ಹೊನ್ನಾಳಿ: ‘ಮಹಿಳೆಯರು ಪ್ರತಿ ದಿನ ಯೋಗ, ಧ್ಯಾನ ಮಾಡುವ ಮೂಲಕ ಶಾರೀರಿಕ ಹಾಗೂ ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು’ ಎಂದು ಪತಂಜಲಿ ಯೋಗ ಸಮಿತಿಯ ಅಧ್ಯಕ್ಷ ಪ್ರಕಾಶ್ ಹೆಬ್ಬಾರ್ ಹೇಳಿದರು.

ಭಾನುವಾರ ಪಟ್ಟಣದಲ್ಲಿ ಹಮ್ಮಿಕೊಂಡಿದ್ದ ಮಹಿಳಾ ದಿನಾಚರಣೆ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಯೋಗದಿಂದ ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳಬಹುದು. ಮನಸ್ಸು ಪ್ರಫುಲ್ಲತೆಯಿಂದ, ಉಲ್ಲಾಸದಿಂದ ಮತ್ತು ಚಟುವಟಿಕೆಯಿಂದ ಇರಲು ಯೋಗ ಮತ್ತು ಧ್ಯಾನದಿಂದ ಮಾತ್ರ ಸಾಧ್ಯ’ ಎಂದು ಹೇಳಿದರು.

ಸಂಸ್ಥೆಯ ಉಪಾಧ್ಯಕ್ಷರಾದ ಸುಜಾತಾ ಬೆನ್ನೂರುಮಠ ಅವರು ಸನ್ಮಾನ ಸ್ವೀಕರಿಸಿ ಮಾತನಾಡಿ, ‘ಒಂದು ಕುಟುಂಬ ಮತ್ತು ಸಮಾಜ ಸರಿಯಾದ ದಾರಿಯಲ್ಲಿ ಸಾಗಬೇಕಾದರೆ ಮಹಿಳೆಯರ ಪಾತ್ರ ಬಹಳ ಮುಖ್ಯ. ಮಗುವಿದ್ದಾಗಲೇ ಅದರ ಚಲನವಲನ ಗಮನಿಸಿ ಸರಿಯಾದ ದಾರಿಯಲ್ಲಿ ಸಾಗುವಂತೆ ಮಾರ್ಗದರ್ಶನ ಮಾಡುವವಳೇ ಹೆಣ್ಣು’ ಎಂದು ಹೇಳಿದರು.

ಪತಂಜಲಿ ಸಂಸ್ಥೆಯ ಕಾರ್ಯದರ್ಶಿ ರುದ್ರೇಶ್, ಅಂಬಿಕಾ ಹೆಬ್ಬಾರ್, ಪಂಕಜಾ, ಅರುಣ್ಕುಮಾರ್, ಶೀಲಾ, ಸುಧಾ ಕವಿತ್, ವಿದ್ಯಾ ಡಿಂಪಲ್, ರಾಘವೇಂದ್ರ ವೈಶ್ಯ, ಸುರೇಶ್ ಕುಂಬಾರ್, ದಿಲೀಪ್, ಹರೀಶ್, ಚಂದ್ರಪ್ಪ, ಬಸವರಾಜಪ್ಪ, ಸಿಂಗಪ್ಪ, ಮಂಜುನಾಥ್, ರವಿಕುಮಾರ್ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.