ಗುರುವಾರ , ಆಗಸ್ಟ್ 11, 2022
26 °C

ಬಂಗಾರದ ಆಸೆ ತೋರಿಸಿ ದರೋಡೆ: ಒಬ್ಬನ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹರಪನಹಳ್ಳಿ: ತಾಲ್ಲೂಕಿನ ಶಿರಗಾನಹಳ್ಳಿ ಕ್ರಾಸ್ ಬಳಿ ಶುಕ್ರವಾರ ರಟ್ಟಿಹಳ್ಳಿಯ ಚಂದ್ರಪ್ಪ ಮತ್ತು ಅವರ ಸ್ನೇಹಿತ ಹೊನ್ನಾಳಿಯ ಕಾಶೀನಾಥ್ ಅವರಿಗೆ ಕಡಿಮೆ ಬೆಲೆಗೆ ಬಂಗಾರ ನೀಡುವುದಾಗಿ ನಂಬಿಸಿ ತಮ್ಮ ಬಳಿಗೆ ಕರೆಯಿಸಿಕೊಂಡ ಅಪರಿಚಿತರು, ಹಲ್ಲೆ ಮಾಡಿ ₹ 2,75,000 ನಗದು, 2 ಮೊಬೈಲ್‍ಗಳನ್ನು ದರೋಡೆ ಮಾಡಿ ಪರಾರಿಯಾಗಿದ್ದಾರೆ.

ಆರೋಪಿಗಳಲ್ಲಿ ಮಂಜಪ್ಪನನ್ನು ಪೊಲೀಸರು ಶನಿವಾರ ಬಂಧಿಸಿದ್ದಾರೆ. ಲಕ್ಷ್ಮಣ, ರಾಮಪ್ಪ ಸೇರಿ 6 ಮಂದಿ ವಿರುದ್ಧ ದೂರು ದಾಖಲಾಗಿದೆ.

ಘಟನೆಯ ವಿವರ: ಚಂದ್ರಪ್ಪ ಅವರಿಗೆ ಕರೆ ಮಾಡಿದ ಆರೋಪಿಗಳು ₹ 2.75 ಲಕ್ಷ ಕೊಟ್ಟರೆ, ಕಾಲು ಕೆ.ಜಿ. ಬಂಗಾರ ನೀಡುವುದಾಗಿ ನಂಬಿಸಿದ್ದಾರೆ. ಅವರ ಮಾತನ್ನು ನಂಬಿದ ಚಂದ್ರಪ್ಪ, ಸ್ನೇಹಿತ ಕಾಶೀನಾಥ ಅವರನ್ನು ಕರೆದುಕೊಂಡು ತೆಲಿಗಿ ಗ್ರಾಮಕ್ಕೆ ಬಂದಿದ್ದರು. ಅಲ್ಲಿಂದ ಆರೋಪಿಗಳು ಶಿರಗಾನಹಳ್ಳಿ ಕ್ರಾಸ್‍ಗೆ ಕರೆಸಿಕೊಂಡು ಬಂಗಾರ ತೋರಿಸಿ, ಹಣ ಕೊಡುವಂತೆ ಕೇಳಿದರು. ಬಂಗಾರ ಅಸಲಿ ಅಲ್ಲ ಎಂದು ಆಕ್ಷೇಪಿಸಿದಾಗ, ಆರೋಪಿಗಳು ಚಾಕು, ಕಟ್ಟಿಗೆಗಳಿಂದ ಹಲ್ಲೆ ಮಾಡಿ, ಚಂದ್ರಪ್ಪ ಹಾಗೂ ಕಾಶಿನಾಥ್‌ ಅವರ ಬಳಿಯಿದ್ದ ₹ 2.75 ಲಕ್ಷ ನಗದು ಹಾಗೂ ಎರಡು ಮೊಬೈಲ್‍ಗಳನ್ನು ಕಸಿದುಕೊಂಡು ಪರಾರಿಯಾದರು ಎಂದು ದೂರಿನಲ್ಲಿ ತಿಳಿಸಲಾಗಿದೆ. ಹಲುವಾಗಲು ಪೊಲೀಸರು ತನಿಖೆ
ಕೈಗೊಂಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು