ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾವಣಗೆರೆ: ಶ್ವಾನಗಳ ಸೌಂದರ್ಯಕ್ಕೆ ಮನಸೋತ ಜನರು

Last Updated 4 ಅಕ್ಟೋಬರ್ 2021, 4:39 IST
ಅಕ್ಷರ ಗಾತ್ರ

ದಾವಣಗೆರೆ: ಇಲ್ಲಿನ ಯುಬಿಡಿಟಿ ಮೈದಾನದಲ್ಲಿ ನಾಯಿಗಳದ್ದೇ ಕಾರುಬಾರು. ದಾವಣಗೆರೆ ಪೆಟ್‌ ಲವರ್ಸ್‌ ಅಸೋಸಿಯೇಶನ್‌ ಭಾನುವಾರ ಹಮ್ಮಿಕೊಂಡಿದ್ದ ಶ್ವಾನ ಪ್ರದರ್ಶನವು ನಾಯಿಪ್ರೇಮಿಗಳಿಗೆ ರಸದೌತಣ ನೀಡಿತು.

ಐದನೇ ವರ್ಷದ ರಾಜ್ಯಮಟ್ಟದ ಈ ಶ್ವಾನ ಪ್ರದರ್ಶನದಲ್ಲಿ 35 ತಳಿಗಳ 400ಕ್ಕೂ ಅಧಿನ ನಾಯಿಗಳು ಭಾಗವಹಿಸಿದ್ದರು. ಒಂದಕ್ಕಿಂತ ಒಂದು ಭಿನ್ನವಾದ ನಾಯಿಗಳನ್ನು ಜನರು ಕಂಡು ಕಣ್ತುಂಬಿಕೊಂಡರು.

ಪಮೋರಿಯನ್‌, ಗೋಲ್ಡನ್‌ ರಿಟ್ರೈವರ್‌, ಲ್ಯಾಬ್ರಡಾರ್‌ ರಿಟ್ರೈವರ್‌ಗಳು ಆಕರ್ಷಿಸಿದವು. ಕಣ್ಣು, ಮೂಗು ಕಾಣಿಸದಷ್ಟು ದಟ್ಟ ಕೂದಲು ಹೊಂದಿರುವ ಲ್ಯಾಬ್‌ಸೋ ನಾಯಿ ವಿಶಿಷ್ಟ ಸೆಳೆತಕ್ಕೆ ಒಳಗಾಯಿತು. ಪಗ್‌, ಗ್ರೇಟ್‌ ಡೇನ್‌, ರಾಟ್‌ವೀಲರ್‌, ಚೌಚೌ ತಳಿಯ ನಾಯಿಗಳು ಮೆರುಗು ನೀಡಿದವು.

ವಿದೇಶಿ ತಳಿಯ ಶ್ವಾನಗಳ ನಡುವೆ ದೇಸಿ ತಳಿಯ ಮುಧೋಳ ನಾಯಿ ವಿಶಿಷ್ಠ ಗತ್ತು ತೋರಿತು. ಸೈನ್ಯದಲ್ಲಿ ಕೂಡ ಬಳಸುವ ಈ ನಾಯಿಗಳು ಜನರ ಕಣ್ಣಲ್ಲಿ ಪ್ರೀತಿ ಉಕ್ಕಿಸಿದವು.

ಅಮೆರಿಕನ್‌ ಕಾಕರ್‌ ಸ್ಪಾನಿಯಲ್‌, ಪೋಡಲ್‌, ಲಾಸಾ ಆಪ್ಸಪ, ಶಿವ್ ಟ್ರೋಟ್ಸಿಲ್‌, ಫ್ರಂಚ್‌ ಬುಲ್‌ಡಾಗ್‌, ಸಾಲುಕಿ, ವಿಪ್ಪೆಟ್‌, ಚಿಪ್ಪಿಪಾರಯ್‌, ಬೀಗಲ್‌, ಸೈಬೀರಿಯನ್‌ ಹಸ್ಕಿ ಹೀಗೆ ನಾನಾ ತಳಿಯ ಶ್ವಾನಗಳು ಆಕರ್ಷಿಸಿದವು. ವಿವಿಧ ಜಿಲ್ಲೆಗಳ ಪ್ರಾಣಿಪ್ರಿಯರು ಸ್ಪರ್ಧೆಯಲ್ಲಿ ‍ಶ್ವಾನಗಳನ್ನು ಪ್ರದರ್ಶಿಸಿದರು. ಜತೆಗೆ ಸ್ಥಳೀಯ ನಾಯಿಗಳೂ (ಬೀದಿ ನಾಯಿ ತಳಿ) ಸ್ಪರ್ಧೆಯಲ್ಲಿದ್ದವು

ಇದರ ಜತೆಗೆ ಇದೇ ಮೊದಲ ಬಾರಿ ಬೆಕ್ಕಿನ ಪ್ರದರ್ಶನ ಮತ್ತು ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿತ್ತು. ತುಂಬು ಕೂದಲಿನ ಬೆಕ್ಕುಗಳು ಪ್ರದರ್ಶನದ ಆಕರ್ಷಣೆಯನ್ನು ಹೆಚ್ಚಿಸಿದವು. ಇದರ ಜತೆಗೆ ಕುದುರೆ ಸವಾರಿ ಕೂಡ ಗಮನ ಸೆಳೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT