ಬುಧವಾರ, ನವೆಂಬರ್ 20, 2019
22 °C

ರಾಮ ಜನ್ಮಭೂಮಿ ಕುರಿತ ಸುಪ್ರೀಂ ಕೋರ್ಟ್‌ ತೀರ್ಪಿಗೆ ಮುತಾಲಿಕ್‌ ಸ್ವಾಗತ

Published:
Updated:
Prajavani

ದಾವಣಗೆರೆ: ‘ಅಯೋಧ್ಯೆ ರಾಮ ಜನ್ಮಭೂಮಿ ಕುರಿತ ಸುಪ್ರೀಂ ಕೋರ್ಟ್ ತೀರ್ಪನ್ನು ಶ್ರೀರಾಮ ಸೇನೆ ಸ್ವಾಗತಿಸುತ್ತದೆ’ ಎಂದು ಸಂಘಟನೆಯ ಸಂಸ್ಥಾಪಕ ಪ್ರಮೋದ ಮುತಾಲಿಕ್ ಹೇಳಿದರು.

ನಗರದ ಸಿದ್ದವೀರಪ್ಪ ಬಡಾವಣೆಯಲ್ಲಿರುವ ಸಂಬಂಧಿಕರ ಮನೆಗೆ ಬಂದಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ‘ರಾಮ ಜನ್ಮಭೂಮಿ ಹೋರಾಟ 500 ವರ್ಷಗಳಿಗಿಂತಲೂ ಹಳೆಯದ್ದಾಗಿದೆ. ಸುಪ್ರೀಂ ಕೋರ್ಟ್ ತೀರ್ಪನ್ನು ಸಂಪೂರ್ಣವಾಗಿ ಸ್ವಾಗತಿಸುತ್ತೇವೆ’ ಎಂದು ಹೇಳಿದರು.

ಇದನ್ನೂ ಓದಿ: ಅಯೋಧ್ಯೆ ತೀರ್ಪು: ಸುಪ್ರೀಂ ಕೋರ್ಟ್‌ ಆದೇಶದ ಮುಖ್ಯಾಂಶಗಳು

‘ವಿಶ್ವ ಹಿಂದೂ ಪರಿಷತ್ತಿನ ರಾಮ ಜನ್ಮಭೂಮಿ ನ್ಯಾಸ ಮಂಚ್ ಟ್ರಸ್ಟ್‌ ಇದೆ. ಈಗಾಗಲೇ ಮಂದಿರ ನಿರ್ಮಿಸಲು ಕಂಬಗಳು, ಗೋಡೆಗಳು, ಚಾವಣಿ ಸಿದ್ಧವಾಗಿದೆ. ಆರು ತಿಂಗಳ ಒಳಗೆ ದೇವಸ್ಥಾನ ನಿರ್ಮಾಣ ಮಾಡಬೇಕು. ಹೀಗಾಗಿ ಮಂದಿರ ನಿರ್ಮಾಣಕ್ಕೆ ಶಿಲಾನ್ಯಾಸ ಮಾಡಲು ಕೇಂದ್ರ ಸರ್ಕಾರವು ಜಾಗವನ್ನು ಕೂಡಲೇ ಟ್ರಸ್ಟ್‌ಗೆ ಒಪ್ಪಿಸಬೇಕು’ ಎಂದು ಮುತಾಲಿಕ್ ಒತ್ತಾಯಿಸಿದರು.

ಮುತಾಲಿಕ್‌ ಬಂದಿರುವ ವಿಚಾರ ತಿಳಿಯುತ್ತಿದ್ದಂತೆ ಪೊಲೀಸ್‌ ಅಧಿಕಾರಿಗಳು ಸ್ಥಳಕ್ಕೆ ಬಂದು ಜಮಾವಣೆಗೊಂಡರು. ಬಹಿರಂಗವಾಗಿ ಯಾವುದೇ ರೀತಿಯ ಸಂಭ್ರಮಾಚರಣೆ ಮಾಡದಂತೆ ಪೊಲೀಸರು ಮನವಿ ಮಾಡಿದರು.

ಇದನ್ನೂ ಓದಿ: ಅಯೋಧ್ಯೆ ತೀರ್ಪು: ವಿವಾದಿತ ಭೂಮಿ ರಾಮಮಂದಿರಕ್ಕೆ, ಮಸೀದಿಗೆ ಪರ್ಯಾಯ ಜಮೀನು

ಪ್ರತಿಕ್ರಿಯಿಸಿ (+)