ಗುರುವಾರ , ಜೂನ್ 17, 2021
22 °C
ರಸ್ತೆಯ ಮೇಲೆ ಕತ್ತು ಚಾಚಿ ಮಲಗಿದ್ದ ಕರುಗಳು

ಕರುಗಳ ಸಾವು: ದೇವರ ಹಸುವಿನ ದುಃಖಕ್ಕೆ ಮರುಗಿದ ಗ್ರಾಮಸ್ಥರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಂತೇಬೆನ್ನೂರು: ಇಲ್ಲಿಯ ಬೀರೂರು-ಸಮ್ಮಸಗಿ ರಾಜ್ಯ ಹೆದ್ದಾರಿಯಲ್ಲಿ ಪಿಳ್ಳಮ್ಮ ದೇಗುಲದ ಬಳಿ ಬುಧವಾರ ರಾತ್ರಿ ವಾಹನವೊಂದು ರಸ್ತೆಯಲ್ಲಿ ಮಲಗಿದ್ದ ಮೂರು ದೇವರ ಹಸುವಿನ ಕರುಗಳ ಮೇಲೆ ಹರಿದು ಹೋದ ಪರಿಣಾಮ, ಅವು ಸ್ಥಳದಲ್ಲಿಯೇ ಮೃತಪಟ್ಟವು.

ಈಶ್ವರ ದೇವರ ಹಸು ತನ್ನ ಮೂರು ಕರುಗಳೊಂದಿಗೆ ಸದಾ ಗ್ರಾಮದಲ್ಲಿ ಓಡಾಡಿಕೊಂಡಿತ್ತು. ಈ ಹಸು ಹಾಗೂ ಕರುಗಳು ಎಲ್ಲರ ಪ್ರೀತಿಗೆ ಪಾತ್ರರಾಗಿದ್ದವು. ಒಂದು ವರ್ಷದಿಂದ ಮೂರು ವರ್ಷ ವಯೋಮಾನದ ಕರುಗಳು ಹಸಿರು ಮೇಯ್ದು ಮನೆಯಂಗಳ, ರಸ್ತೆಯಲ್ಲಿ ಮಲಗುತ್ತಿದ್ದವು. ಬುಧವಾರ ರಾತ್ರಿ 9ರ ವೇಳೆಗೆ ರಸ್ತೆಯಲ್ಲಿ ಕತ್ತು ಚಾಚಿ ಮಲಗಿದ್ದ ಮೂರು ಕರುಗಳ ಕತ್ತು ಹಾಗೂ ಮುಖದ ಮೇಲೆ ವಾಹನ ಹರಿದಿದೆ. ಈ ಮೂಕ ಜೀವಗಳ ಸಾವು ಎಲ್ಲರ ಹೃದಯ ಮಿಡಿಯಿತು.

ಕಂದಮ್ಮಗಳ ಸಾವಿನಿಂದ ಕಂಗಾಲಾಗಿದ್ದ ತಾಯಿ ಹಸು ಅತ್ತಿಂದಿತ್ತ ಓಡಾಡುತ್ತ ಅಂಬಾ... ಎಂದು ಕೂಗುತ್ತ ಅರಸುತ್ತಿದ್ದ ದೃಶ್ಯ ಎಲ್ಲರೂ ಕಣ್ಣೀರುಗರೆಯುವಂತೆ ಮಾಡಿತು. ದೇವರ ಹಸು ಕರುಗಳನ್ನು ಬಿಟ್ಟು ಕದಲದೇ ಬೆಳಗಿನವರೆಗೂ ರೋದಿಸುತ್ತಿತ್ತು.

ಮೃತ ಹಸುಕರುಗಳಿಗೆ ಗ್ರಾಮಸ್ಥರು ಹೂವಿನ ಹಾರ ಅರ್ಪಿಸಿದರು. ಟ್ರ್ಯಾಕ್ಟರ್ ಮೂಲಕ ಮೆರವಣಿಗೆಯಲ್ಲಿ ಸಾಗಿಸಿದರು. ಈಶ್ವರ ದೇಗುಲದ ಬಳಿ ಗುರುವಾರ ವಿಧಿವಿಧಾನಗಳ ಮೂಲಕ ಅಂತ್ಯಕ್ರಿಯೆ ನಡೆಸಲಾಯಿತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು