ಶುಕ್ರವಾರ, ಫೆಬ್ರವರಿ 3, 2023
23 °C

ವ್ಯಕ್ತಿತ್ವ ವಿಕಸನಗೊಳಿಸುವ ಜೆಸಿಐ: ಲತಾ ಮಲ್ಲಿಕಾರ್ಜುನ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ವ್ಯಕ್ತಿತ್ವ ವಿಕಸನಗೊಳಿಸುವಲ್ಲಿ ಜೆಸಿಐ ಮಾದರಿ ಸಂಘಟನೆ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ.ಪಿ. ಲತಾ ಮಲ್ಲಿಕಾರ್ಜುನ್ ಹೇಳಿದರು.

ಹರಪನಹಳ್ಳಿ ಜೆಸಿಐ ಸ್ಫೂರ್ತಿ ತಂಡ‌‌ವು ನಗರದ ಬಂಟರ ಭವನದಲ್ಲಿ ಶನಿವಾರ ಆಯೋಜಿಸಿದ್ದ ಜೂನಿಯರ್ ಚೇಂಬರ್ ಇಂಟರ್ ನ್ಯಾಷನಲ್ ( ಜೆಸಿಐ) ವಲಯ - 24 ರ ಸ್ಫೂರ್ತಿ ಸಮ್ಮೇಳನವನ್ನು  ಉದ್ಘಾಟಿಸಿ ಅವರು ಮಾತನಾಡಿದರು.

ಭಾಷಣ ಕಲೆಯಿಂದ ಹಿಡಿದು ಎಲ್ಲ ನಾಯಕತ್ವದ ತರಬೇತಿಗಳನ್ನು ನೀಡುವ ಮೂಲಕ ಉತ್ತಮ ಸಮಾಜ ನಿರ್ಮಾಣದಲ್ಲಿ ಜೆಸಿಐ ಪ್ರಮುಖ ಪಾತ್ರ ವಹಿಸುತ್ತಿದೆ ಎಂದರು.

ಶಾಸಕ ಶಾಮನೂರು ಶಿವಶಂಕರಪ್ಪ ಮಾತನಾಡಿದರು.‌ ಶಿವಮೊಗ್ಗದ ಶಾರದಾ‌ ಶೇಷಗಿರಿಗೌಡ ಅವರಿಗೆ ಕಮಲಪತ್ರ ಅವಾರ್ಡ್ ನೀಡಲಾಯಿತು.

ವಲಯ ಅಧ್ಯಕ್ಷ ಪಿ.ಶಿವಕುಮಾರ ನಾಯ್ಕ ಅಧ್ಯಕ್ಷತೆ ವಹಿಸಿದ್ದರು. ಚುನಾವಣೆ ಅಧಿಕಾರಿ ರೇಖೇಶ್‌ ಶರ್ಮ, ನಾಮಿನೆಷನ್ ಸಮಿತಿ ಚೇರ್ಮನ್ ವಿನಾಯಕ ಅರೆಮನೆ, ಎಸ್ಎಂಎ ಅಧ್ಯಕ್ಷೆ ಎಂ.ಎಸ್. ಅಲ್ಕಾನಂದ, ಕಾಂಗ್ರೆಸ್ ಮುಖಂಡ ದೀನೆಶ್ ಶೆಟ್ಟಿ ಇತರರಿದ್ದರು.‌

ಸಮ್ಮೇಳನ ಉದ್ಘಾಟನೆಗೂ ಮುನ್ನ ನಡೆದ ವಲಯದ ಸಾಮಾನ್ಯ ಸಭೆ‌‌ಯಲ್ಲಿ ಹಲವು ವಿಷಯಗಳ ಬಗ್ಗೆ ಚರ್ಚೆ ನಡೆಯಿತು.

ಕನಸುಗಳು ಸಾಕಾರಗೊಳ್ಳಲು, ಯಶಸ್ಸಿನ ಮೆಟ್ಟಿಲು ತಲುಪಲು ಸಾಧಕರ ಸಾಧನೆಗಳನ್ನು ಅನುಕರಿಸಬೇಕು. ಸದೃಢ ಸಮಾಜ ನಿರ್ಮಾಣ ಒಬ್ಬರಿಂದ ಸಾಧ್ಯವಿಲ್ಲ. ಎಲ್ಲರೂ ಒಗ್ಗಟ್ಟಿನಿಂದ ಶ್ರಮಿಸಬೇಕು. ಸಾಲು ಮರದ ತಿಮ್ಮಕ್ಕ, ಅಬ್ದುಕ್ ಕಲಾಂ, ಹರೇಕಲ್ ಹಾಜಬ್ಬ, ಎಂ.ಎಸ್.ಸುಬ್ಬಲಕ್ಷ್ಮಿ ರಂತಹ ಸಾಧನೆಗಳು, ಯಶಸ್ವಿ ಮತ್ತು ಆದರ್ಶ ಪ್ರಜೆಗಳಾಗಲು ಸ್ಪೂರ್ತಿ ನೀಡುತ್ತವೆ ಎಂದು ರಾಷ್ಟ್ರೀಯ ತರಬೇತುದಾರ ಕೆ. ರಾಜೇಂದ್ರ ಭಟ್ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು