂಡಿಸಲಾಗಿದೆ’ ಎಂದರು.

ಗೃಹರಕ್ಷಕ ದಳದ ತಾಲ್ಲೂಕು ಘಟಕದ ಪ್ಲಟೂನ್ ಎಂ.ರಾಘವೇಂದ್ರ, ವಿ.ಕೆ. ಗದ್ದಿಗೆಯ್ಯ, ಎಲ್. ಗಂಗಾನಾಯ್ಕ, ಬಸವರಾಜ ಅಕ್ಕಣ್ಣನವರ, ಕೆ.ಬಿ. ನಿರಂಜನ, ಭೀಮಸೇನ್, ಪ್ರದೀಪ ಬಟಕುರ್ಕಿ, ಎಲ್.ಬಿ. ಆಂಜನೇಯ, ಎಂ. ವಿನಯ್, ಗೌಡೇಶ ಪಾಟೀಲ್, ಆರ್.ಎಸ್. ಶಶಿಕುಮಾರ, ಸಿದ್ದಪ್ಪ ಕತ್ತಿ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260419-43-304963924

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.