ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಲಿತೊಟ್ಲು ವಿಷಾಹಾರ ಸೇವನೆ: ಬಾಲಕ ಗಂಭೀರ

Last Updated 21 ಡಿಸೆಂಬರ್ 2018, 5:23 IST
ಅಕ್ಷರ ಗಾತ್ರ

ದಾವಣಗೆರೆ: ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲ್ಲೂಕಿನ ಹುಲಿತೊಟ್ಲು ಗ್ರಾಮದಲ್ಲಿ ವಿಷಾಹಾರ ಸೇವನೆಯಿಂದ ಅಸ್ವಸ್ಥಗೊಂಡಿದ್ದವರಲ್ಲಿ ಬಾಲಕ ಮುದ್ದರಾಜು (11) ಸ್ಥಿತಿ ಗಂಭೀರವಾಗಿದೆ.

ಇಲ್ಲಿನ ಎಸ್.ಎಸ್ ಹೈಟೆಕ್ ಆಸ್ಪತ್ರೆಯಲ್ಲಿ ಮುದ್ದರಾಜು, ಅಜ್ಜಯ್ಯ (13), ಸುಮಾ(15) ಅವರಿಗೆ ಚಿಕಿತ್ಸೆ ಕೊಡಿಸಲಾಗುತ್ತಿದೆ. ಅಜ್ಜಯ್ಯ ಮತ್ತು ಸುಮಾ ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ ಎಂದು ತಿಳಿದುಬಂದಿದೆ.

ಮುಸುರೆಗೆ ಹಾಕುಲು ಕೊಟ್ಟ ಹಿಟ್ಟಿನಿಂದ ಮುದ್ದೆ:ಚಿತ್ತಯ್ಯ ಅವರಕುಟುಂಬದವರುಹುಲಿತೊಟ್ಲು ಗ್ರಾಮದಲ್ಲಿ ಎಲ್ಲರೊಂದಿಗೂ ಚೆನ್ನಾಗಿದ್ದರು. ನೆರಮನೆಯ ಸಂಬಂಧಿಕರು ಮುಸುರೆಗೆ ಹಾಕಲು ಜೋಳದ ಹಿಟ್ಟು ಕೊಟ್ಟಿದ್ದರು. ಅದನ್ನು ವ್ಯರ್ಥ ಮಾಡುವುದು ಏಕೆ ಎಂದು, ಹೇಮಲತಾ ಅವರು ಮುದ್ದೆ ತಯಾರಿಸಿ ಮನೆಯವರಿಗೆ ಬಡಿಸಿದ್ದಾರೆ ಎಂದು ಗ್ರಾಮಸ್ಥ ರುದ್ರಪ್ಪ ತಿಳಿಸಿದರು.

ಮುದ್ದೆ ತಿಂದು ತಟ್ಟೆಯ ಮುಂದೆಯೇ ಮನೆಯವರೆಲ್ಲಾ ವಾಂತಿ ಮಾಡಿಕೊಂಡು ನರಳಾಡುತ್ತಿದ್ದರು. ತಕ್ಷಣ ಅವರನೆಲ್ಲಾ ಎರಡು ಆಂಬುಲೆನ್ಸ್‌ಗಳಲ್ಲಿ ಆಸ್ಪತ್ರೆಗೆ ಸಾಗಿಸಿದೆವು. ಆದರೂ ಎಲ್ಲರನ್ನೂ ಉಳಿಸಿಕೊಳ್ಳಲು ಆಗಲಿಲ್ಲ ಎಂದು ಗ್ರಾಮಸ್ಥ ರುದ್ರಪ್ಪ ಕಣ್ಣೀರು ಹಾಕಿದರು.

ತಕ್ಷಣ ಸಿಗದ ಚಿಕಿತ್ಸೆ- ಆಸ್ಪತ್ರೆಗಳಿಗೆ ಅಲೆದಾಟ:ಹಿರಿಯೂರು ಮತ್ತು ಚಿತ್ರದುರ್ಗ ಹಾಗೂ ದಾವಣಗೆರೆಯ ಸರ್ಕಾರಿ ಆಸ್ಪತ್ರೆಗಳಲ್ಲಿ ಸರಿಯಾದ ಚಿಕಿತ್ಸೆ ತ್ವರಿತವಾಗಿ ಸಿಗಲಿಲ್ಲ. ವೈದ್ಯರು, ದಾದಿಯರು ಸರಿಯಾಗಿ ಸ್ಪಂದಿಸಲಿಲ್ಲ. ಹೀಗಾಗಿ ಸಾವಿನ ಸಂಖ್ಯೆ ಹೆಚ್ಚಾಯಿತು. ಅಸ್ವಸ್ಥರನ್ನು ಆಸ್ಪತ್ರೆಯಿಂದ ಆಸ್ಪತ್ರೆಗೆ ಸಾಗಿಸುವಲ್ಲಿಯೇ ಸಮಯ ವ್ಯರ್ಥವಾಯಿತು. ಸರಿಯಾದ ಚಿಕಿತ್ಸೆ ಸಿಕ್ಕಿದ್ದರೆ ಎಲ್ಲರನ್ನೂ ಉಳಿಸಿಕೊಳ್ಳಬಹುದಾಗಿತ್ತು ಎಂದು ಸಂಬಂಧಿ ಮನೋಹರ ಆಕ್ರೋಶ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT