ಆಸ್ತಿ ವಿಚಾರ: ಪುತ್ರಿಯಿಂದಲೇ ತಂದೆಯ ಹತ್ಯೆ

ಸೋಮವಾರ, ಜೂನ್ 17, 2019
28 °C

ಆಸ್ತಿ ವಿಚಾರ: ಪುತ್ರಿಯಿಂದಲೇ ತಂದೆಯ ಹತ್ಯೆ

Published:
Updated:

ಹೊನ್ನಾಳಿ: ತಾಲ್ಲೂಕಿನ ಕೋಟೆ ಮಲ್ಲೂರಿನಲ್ಲಿ ಆಸ್ತಿ ಹಂಚಿಕೆ ವಿಚಾರವಾಗಿ ತಂದೆ ಮತ್ತು ಮಗಳ ನಡುವೆ ಗಲಾಟೆ ನಡೆದು ಮಗಳೇ ತಂದೆಯನ್ನು ಕೊಲೆ ಮಾಡಿದ್ದಾಳೆ.

ಕೋಟೆಮಲ್ಲೂರಿನ ನಿಂಗಪ್ಪ (85) ಕೊಲೆಯಾದ ವ್ಯಕ್ತಿ. ಈತನ ಪುತ್ರಿ ಗಿರಿಜಮ್ಮ (60) ಕೊಲೆ ಆರೋಪಿ. ಮೇ 5ರಂದು ಆಸ್ತಿ ವಿಚಾರವಾಗಿ ಗಲಾಟೆ ಮಾಡಿದ್ದಾರೆ. ಪರಿಸ್ಥಿತಿ ವಿಕೋಪ ಹೋಗಿದ್ದು, ಆಕೆ ಕಲ್ಲಿನಿಂದ ತಂದೆಯ ಮೇಲೆ ಹಲ್ಲೆ ನಡೆಸಿದ್ದಾಳೆ.

ಹಲ್ಲೆಗೊಳಗಾದ ನಿಂಗಪ್ಪ ಕೋಮಾಗೆ ಹೋಗಿದ್ದರು. ಚಿಕಿತ್ಸೆಗಾಗಿ ಅವರನ್ನು ಮಂಗಳೂರಿನ ವೆನ್‌ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೇ ನಿಂಗಪ್ಪ ಗುರುವಾರ ಮೃತಪಟ್ಟಿದ್ದಾರೆ. ಆರೋಪಿ ತಲೆ ಮರೆಸಿಕೊಂಡಿದ್ದಾಳೆ. ಕೊಲೆ ಪ್ರಕರಣ ದಾಖಲಿಸಲಾಗಿದೆ ಹೊನ್ನಾಳಿ ಠಾಣೆಯ ಪಿಎಸ್‌ಐ ರಾಘವೇಂದ್ರ ಖಾಂಡಿಕೆ ತಿಳಿಸಿದರು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !