ಶಾಲಾ ಕೊಠಡಿ ನಿರ್ಮಾಣಕ್ಕೆ ಆಗ್ರಹಿಸಿ ಪ್ರತಿಭಟನೆ

7
ರಾಮನಗರ: ಸರ್ಕಾರಿ ಶಾಲಾ ಮೈದಾನದಲ್ಲೇ ಬಿಸಿ ಊಟ ಸೇವಿಸುವ ವಿದ್ಯಾರ್ಥಿಗಳು: ಅಧಿಕಾರಿಗಳು ಭೇಟಿ

ಶಾಲಾ ಕೊಠಡಿ ನಿರ್ಮಾಣಕ್ಕೆ ಆಗ್ರಹಿಸಿ ಪ್ರತಿಭಟನೆ

Published:
Updated:
Deccan Herald

ಉಚ್ಚಂಗಿದುರ್ಗ: ಸಮೀಪದ ಅರಸೀಕೆರೆ ಹೋಬಳಿಯ ಚಟ್ನಿಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರಾಮನಗರ ಸರ್ಕಾರಿ ಶಾಲಾ ಕೊಠಡಿ ನಿರ್ಮಾಣಕ್ಕೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘದ ಪದಾಧಿಕಾರಿಗಳು ಹಾಗೂ ಗ್ರಾಮಸ್ಥರು ರಸ್ತೆ ತಡೆ ನಡೆಸಿದರು.

ಜಿಟಿ ಜಿಟಿ ಮಳೆಯ ಸಿಂಚನದಿಂದ ಕೆಸರು ತುಂಬಿದ ಮೈದಾನ, ಮರದ ಹನಿಗಳಂತೆ ಉದುರುತ್ತಿರುವ ಮೇಲ್ಛಾವಣಿ ಮಣ್ಣು, ಗಾಳಿ ಮಳೆಗೆ ಪುಡಿಯಾಗುತ್ತಿರುವ ಹೆಂಚುಗಳು ಈಗಲೂ ಆಗಲೂ ಬೀಳುವ ರೀಪರ್‌ಗಳು ಆತಂಕದಲ್ಲಿಯೇ ಶಿಕ್ಷಕರು, ಮಕ್ಕಳು ಕಾಲ ಕಳೆಯುತ್ತಿದ್ದಾರೆ.

ಶಾಲೆಯಲ್ಲಿ 4 ಕೊಠಡಿಗಳು ಇದ್ದು, ಎರಡು ಕೊಠಡಿಗಳ ಮೇಲ್ಚಾಚಣಿ ಹಾರಿಹೋಗಿವೆ. ಹೆಂಚುಗಳು ಪುಡಿಯಾಗಿವೆ. ಕಟ್ಟಡ ಸಂಪೂರ್ಣವಾಗಿ ಶಿಥಿಲಗೊಂಡಿರುವುದರಿಂದ ಚೇಳು, ಹಾವುಗಳ ವಾಸ ಸ್ಥಾನವಾಗಿ ಮಾರ್ಪಟ್ಟಿದೆ. ಮತ್ತೊಂದು ಕೊಠಡಿಯ ಮೇಲ್ಚಾವಣಿ ಮಣ್ಣು ಉದುರುತ್ತಿದ್ದು, ಸರಳುಗಳು ಗೋಚರಿಸುತ್ತಿವೆ. ಕುಸಿಯುವ ಭೀತಿ ಎದುರಾಗಿದೆ.

‘1ರಿಂದ 5ನೇ ತರಗತಿಯಿಂದ 125 ವಿದ್ಯಾರ್ಥಿಗಳು ಇದ್ದು, ಒಂದು ಕೊಠಡಿ ಮಾತ್ರ ತರಗತಿ ನಡೆಸಲು ಅನುಕೂಲಕರವಾಗಿದೆ. ಎಲ್ಲ ವಿದ್ಯಾರ್ಥಿಗಳನ್ನು ಒಂದೆಡೆ ಸೇರಿಸಿ ತರಗತಿ ನಡೆಸುವುದು ಹೇಗೆ ಎಂಬ ಚಿಂತೆ ಕಾಡುತ್ತಿದೆ’ ಎಂದು ಶಾಲಾ ಮುಖ್ಯಶಿಕ್ಷಕ ಚಂದ್ರಮೌಳಿ ಅಳಲು ತೋಡಿಕೊಂಡರು.

‘ಬಿಸಿಯೂಟದ ಕೊಠಡಿಯ ಬಾಗಿಲು, ಕೊಠಡಿಗಳು ತುಕ್ಕು ಹಿಡಿದಿದ್ದು, ಯಾವಾಗ ಬೇಕಾದರೂ ಕುಸಿಯುವ ಹಂತದಲ್ಲಿದೆ. ಇದರಿಂದ ಇಲ್ಲಿರುವ ಮಕ್ಕಳು ಜಡಿ ಮಳೆಯಿಂದ ಶಾಲಾ ಅಂಗಳ ಕೆಸರು ಗದ್ದೆಯಂತಾಗಿದೆ. ಅದರಲ್ಲೆ ಮಕ್ಕಳು ಕುಳಿತು ನಿತ್ಯಾ ಊಟ ಮಾಡುವ ಪರಿಸ್ಥಿತಿ ಇದೆ. ಕೂಡಲೇ ಅಧಿಕಾರಿಗಳು ಜನ ಪ್ರತಿನಿಧಿಗಳು ಶಾಲೆಗೆ 2 ಕೊಠಡಿ ನಿರ್ಮಾಣ ಮಾಡುವಂತೆ’ ಪ್ರತಿಭಟನಾಕಾರರು ಆಗ್ರಹಿಸಿದರು.

ಅರಸೀಕೆರೆ ಉಪ ತಹಶೀಲ್ದಾರ ಫಾತೀಮಾ ಬಿ ಭೇಟಿ ನೀಡಿ ಪರಿಶೀಲಿಸಿದರು. ‘ಶಾಲೆಯ ವಾಸ್ತವ ಸ್ಥಿತಿಯನ್ನು ಸರ್ಕಾರಕ್ಕೆ ಹಾಗೂ ಮೇಲಧಿಕಾರಿಗಳಿಗೆ ವರದಿ ಸಲ್ಲಿಸುತ್ತೇನೆ’ ಎಂದರು.

ರೈತ ಮುಖಂಡ ಕರಡಿ ದುರ್ಗದ ಚೌಡಪ್ಪ, ಮೌಸೀಬ್ ಸಾಬ್, ಅಮೀರ್, ಮಹಮ್ಮದ್, ರಸೂಲ್, ಶಬೀರ್ ಸಾಬ್, ಮುಬಾರಕ್, ಹುಸೇನ್ ಸಾಬ್, ಸತ್ತೂರು ಮಹಾದೇವಪ್ಪ, ಮಹಮ್ಮದ್, ಚಾಂದ್ ಪೀರ್, ಹುಸೇನ್‌, ಖಲಂದರ್, ಅಲಿ  ಇದ್ದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !