ಸೋಮವಾರ, ಏಪ್ರಿಲ್ 19, 2021
32 °C

ದಾವಣಗೆರೆ: ಹಿಂಸೆಯಿಂದ ಸಾಗಿಸುತ್ತಿದ್ದ ಜಾನುವಾರು ರಕ್ಷಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಸರಕು ಸಾಗಣೆ ವಾಹನಗಳಲ್ಲಿ ನಿಗದಿಪಡಿಸಿದ್ದಕ್ಕಿಂತ ಹೆಚ್ಚು ಜಾನುವಾರು ತುಂಬಿಕೊಂಡು ಹೋಗುತ್ತಿದ್ದ ಆರೋಪದ ಮೇಲೆ ಆರ್‌ಎಂಸಿ ಠಾಣೆ ಪೊಲೀಸರು ಇಬ್ಬರನ್ನು ಬಂಧಿಸಿದ್ದು, ಪ್ರಾಣಿ ಹಿಂಸಾ ನಿಷೇಧ ಕಾಯ್ದೆಯಡಿ ಭಾನುವಾರ ಪ್ರಕರಣ ದಾಖಲಿಸಿದ್ದಾರೆ.

ರಾಣೆಬೆನ್ನೂರಿನ ಜಾನುವಾರು ಸಂತೆಯಲ್ಲಿ ಒಂದು ಎಮ್ಮೆ ಹಾಗೂ 17 ಹಸುಗಳನ್ನು ಖರೀದಿಸಿದ ಆರೋಪಿಗಳಿಬ್ಬರು ಪರ್ಮಿಟ್ ರಹಿತವಾಗಿ ಮತ್ತು ನಿಗದಿಗಿಂತಲೂ ಹೆಚ್ಚಿನ ಜಾನುವಾರನ್ನು ಹಿಂಸಿಸಿ ಕರೆದೊಯ್ಯುತ್ತಿದ್ದರು. ಆವರಗೆರೆ ಬೈಪಾಸ್ ಮಾರ್ಗವಾಗಿ ನಗರ ಪ್ರವೇಶಿಸುವಾಗ ಪತ್ತೆ ಹಚ್ಚಿದ ಪೊಲೀಸರು ರಾಸುಗಳನ್ನು ರಕ್ಷಿಸಿ ಆವರಗೆರೆಯ ಮಹಾವೀರ ಗೋಶಾಲೆಗೆ ಒಪ್ಪಿಸಿದ್ದಾರೆ.

ಬೆಂಗಳೂರಿನ ಪ್ರಾಣಿ ದಯಾ ಸಂಸ್ಥೆಯವರು ನೀಡಿದ ಮಾಹಿತಿ ಮೇರೆಗೆ ಪೊಲೀಸರು ಕಾರ್ಯಾಚರಣೆ ನಡೆಸಿದ್ದು, ಸ್ಥಳೀಯರಾದ ಎಂ.ಜಿ. ಶ್ರೀಕಾಂತ್, ಹಿಂದೂ ಜಾಗರಾಣ ವೇದಿಕೆಯ ಸತೀಶ್ ಪೂಜಾರಿ ಹಾಗೂ ರಾಕೇಶ್, ವಿಕಾಸ್ ಇಟಗಿ, ಪುರುಷೋತ್ತಮ, ತಿಪ್ಪೇಶ್ ಅವರು ನೆರವು ನೀಡಿದ್ದರು. ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಆರ್‌ಎಂಸಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಗರ ವೃತ್ತ ನಿರೀಕ್ಷಕ ಗಜೇಂದ್ರಪ್ಪ, ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.