ದಾವಣಗೆರೆ: ವೀರಶೈವ ಲಿಂಗಾಯತ ಪಂಚಮಸಾಲಿ ಗುರುಪೀಠದ ಲೆಕ್ಕವನ್ನು ಬಹಿರಂಗ ಸಭೆಯಲ್ಲಿ ಮಂಡಿಸಲು ಗುರುಪೀಠದ ಟ್ರಸ್ಟ್ ನಿರ್ಧರಿಸಿದೆ. ಏ.27ರಂದು ಬೆಳಿಗ್ಗೆ 11ಕ್ಕೆ ಮಠದಲ್ಲಿ ಏರ್ಪಡಿಸಿದ ಸಭೆಗೆ ಬರುವಂತೆ ಭಕ್ತರು ಹಾಗೂ ವಚನಾನಂದ ಸ್ವಾಮೀಜಿ ಅವರಿಗೆ ಆಹ್ವಾನ ನೀಡಿದೆ.

‘2008ರಿಂದ 2025ರವರೆಗಿನ ಲೆಕ್ಕ ಟ್ರಸ್ಟ್ ಬಳಿ ಇದೆ. ಪ್ರತಿ ವರ್ಷ ಆದಾಯ ತೆರಿಗೆ ಇಲಾಖೆಗೂ ಸಲ್ಲಿಸಲಾಗಿದೆ. ಟ್ರಸ್ಟ್ವೊಂದು ಸಾರ್ವಜನಿಕವಾಗಿ ಲೆಕ್ಕಕೊಡುವ ಅಗತ್ಯವಿಲ್ಲ. ಭಕ್ತರ ಕೋರಿಕೆ ಹಾಗೂ ಅನುಮಾನಗಳನ್ನು ನಿವಾರಿಸುವ ಉದ್ದೇಶದಿಂದ ಈ ತೀರ್ಮಾನ ಕೈಗೊಳ್ಳಲಾಗಿದೆ’ ಎಂದು ವೀರಶೈವ ಲಿಂಗಾಯತ ಪಂಚಮಸಾಲಿ ಗುರುಪೀಠದ ಟ್ರಸ್ಟ್ನ ಪ್ರಧಾನ ಧರ್ಮದರ್ಶಿ ಬಿ.ಸಿ. ಉಮಾಪತಿ ಅವರು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ವಚನಾನಂದ ಸ್ವಾಮೀಜಿ ಸಮುದಾಯದ ಅಪೇಕ್ಷೆಗೆ ತಕ್ಕಂತೆ ನಡೆದುಕೊಂಡಿಲ್ಲ. ಭಕ್ತರ ಭಾವನೆಗಳಿಗೆ ಧಕ್ಕೆಯುಂಟು ಮಾಡಿದ್ದರಿಂದ ಅವರನ್ನು ಪದಚ್ಯುತಿಗೊಳಿಸಿ ಗೌರವಯುತವಾಗಿ ಕಳುಹಿಸಿಕೊಡಲು ನಿರ್ಧರಿಸಿದ್ದೆವು. ಆದರೆ, ಅವರು ಲೆಕ್ಕೆಕೊಡುವಂತೆ ಕೆಲವನ್ನು ಎತ್ತಿಕಟ್ಟಿ ದಿಕ್ಕುತಪ್ಪಿಸುವ ಪ್ರಯತ್ನ ಮಾಡಿದ್ದಾರೆ. ಅಂದಿನ ಸಭೆಗೆ ಸ್ವಾಮೀಜಿ ಬರುವಂತೆ ಕೋರಿಕೊಳ್ಳುತ್ತೇವೆ’ ಎಂದರು.

‘ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜದ ರಾಜ್ಯ ಘಟಕಕ್ಕೆ ಟ್ರಸ್ಟ್ ಪ್ರತಿ ವರ್ಷ ಲೆಕ್ಕ ಕೊಟ್ಟಿದೆ. ಏ.11ರಂದು ಸಮಾಜದ ಪ್ರಮುಖರ ಸಮ್ಮುಖದಲ್ಲಿ ಮಠದಲ್ಲಿ ಲೆಕ್ಕ ಮಂಡಿಸಲಾಗಿದೆ. ಈ ಸಭೆಯಲ್ಲಿ ಹಾಜರಿದ್ದ ವಚನಾನಂದ ಸ್ವಾಮೀಜಿಗೆ ಪ್ರತಿಯೊಂದನ್ನು ಮನವರಿಕೆ ಮಾಡಿಕೊಡಲಾಗಿದೆ. ಪದಚ್ಯುತಿಯ ಬಳಿಕ ‘ಲೆಕ್ಕ ಕೊಡಿ’ ಚಳವಳಿಗೆ ಕುಮ್ಮಕ್ಕು ನೀಡಿ ಗೊಂದಲ ಸೃಷ್ಟಿಸಿದ್ದಾರೆ’ ಎಂದು ಬೇಸರ ವ್ಯಕ್ತಪಡಿಸಿದರು.

‘ಮೂಲತಃ ಉದ್ಯಮಿಯಾದ ನಾನು ರಾಜಕೀಯ ಪ್ರವೇಶಿಸುವ ಅಪೇಕ್ಷೆ ಇಟ್ಟುಕೊಂಡಿದ್ದೆ. ಮಠದ ಜವಾಬ್ದಾರಿಯನ್ನು ಸಮುದಾಯ ನನ್ನ ಹೆಗಲಿಗೆ ಹಾಕಿದ ಬಳಿಕ ರಾಜಕಾರಣದಿಂದ ಅಂತರ ಕಾಯ್ದುಕೊಂಡಿದ್ದೇನೆ. ಮಠ ಅಥವಾ ಗುರುಪೀಠದಿಂದ ದುಡ್ಡು ಮಾಡುವ ಉದ್ದೇಶ ನನಗೆ ಇಲ್ಲ. ವೀರಶೈವ ಪಂಚಮಸಾಲಿ ಸಮುದಾಯದ ಏಳಿಗೆಗೆ ಪ್ರಾಮಾಣಿಕವಾಗಿ ದುಡಿಯುತ್ತಿದ್ದೇನೆ’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯೆ ನೀಡಿದರು.

‘ವಚನಾನಂದ ಸ್ವಾಮೀಜಿ ಅವರಿಗೆ ಭಕ್ತಿಗಿಂತ ತೋರಿಕೆಯ ಧಾರ್ಮಿಕ ಶ್ರದ್ಧೆ ಹೆಚ್ಚು. ತಿಂಗಳುಗಟ್ಟಲೆ ವಿದೇಶಿ ಪ್ರವಾಸಕ್ಕೆ ತೆರಳುತ್ತಿದ್ದ ಅವರು ಗುರುಪೀಠವನ್ನು ಅತಿಥಿಗೃಹವಾಗಿ ಪರಿಗಣಿಸಿದ್ದರು. ಮಠಕ್ಕೆ ಭೇಟಿ ನೀಡಿದ ಭಕ್ತರಿಗೆ ದರ್ಶನ ನೀಡುತ್ತಿರಲಿಲ್ಲ. ಅವರ ಜ್ಞಾನ, ವಾಕ್ಚಾತುರ್ಯ, ಯೋಗ ಪರಿಣಿತಿಯ ಬಗ್ಗೆ ಈಗಲೂ ಗೌರವವಿದೆ’ ಎಂದರು.

ಪದಚ್ಯುತ ವಚನಾನಂದ ಸ್ವಾಮೀಜಿ ಮಠದಿಂದ ಗೌರವಯುತವಾಗಿ ಹೊರನಡೆಯಬೇಕು. ಹೊರಹೋಗದಿದ್ದರೆ ಟ್ರಸ್ಟ್ ಮುಂದಿನ ತೀರ್ಮಾನ ಕೈಗೊಳ್ಳುತ್ತದೆ
ಬಿ.ಸಿ. ಉಮಾಪತಿ, ಪ್ರಧಾನ ಧರ್ಮದರ್ಶಿ ವೀರಶೈವ ಲಿಂಗಾಯತ ಪಂಚಮಸಾಲಿ ಗುರುಪೀಠದ ಟ್ರಸ್ಟ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.