ಮಂಗಳವಾರ, ಜನವರಿ 26, 2021
20 °C

ಒಬ್ಬರು ತಳಮಟ್ಟದ ಸ್ವಾಮೀಜಿ, ಮತ್ತೊಬ್ಬರು ಹೈಟೆಕ್: ಶಿವಶಂಕರ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದಾವಣಗೆರೆ: ಪಂಚಮಸಾಲಿ ಸಮುದಾಯದ ಎರಡು ಪೀಠದ ಸ್ವಾಮೀಜಿಗಳಲ್ಲಿ ಒಬ್ಬರು ಸಮುದಾಯಕ್ಕಾಗಿ ಉಪವಾಸ,  ಪಾದಯಾತ್ರೆ ಮಾಡುತ್ತಾ ತಳಮಟ್ಟದ ಸ್ವಾಮೀಜಿ ಆಗಿದ್ದರೆ, ಮತ್ತೊಬ್ಬರು ಫೇಸ್ಬುಕ್, ವಾಟ್ಸ್ ಅ್ಯಪ್ ಗಳ ಮೂಲಕ ಪ್ರಚಾರ ಮಾಡುತ್ತಾ ಹೈಟೆಕ್ ಸ್ವಾಮೀಜಿ ಆಗಿದ್ದಾರೆ ಎಂದು ಮಾಜಿ ಶಾಸಕ ಎಚ್.ಎಸ್. ಶಿವಶಂಕರ್ ಹೇಳಿದರು.

ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ಹೋರಾಟದ ಬಗ್ಗೆ ಶಿವಶಂಕರ್ ಮನೆಯಲ್ಲಿ ಬುಧವಾರ ಕೂಡಲ ಸಂಗಮದ ಜಯಮೃತ್ಯುಂಜಯ ಸ್ವಾಮೀಜಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾಜಿ ಶಾಸಕರು ಹರಿಹರ ಪೀಠದ ಸ್ವಾಮೀಜಿ ಬಗ್ಗೆ ಪರೋಕ್ಷವಾಗಿ ಟೀಕಿಸಿದರು.

ತಳಮಟ್ಟದ ಹೋರಾಟವೂ ಬೇಕು. ಸಾಮಾಜಿಕ ಮಾಧ್ಯಮಗಳ ಮೂಲಕದ ಪ್ರಚಾರವೂ ಬೇಕು ಎಂದು ತಿಳಿಸಿದರು.
ಸಮುದಾಯಕ್ಜೆ ಒಂದೇ ಪೀಠ ಇರಬೇಕು ಎಂದು ಹಿಂದೆ ತೀರ್ಮಾನವಾಗಿತ್ತು. ಪಟ್ಟಭದ್ರ ಹಿತಾಸಕ್ತಿಗಾಗಿ ಕೆಲವರು ಮತ್ತೊಂದು ಪೀಠ ಆರಂಭಿಸಿದರು. ಸಮಾಜದಲ್ಲಿ ಯಾವುದೇ ಗೊಂದಲವಿಲ್ಲ. ಈಗ ನಡೆಯುತ್ತಿರುವ ಹೋರಾಟ ಪೀಠಕ್ಕಾಗಿ ಅಲ್ಲ. ಸಮುದಾಯದ ಅಭಿವೃದ್ಧಿಗಾಗಿ ಎಂದು ಮೀಸಲಾತಿ ಹೋರಾಟ ಸಮಿತಿ ಅಧ್ಯಕ್ಷ ವಿಜಯಾನಂದ ಕಾಶಂಪುರ ಹೇಳಿದರು.

ಹರಿಹರದ ಸ್ವಾಮೀಜಿ ವಿಡಿಯೊ ಮೂಲಕ ಬೆಂಬಲ ಸೂಚಿಸಿದ್ದಾರೆ ಎಂದು ಬಸವಜಯ ಮೃತ್ಯುಂಜಯ ಸ್ವಾಮೀಜಿ ತಿಳಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು