ಹರಿಹರ (ದಾವಣಗೆರೆ): ಇಲ್ಲಿನ ವೀರಶೈವ ಲಿಂಗಾಯತ ಪಂಚಮಸಾಲಿ ಗುರುಪೀಠದಲ್ಲಿ ಟ್ರಸ್ಟ್ನ ಲೆಕ್ಕಪತ್ರ ಮಂಡನೆಗೆ ವಚನಾನಂದ ಸ್ವಾಮೀಜಿ ಪರ ಭಕ್ತರು ವಿರೋಧ ವ್ಯಕ್ತಪಡಿಸಿದರು. ಇದರಿಂದ ಲೆಕ್ಕಪತ್ರ ಮಂಡನೆ ಸಭೆ ಗೊಂದಲದ ಗೂಡಾಯಿತು.

ಮಠದ ಆವರಣದಲ್ಲಿ ಏರ್ಪಡಿಸಿದ ಸಮಾರಂಭಕ್ಕೆ ಭಕ್ತರು ಆಗಮಿಸಿದ್ದಾರೆ. ಸಭೆ ಆರಂಭವಾದ ಕೆಲ ಹೊತ್ತಿನ ಬಳಿಕ ಸಭೆಯಿಂದ ಹೊರ ನಡೆದ ಕೆಲವರು ಲೆಕ್ಕಪತ್ರ ಮಂಡನೆ ಸಭೆಗೆ ಬಹಿಷ್ಕಾರ ಹಾಕಿದರು.

ಬಳಿಕ ಸ್ವಾಮೀಜಿ ಪರ ಗುಂಪು ವೇದಿಕೆ ಸಮೀಪ ಧಾವಿಸಿ ಟ್ರಸ್ಟ್ ಸದಸ್ಯ ಎಚ್.ಎಸ್.ನಾಗರಾಜ್ ಅವರ ಭಾಷಣಕ್ಕೆ ಅಡ್ಡಿಪಡಿಸಿತು. ಇದರಿಂದ ಸಭೆಯಲ್ಲಿ ಕೋಲಾಹಲ ಸೃಷ್ಟಿ ಆಯಿತು. ವೇದಿಕೆಗೆ ನುಗ್ಗುವ ಪ್ರಯತ್ನವನ್ನು ಪೊಲೀಸರು ವಿಫಲಗೊಳಿಸಿದರು. ಟ್ರಸ್ಟ್ ಪರವಾಗಿರುವವರು ‘ಹರ ಹರ ಮಹಾದೇವ’, ‘ಜೈ ಪಂಚಮಸಾಲಿ’ ಘೋಷಣೆ ಮೊಳಗಿಸಿದರು.

ಮಧ್ಯೆ ಪ್ರವೇಶಿಸಿದ ಪೊಲೀಸರು ಸ್ವಾಮೀಜಿ ಪರ ಬಣದ ಭಕ್ತರನ್ನು ದೇಗುಲದ ಸಮೀಪ ತಡೆದರು. ಗೊಂದಲ ಉಂಟಾಗದಂತೆ ಎಚ್ಚರಿಕೆ ನೀಡಿದರು. ಕೆಲ ಹೊತ್ತಿನ ಬಳಿಕ ಸ್ವಾಮೀಜಿ ಪರ ಭಕ್ತರು ಗುರುಪೀಠದ ಕಟ್ಟಡದ ಕಡೆ ಸಾಗಿದರು. ಬಳಿಕ ಟ್ರಸ್ಟ್ ಪ್ರಧಾನ ಧರ್ಮದರ್ಶಿ ಬಿ.ಸಿ. ಉಮಾಪತಿ ಅವರು ಲೆಕ್ಕಪತ್ರ ಮಂಡನೆ ಮಾಡುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.