ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಣ್ಣೆದೋಸೆ ನಗರಿ: ಗೆದ್ದು ಬೀಗಿದ ಬಿಜೆಪಿಯ ಸಿದ್ದೇಶ್ವರ; ಸೋತು ಕಂಗಾಲದ ’ಕೈ’ಪಡೆ

Last Updated 23 ಮೇ 2019, 10:43 IST
ಅಕ್ಷರ ಗಾತ್ರ

ದಾವಣಗೆರೆ:ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಜಿ.ಎಂ. ಸಿದ್ದೇಶ್ವರ ಅವರು ಗೆಲುವು ಸಾಧಿಸಿದ್ದಾರೆ. ಅಧಿಕೃತ ಘೋಷಣೆ ಬಾಕಿ ಇದೆ.

ಕೊನೆಯ ಸುತ್ತಿನ ಅಂತ್ಯಕ್ಕೆ ಬಿಜೆಪಿ ಅಭ್ಯರ್ಥಿ ಸಿದ್ದೇಶ್ವರ ಒಟ್ಟು 1,69,177 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಇದಕ್ಕೆ ಇನ್ನೂ ಅಂಚೆ ಮತಗಳ ಸೆರ್ಪಡೆಯಾಗಬೇಕಾಗಿದೆ.

ಚುನಾವಣಾಧಿಕಾರಿ ಅಧಿಕೃತವಾಗಿ ಘೋಷಣೆ ಮಾಡುವುದೊಂದು ಬಾಕಿ ಇದೆ. ಈಗ ವಿ.ವಿ.ಪ್ಯಾಟ್‌ ಚೀಟಿ ಎಣಿಕೆ ಪ್ರಕ್ರಿಯೆ ಆರಂಭಗೊಂಡಿದೆ.

ಕ್ಷೇತ್ರದಲ್ಲಿ ಕಾಂಗ್ರೆಸ್‌ ಟಿಕೆಟ್‌ ಹಂಚಿಕೆ ವೇಳೆ ಸಾಕಷ್ಟು ಗೊಂದಲ ಉಂಟಾಗಿತ್ತು. ಆರಂಭದಲ್ಲಿ ಪಕ್ಷ ಹಿರಿಯ ಮುಖಂಡ ಶಾಸಕಶಾಮನೂರು ಶಿವಶಂಕರಪ್ಪ ಅವರಿಗೆ ಟಿಕೆಟ್‌ ಘೋಷಿಸಿತ್ತು. ಅವರು ವಯಸ್ಸಿನ ಕಾರಣ ನೀಡಿ ಸ್ಪರ್ಧೆ ಮಾಡುವುದಿಲ್ಲ ಎಂದಿದ್ದರು. ಅವರಿಗೆ ಯಸ್ಸಿನ ಕಾರಣ ನೀಡಿ ಸಚಿವ ಸ್ಥಾನ ನೀಡದೇ ಇರುವುದಕ್ಕೆ ಈ ಹೇಳಿಕೆ ನೀಡಿದ್ದರು.

ಇದಾದ ಬಳಿಕ ಅವರ ಪುತ್ತ ಎಸ್‌.ಎಸ್‌.ಮಲ್ಲಿಕಾರ್ಜುನ್‌ಗೆ ಟಿಕೆಟ್‌ ನೀಡುತ್ತೇವೆ ಅವರು ಸ್ಪರ್ಧಿಸಲಿ ಎಂದು ಪಕ್ಷ ಹೇಳಿತು. ಅದಕ್ಕೂ ಅವರು ಹಿಂದೇಟು ಹಾಕುತ್ತಾ ನಿರ್ಧಾರವನ್ನು ಇಂದು, ನಾಳೆ ತಿಳಿಸುವೆ ಎನ್ನುತ್ತಾ ಕಾಲ ತಳ್ಳಿದರು. ಕೊನೆಗೆ ಕುರುಬ ಸಮಾಜದ ಮಂಜಪ್ಪ ಅವರಿಗೆ ಟಿಕೆಟ್‌ ಕೊಡಿಸಿದರು.

ಕೊನೆ ಕ್ಷಣದಲ್ಲಿ ಟಿಕೆಟ್‌ ಸಿಕ್ಕರೂ ಪ್ರಚಾರ ನಡೆಸಿದ ಮಂಜಪ್ಪ, ಕ್ಷೇತ್ರದಲ್ಲಿ ಇನ್ನಿಲ್ಲದ ಬೆವರಿಳಿಸಿದ್ದಾರೆ. ಆದರೆ, ಗೆಲುವು ಬಿಜೆಪಿಗೆ ಒಲಿದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT