ನ್ಯಾಮತಿ:ಪಟ್ಟಣದ ಹಣ್ಣಿನ ವ್ಯಾಪಾರಿಯೊಬ್ಬರು ಮಂಗಳವಾರ ಜಮೀನಿನ ಪೊದೆಯಲ್ಲಿ ಸಿಕ್ಕಿದ್ದ ಮೂರು ನವಿಲುಗಳನ್ನು ಅರಣ್ಯ ಇಲಾಖೆಗೆ ಸುರಕ್ಷಿತವಾಗಿ ಒಪ್ಪಿಸಿದ್ದಾರೆ.

‘ಸ್ಥಳೀಯರು ಪ್ರಾದೇಶಿಕ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಮೂರು ನವಿಲುಗಳನ್ನು ವಶಪಡಿಸಿಕೊಂಡು, ಆರೋಗ್ಯ ತಪಾಸಣೆ ನಡೆಸಲಾಗಿದೆ. ಕಾನೂನು ರೀತಿ ಅವುಗಳ ಮಾಹಿತಿ ದಾಖಲಿಸಿ, ತಾಲ್ಲೂಕಿನ ಮಾದನಬಾವಿ ಅರಣ್ಯ ಪ್ರದೇಶದಲ್ಲಿ ಸುರಕ್ಷಿತವಾಗಿ ಬಿಡಲಾಯಿತು’ ಎಂದು ಹೊನ್ನಾಳಿ ಪ್ರಾದೇಶಿಕ ವಲಯ ಅರಣ್ಯಾಧಿಕಾರಿ ಕಿಶೋರ ಕುಮಾರ ತಿಳಿಸಿದರು.

‘ಅರಣ್ಯ ಇಲಾಖೆಯ ಕಾನೂನಿನ ಅನ್ವಯ ಸಾರ್ವಜನಿಕರು ಯಾವುದೇ ಕಾಡು ಪ್ರಾಣಿಗಳನ್ನು ಮನೆಯಲ್ಲಿ ಸಾಕುವಂತಿಲ್ಲ. ಬಂಧಿಸುವಂತಿಲ್ಲ. ಕಾಡು ಪ್ರಾಣಿಗಳು ಸಿಕ್ಕಾಗ ನೇರವಾಗಿ ಅರಣ್ಯ ಇಲಾಖೆ ಕಚೇರಿಗೆ ತರಬಾರದು’ ಎಂದು ನ್ಯಾಮತಿ ವಿಭಾಗದ ಪ್ರಭಾರ ಉಪವಲಯ ಅರಣ್ಯಾಧಿಕಾರಿ ಎಚ್.ಪಿ.ಆಶಾ ಮನವಿ ಮಾಡಿದರು.

ಪ್ರಭಾರ ಉಪವಲಯ ಅರಣ್ಯಾಧಿಕಾರಿ ಸತೀಶ ಕಣಿವೆ, ಸಿಬ್ಬಂದಿ ಪ್ರವೀಣ, ಸುನೀಲ್, ಮೌನೇಶ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260527-43-976085025

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.