ಚುನಾವಣೆಗೆ ಸಜ್ಜಾಗಲು ಮಂಜಪ್ಪ ಸಲಹೆ

7
ಜಿಲ್ಲಾ ಕಾಂಗ್ರೆಸ್‌ ಸಮಿತಿ ನೂತನ ಪದಾಧಿಕಾರಿಗಳ ಸಭೆ

ಚುನಾವಣೆಗೆ ಸಜ್ಜಾಗಲು ಮಂಜಪ್ಪ ಸಲಹೆ

Published:
Updated:
Deccan Herald

ದಾವಣಗೆರೆ: ಮುಂಬರುವ ನಗರ ಸ್ಥಳೀಯ ಸಂಸ್ಥೆಗಳ ಹಾಗೂ ಲೋಕಸಭಾ ಚುನಾವಣೆಗೆ ಕಾರ್ಯಕರ್ತರು ಸಜ್ಜಾಗಬೇಕು ಎಂದು ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಎಚ್.ಬಿ. ಮಂಜಪ್ಪ ಸಲಹೆ ನೀಡಿದರು.

ಪಕ್ಷದ ಕಚೇರಿಯಲ್ಲಿ ಸೋಮವಾರ ನಡೆದ ಜಿಲ್ಲಾ ಕಾಂಗ್ರೆಸ್ ಸಮಿತಿಯ ನೂತನ ಪದಾಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಮುಂಬರುವ ಸ್ಥಳೀಯ ಸಂಸ್ಥೆಗಳ ಹಾಗೂ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿಗಳನ್ನು ಗೆಲ್ಲಿಸಲು ಶ್ರಮಿಸಬೇಕು ಎಂದರು.

ಕಾಂಗ್ರೆಸ್ ಪಕ್ಷ ಕೇಂದ್ರದಲ್ಲಿ ಅಧಿಕಾರದಲ್ಲಿದ್ದಾಗ ಹಲವು ಜನರಪ ಕಾರ್ಯಕ್ರಮಗಳನ್ನು ರೂಪಿಸಿದೆ. ರಾಜ್ಯದಲ್ಲೂ ಕಳೆದ ಕಾಂಗ್ರೆಸ್ ಸರ್ಕಾರ ಹಲವು ಜನಪರ ಯೋಜನೆಗಳನ್ನು ಜಾರಿಗೊಳಿಸಿದೆ. ಇದನ್ನು ಜನರಿಗೆ ತಿಳಿಸಿಕೊಡಬೇಕು. ಅನೇಕ ಜನಪರ ಯೋಜನೆಗಳನ್ನು ಜಾರಿಗೆ ತಂದಿರುವುದನ್ನು ಜನರಿಗೆ ತಿಳಿಸಿಕೊಡಬೇಕು. ಜೊತೆಗೆ ಕೇಂದ್ರದ ಬಿಜೆಪಿ ಸರ್ಕಾರದ ಜನವಿರೋಧಿ ನೀತಿಗಳನ್ನು ಮನವರಿಕೆ ಮಾಡಿಕೊಡಬೇಕು. ಪಕ್ಷವನ್ನು ಸಂಘಟಿಸಲು ಒತ್ತು ನೀಡಬೇಕು ಎಂದು ಮನವಿ ಮಾಡಿದರು.

ಇದೇ ತಿಂಗಳು ಕ್ವಿಟ್‌ ಇಂಡಿಯಾ ಚಳವಳಿ ಕಾರ್ಯಕ್ರಮ, ರಾಜೀವ್‌ ಗಾಂಧಿ ಸದ್ಭಾವನ ಯಾತ್ರೆ ದಾವಣಗೆರೆಗೆ ಆಗಮಿಸಲಿದೆ. ಸ್ವಾತಂತ್ರ್ಯೋತ್ಸವ ಕಾರ್ಯಕ್ರಮಗಳಲ್ಲಿ ಪದಾಧಿಕಾರಿಗಳು ಕಾರ್ಯಕರ್ತರನ್ನು ಒಗ್ಗೂಡಿಸುವ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.

ನೂತನ ಪದಾಧಿಕಾರಿಗಳ ಹೆಸರನ್ನು ಮಂಜಪ್ಪ ಪ್ರಕಟಿಸಿದರು.

ಜಿಲ್ಲಾ ಕಾಂಗ್ರೆಸ್ ಸಮಿತಿ ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ.ಶೆಟ್ಟಿ, ನಗರ ಸ್ಥಳೀಯ ಸಂಸ್ಥೆಗಳು ಹಾಗೂ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ತಾಲ್ಲೂಕುಗಳಿಗೆ ವೀಕ್ಷಕರನ್ನು ನೇಮಿಸಲಾಗಿದೆ ಎಂದು ಎಂದು ತಿಳಿಸಿದರು.

ಕ್ರಮಕ್ಕೆ ಒತ್ತಾಯ: ಮಾಜಿ ಸಚಿವ ಎಸ್‌.ಎಸ್‌. ಮಲ್ಲಿಕಾರ್ಜುನ ಅವರ ಸೋಲಿಗೆ ಕಾರಣರಾದ ಪಕ್ಷದ ಮುಖಂಡರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಸಭೆಯಲ್ಲಿ ಕಾರ್ಯಕರ್ತರೊಬ್ಬರು ಒತ್ತಾಯಿಸಿದರು. ಇದಕ್ಕೆ ಧ್ವನಿಗೂಡಿಸಿದ ಅಯೂಬ್‌ ಪೈಲ್ವಾನ್‌, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವ ಮೂಲಕ ಪಕ್ಷ ವಿರೋಧಿ ಚಟುವಟಿಕೆ ನಡೆಸಿದವರಿಗೆ ಸೂಕ್ತ ಸಂದೇಶ ರವಾನಿಸಬೇಕು ಎಂದು ಸಲಹೆ ನೀಡಿದರು.

ಪಾಲಿಕೆ ಸದಸ್ಯ ಎಂ. ಹಾಲೇಶ್, ಅಮಾನುಲ್ಲಾ, ತುರ್ಚಘಟ್ಟದ ಬಸವರಾಜಪ್ಪ, ನಾಸೀರ್ ಅಹ್ಮದ್, ಬಿ.ಎಚ್.ವೀರಭದ್ರಪ್ಪ, ಶಶಿಕಲಾ ಮಾತನಾಡಿದರು. ಸೈಯದ್‌ ಖಾಲಿದ್ ಅಹ್ಮದ್, ಕೆ.ಜಿ. ಶಿವಕುಮಾರ್, ಎಸ್.ಮಲ್ಲಿಕಾರ್ಜುನ್‌, ವರದರಾಜಪ್ಪ, ಉಪ ಮೇಯರ್‌ ಕೆ. ಚಮನ್ ಸಾಬ್, ಶಾಂತಮ್ಮ ದಿಳ್ಳೆಪ್ಪ ಹಾಜರಿದ್ದರು.

ವೀಕ್ಷಕರ ವಿವರ:  

ಹರಿಹರ: ದಿನೇಶ್‌ ಕೆ. ಶೆಟ್ಟಿ, ಪಿ. ರಾಜಕುಮಾರ್, ಅಯೂಬ್ ಪೈಲ್ವಾನ್; ಜಗಳೂರು: ಶಾಮನೂರು ಟಿ. ಬಸವರಾಜ್, ಎಂ. ಹಾಲೇಶ್, ನಾಸೀರ್ ಅಹಮದ್‌; ಹೊನ್ನಾಳಿ: ಕೆ.ಜಿ. ಶಿವಕುಮಾರ್, ಖಾಲಿದ್ ಅಹ್ಮದ್, ಎಸ್. ಮಲ್ಲಿಕಾರ್ಜುನ್‌, ಬಿ. ವೀರಣ್ಣ; ಚನ್ನಗಿರಿ: ಕೆ.ಎಸ್. ಬಸವಂತ್, ಮಾಲತೇಶ್ ರಾವ್ ಜಾಧವ್, ಎ. ನಾಗರಾಜ್, ಬಿ.ಎಚ್. ವೀರಭದ್ರಪ್ಪ; ಹರಪನಹಳ್ಳಿ: ಹರಿಹರದ ರೇವಣಸಿದ್ದಪ್ಪ, ದಿನೇಶ್ ಕೆ.ಶೆಟ್ಟಿ, ಅಯೂಬ್ ಪೈಲ್ವಾನ್‌.

ಜಿಲ್ಲಾ ಕಾಂಗ್ರೆಸ್‌ಗೆ ನೂತನ ಪದಾಧಿಕಾರಿಗಳು

ಜಿಲ್ಲಾ ಕಾಂಗ್ರೆಸ್‌ ಸಮಿತಿಗೆ 79 ಸದಸ್ಯರಿರುವ ನೂತನ ಪದಾಧಿಕಾರಿಗಳನ್ನು ನೇಮಕ ಮಾಡಲಾಗಿದೆ.

ಎಚ್.ಬಿ. ಮಂಜಪ್ಪ ಅಧ್ಯಕ್ಷರಾಗಿದ್ದು, 8 ಸದಸ್ಯರನ್ನು ಉಪಾಧ್ಯಕ್ಷರು, ಐವರನ್ನು ಪ್ರಧಾನ ಕಾರ್ಯದರ್ಶಿ, ಒಬ್ಬ ಖಜಾಂಚಿ, 17 ಸದಸ್ಯರನ್ನು ಕಾರ್ಯದರ್ಶಿ ಹಾಗೂ 47 ಸದಸ್ಯರನ್ನು ಕಾರ್ಯಕಾರಿ ಸಮಿತಿಯ ಪದಾಧಿಕಾರಿಗಳನ್ನಾಗಿ ಮಾಡಲಾಗಿದೆ.

ಉಪಾಧ್ಯಕ್ಷರು: ಅಮಾನುಲ್ಲಾ, ಶಾಮನೂರು ಟಿ. ಬಸವರಾಜ್, ಎಂ. ಹಾಲೇಶ್, ಬಿ. ವೀರಣ್ಣ, ನಾಸೀರ್ ಅಹ್ಮದ್, ತುರ್ಚಘಟ್ಟದ ಬಸವರಾಜಪ್ಪ, ವರದರಾಜಪ್ಪ ಗೌಡ್ರು, ಮಾಲತೇಶ್ ರಾವ್ ಜಾಧವ್.

ಪ್ರಧಾನ ಕಾರ್ಯದರ್ಶಿ: ದಿನೇಶ್ ಕೆ. ಶೆಟ್ಟಿ, ಕರಿಬಸವನಗೌಡ್ರು, ಎಸ್. ಮಲ್ಲಿಕಾರ್ಜುನ್‌, ಪಿ. ರಾಜಕುಮಾರ್, ಕೆ.ಜಿ. ಶಿವಕುಮಾರ್.

ಕಾರ್ಯದರ್ಶಿಗಳು: ಎ. ನಾಗರಾಜ್, ಜಿ. ಮಂಜುನಾಥ್ ಪಾಟೀಲ್, ರೇವಣಸಿದ್ದಪ್ಪ, ಮರಿಯೋಜಿರಾವ್, ಎ.ಡಿ. ಕೃಷ್ಣಮೂರ್ತಿ, ಶೇಖರಪ್ಪ, ನಲ್ಲೂರು ರಾಘವೇಂದ್ರ, ಆರ್. ನಾಗಪ್ಪ, ಅನಿಲ್, ರಹಮತ್, ಲೋಕ್ಯಾನಾಯ್ಕ, ಮಂಜುಳಾ, ಆರ್.ಎಚ್. ನಾಗಭೂಷಣ್, ಎಚ್. ಜಯಣ್ಣ, ನಂಜ್ಯಾನಾಯ್ಕ, ಡಿ.ಆರ್. ಅನಿಲ್ ಕುಮಾರ್, ಹಬೀಬ್.

ಖಜಾಂಚಿ: ಎಂ.ಬಿ. ಮಹ್ಮದ್ ರೋಷನ್ ಅಬಿ

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !