ನ್ಯಾಮತಿ: ಪಟ್ಟಣದಲ್ಲಿ ಪ್ರಯಾಣಿಕರ ಹಿತದೃಷ್ಟಿಯಿಂದ ನಿರ್ಮಾಣ ಮಾಡಿದ್ದ ಬಸ್ ನಿಲ್ದಾಣ ಶಿಥಿಲಾವಸ್ಥೆ ತಲುಪಿ ಭೂತದ ವಾಸಸ್ಥಾನದಂತಾಗಿದ್ದು, ಪಟ್ಟಣ ಪಂಚಾಯಿತಿ ಆಡಳಿತ ವೈಖರಿಗೆ ಸಾಕ್ಷಿಯಾಗಿದೆ.

ಅಂದಾಜು 8 ದಶಕಗಳ ಹಿಂದೆ ಅಂದಿನ ಪರಿಸ್ಥಿತಿಗೆ ವ್ಯವಸ್ಥಿತವಾಗಿ ನಿರ್ಮಾಣವಾದ ಬಸ್ ನಿಲ್ದಾಣದಲ್ಲಿ ಪುರುಷ ಮತ್ತು ಮಹಿಳೆಯರಿಗೆ ಪ್ರತ್ಯೇಕ ವ್ಯವಸ್ಥೆ, ಪಕ್ಕದಲ್ಲಿ ಉಪಾಹಾರ ಮಂದಿರ, ಶೌಚಾಲಯ ವ್ಯವಸ್ಥೆ ಕಲ್ಪಿಸಿದ ಬಸ್ ನಿಲ್ದಾಣವಿತ್ತು. ಅಂದಿನ ಪಟ್ಟಭದ್ರ ಹಿತಾಸಕ್ತಿಗಳಿಂದ ಬಸ್ ನಿಲ್ದಾಣ ವಿಷಯ ನ್ಯಾಯಾಲಯ ಮೆಟ್ಟಿಲು ಹತ್ತಿದ್ದು ಈಗ ಹಳೆಯ ವಿಷಯ.

ಶಿವಮೊಗ್ಗ– ಹೊನ್ನಾಳಿ– ಶಿಕಾರಿಪುರ ಮಾರ್ಗವಾಗಿ ಪ್ರತಿದಿನ ನೂರಾರು ಖಾಸಗಿ ಬಸ್ಗಳು ಇಲ್ಲಿ ಸಂಚರಿಸುತ್ತವೆ. ಈಗ ಒಂದೆರಡು ಸರ್ಕಾರಿ ಬಸ್ಗಳು ಬರುತ್ತಿವೆ. ಪ್ರಯಾಣಿಕರ ಅನುಕೂಲಕ್ಕಾಗಿ ಪಟ್ಟಣದ ಒಳಗಡೆ ಮಹಾಂತೇಶ್ವರ ಕಲ್ಯಾಣ ಮಂದಿರದಲ್ಲಿ ಬಸ್ ನಿಲುಗಡೆಗೆ ಅಂದಿನ ಹಿರಿಯರು ಅವಕಾಶ ಕಲ್ಪಿಸಿಕೊಟ್ಟಿದ್ದು ಇಂದಿನವರೆಗೂ ಮುಂದುವರಿದಿದೆ.

ಐದಾರು ದಶಕಗಳಿಂದ ಬಸ್ ನಿಲ್ದಾಣದೊಳಗೆ ಬಸ್ಗಳು ಹೋಗದೆ ಇರುವುದರಿಂದ ಕ್ರಮೇಣ ಬಸ್ ನಿಲ್ದಾಣ ಹಾಳು ಬಿದ್ದು, ಅನೈತಿಕ ಚಟುವಟಿಕೆಗಳ, ಜೂಜುಕೋರರ ತಾಣವಾಗಿದೆ. ರಾತ್ರಿ ವೇಳೆ ಈ ಭಾಗದ ಜನರು ಹಾವುಗಳನ್ನು ಕಂಡು ಬೆಚ್ಚಿಬಿದ್ದಿರುವ ಘಟನೆಗಳು ನಡೆದಿವೆ. ಇತ್ತೀಚಿನ ವರ್ಷಗಳಲ್ಲಿ ಬಸ್ ನಿಲ್ದಾಣದ ಬಾಗಿಲು, ಕಿಟಕಿ, ಜಾಲರಿಗಳು ಕಣ್ಮರೆಯಾಗಿವೆ. ಕಟ್ಟಡದ ಎತ್ತರಕ್ಕೆ ಗಿಡಗಂಟಿಗಳು ಬೆಳೆದು ಭಯ ಹುಟ್ಟಿಸುತ್ತಿದೆ ಎಂದು ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸುತ್ತಾರೆ.

ಅಂದಿನ ಸ್ಥಳೀಯ ಸಂಸ್ಥೆಯಿಂದ ಇಂದಿನ ಪಟ್ಟಣ ಪಂಚಾಯಿತಿವರೆಗೂ ಆಡಳಿತ ನಡೆಸಿದ ಜನಪ್ರತಿನಿಧಿಗಳಾಗಲೀ, ಶಾಸಕರಾಗಲೀ ತಮ್ಮ ರಾಜಕೀಯ ಇಚ್ಚಾಶಕ್ತಿ ತೋರದೆ ಸರ್ಕಾರದ ಕಟ್ಟಡವನ್ನು ಶಿಥಿಲಾವಸ್ಥೆಗೆ ತಲುಪಿಸಿದ್ದಾರೆ. ಮಳೆ– ಗಾಳಿಯಿಂದ ಬಸ್ ನಿಲ್ದಾಣದ ಕಟ್ಟಡ ಬಿದ್ದು ಅನಾಹುತವಾಗುವ ಮುನ್ನ ಪಟ್ಟಣ ಪಂಚಾಯಿತಿ ಗಮನ ಹರಿಸಿ ಶಿಥಿಲ ಕಟ್ಟಡವನ್ನು ತೆರವುಗೊಳಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸುತ್ತಾರೆ.

ಈ ಬಸ್ ನಿಲ್ದಾಣಕ್ಕೆ ವಾಲ್ಮೀಕಿ ಸಮುದಾಯದ ಮುಖಂಡರು ವೀರ ಮದಕರಿನಾಯಕ ಬಸ್ ನಿಲ್ದಾಣ ಎಂದು ನಾಮಕರಣ ಮಾಡಿದ್ದು, ಅವರಾದರೂ ಬಸ್ ನಿಲ್ದಾಣದ ಬಗ್ಗೆ ಕಾಳಜಿ ವಹಿಸಿ ಅಭಿವೃದ್ಧಿಗೆ ಕ್ರಮ ಕೈಗೊಂಡು ಕಾಯಕಲ್ಪ ನೀಡಬೇಕು ಎಂದು ನಾಗರಿಕರು ಆಗ್ರಹಿಸುತ್ತಾರೆ.

ಪಟ್ಟಣ ಪಂಚಾಯಿತಿಯಿಂದ ಪ್ರತಿವರ್ಷ ನಿಲ್ದಾಣ ಶುಲ್ಕವನ್ನು ಹರಾಜಿನ ಮೂಲಕ ವಸೂಲಿ ಮಾಡುತ್ತಾರೆ. ಪ್ರಯಾಣಿಕರ ಬಗ್ಗೆ ಕಾಳಜಿ ವಹಿಸುತ್ತಿಲ್ಲ ಎಂಬುದು ಖಾಸಗಿ ಬಸ್ ಮಾಲೀಕರ ದೂರಾಗಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260407-43-1672769707

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.