ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಕೊಲೇಟ್ ಕೊಡಿಸಿ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ: ಅಪರಾಧಿಗೆ 30 ವರ್ಷ ಶಿಕ್ಷೆ

Last Updated 21 ಏಪ್ರಿಲ್ 2023, 14:29 IST
ಅಕ್ಷರ ಗಾತ್ರ

ದಾವಣಗೆರೆ: ಚಾಕೊಲೇಟ್ ಆಸೆ ತೋರಿಸಿ ಬಾಲಕಿಗೆ ಲೈಂಗಿಕ ದೌರ್ಜನ್ಯ ಎಸಗಿದ ಅಪರಾಧಿಗೆ ಇಲ್ಲಿನ ಮಕ್ಕಳ ಸ್ನೇಹಿ ಹಾಗೂ ಪೋಕ್ಸೊ ತ್ವರಿತಗತಿ ವಿಶೇಷ ನ್ಯಾಯಾಲಯ 30 ವರ್ಷ ಶಿಕ್ಷೆ ಹಾಗೂ ₹ 70,000 ದಂಡ ವಿಧಿಸಿ ತೀರ್ಪು ನೀಡಿದೆ.

ಹರಿಹರ ತಾಲ್ಲೂಕು ವ್ಯಾಪ್ತಿಯ ತಿಪ್ಪೇಶ ಶಿಕ್ಷೆಗೆ ಗುರಿಯಾದ ಅಪರಾಧಿ. 8 ವರ್ಷದ ಬಾಲಕಿಗೆ ಚಾಕೊಲೇಟ್, ಐಸ್‌ಕ್ರೀಂ ಹಾಗೂ ಕಬ್ಬಿನ ಹಾಲನ್ನು ಕೊಡಿಸಿ ಆರಂಭದಲ್ಲಿ ಪರಿಚಯ ಮಾಡಿಕೊಂಡ ಈತ, 2019ರ ಏಪ್ರಿಲ್ 19ರಂದು ಸಂಜೆ ಬಾಲಕಿ ನಿರ್ಮಾಣ ಹಂತದಲ್ಲಿದ್ದ ಮನೆಯ ಬಳಿ ಬಂದು ಆಟವಾಡುತ್ತಿದ್ದಾಗ ತಿಪ್ಪೇಶ್ ಚಾಕೊಲೇಟ್ ಕೊಡಿಸಿ ಲೈಂಗಿದ ದೌರ್ಜನ್ಯವೆಸಗಿದ್ದಾನೆ.

ಈ ಕುರಿತು ಹರಿಹರ ನಗರ ತನಿಖಾಧಿಕಾರಿಯಾಗಿದ್ದ ಎಂ.ಕೆ. ಗಂಗಲ್ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.

ವಿಚಾರಣೆ ಆಲಿಸಿದ ಮಕ್ಕಳ ಸ್ನೇಹಿ ಮತ್ತು ಪೋಕ್ಸೊ ತ್ವರಿತಗತಿ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ಶ್ರೀಪಾದ ಎನ್.ಅವರು ಶುಕ್ರವಾರ ತೀರ್ಪು ಪ್ರಕಟಿಸಿದರು. ಸಂತ್ರಸ್ತೆಗೆ ₹6.50 ಲಕ್ಷ ಪರಿಹಾರ ಕೊಡಿಸುವಂತೆ ಆದೇಶಿಸಿದ್ದಾರೆ.

ಸರ್ಕಾರದ ಪರವಾಗಿ ಅಭಿಯೋಜಕ ಜಯಪ್ಪ ಕೆ.ಜಿ ವಾದ ಮಂಡಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT