ಜೀನಹಳ್ಳಿ (ನ್ಯಾಮತಿ): ನ್ಯಾಮತಿ ತಾಲ್ಲೂಕು ಜೀನಹಳ್ಳಿ ಗ್ರಾಮದಲ್ಲಿ ಹೊನ್ನಾಳಿಯ ಮೃತ್ಯುಂಜಯ ಶಿವಾಚಾರ್ಯ ಪ್ರಥಮದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ವಾರ್ಷಿಕ ಶಿಬಿರ ಸಮಾರೋಪ ಸಮಾರಂಭ ಶುಕ್ರವಾರ ನಡೆಯಿತು.

‘ಸದೃಢ ಸಮಾಜಕ್ಕಾಗಿ ಸದೃಢ ಯುವಕರು-ಸ್ವಚ್ಛ ಭಾರತ’ ಘೋಷವಾಕ್ಯದಡಿ ನಡೆದ ಶಿಬಿರದಲ್ಲಿ ಒಂದು ವಾರ ಗ್ರಾಮದ ರಸ್ತೆ, ಚರಂಡಿ, ಶಾಲಾ ಆವರಣ, ದೇವಸ್ಥಾನಗಳ ಆವರಣ ಸ್ವಚ್ಛತೆ ಮಾಡಲಾಯಿತು. ಜನರಲ್ಲಿ ಆರೋಗ್ಯ, ಪರಿಸರ ಸಂರಕ್ಷಣೆ ಹಾಗೂ ಅಗ್ನಿ ಅವಘಡ ಬಗ್ಗೆ ಜಾಗೃತಿ ಮೂಡಿಸಲಾಯಿತು. ವೈವಿಧ್ಯಮಯ ಕಾರ್ಯಕ್ರಮಗಳ ಮೂಲಕ ಗ್ರಾಮದಲ್ಲಿ ಅರಿವು ಮೂಡಿಸಿದ್ದಕ್ಕೆ ಗ್ರಾಮದ ಮುಖಂಡ ಆರ್.ಎಸ್.ಪಾಟೀಲ ಶ್ಲಾಘಿಸಿದರು.

ರಾಷ್ಟ್ರೀಯ ಸೇವಾ ಯೋಜನಾ ಘಟಕಾಧಿಕಾರಿಗಳಾದ ಪ್ರಕಾಶ ನರಗಟ್ಟಿ ಮತ್ತು ಕೆ.ನಾಗೇಶ, ಉಪನ್ಯಾಸಕರಾದ ಬಸವರಾಜ, ಕುಮಾರ ನಾಯಕ, ಎ.ಸತೀಶ, ಯುವರಾಜ, ಶಾಂತರಾಜ, ಆಡಳಿತಾತ್ಮಕ ಸಿಬ್ಬಂದಿ ನಯನಾ, ಮಂಜುಳಾ, ಶಿಬಿರಾರ್ಥಿಗಳಾದ ಅನುಷಾ, ಅಂಜಲಿ, ಭಾವನಾ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.