ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನ್ನಡಿಗರಿಗೆ ಶೇ 85ರಷ್ಟು ಉದ್ಯೋಗ ಕಲ್ಪಿಸಿ

ಕರವೇ ರಾಜ್ಯ ಘಟಕದ ಅಧ್ಯಕ್ಷ ಟಿ.ಎ. ನಾರಾಯಣ ಗೌಡ
Last Updated 2 ಜನವರಿ 2023, 5:05 IST
ಅಕ್ಷರ ಗಾತ್ರ

ದಾವಣಗೆರೆ: ಕನ್ನಡ ನಾಡಿಗೆ ಬರುವ ಉದ್ದಿಮೆಗಳು ಕರ್ನಾಟಕದವರಿಗೆ ಶೇ 85ರಷ್ಟು ಉದ್ಯೋಗ ಕಲ್ಪಿಸಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯ ಘಟಕದ ಅಧ್ಯಕ್ಷ ಟಿ.ಎ. ನಾರಾಯಣ ಗೌಡ ಆಗ್ರಹಿಸಿದರು.

ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಘಟಕದಿಂದ ಇಲ್ಲಿನ ಶಿವಯೋಗಿ ಮಂದಿರದಲ್ಲಿ ಭಾನುವಾರ ಏರ್ಪಡಿಸಿದ್ದ 62ನೇ ಕರ್ನಾಟಕ ರಾಜ್ಯೋತ್ಸವದ ಪ್ರಯುಕ್ತ ನಡೆದ ‘ಕನ್ನಡ ಹಬ್ಬ’ದಲ್ಲಿ ಅವರು ಮಾತನಾಡಿದರು.

‘ಕರ್ನಾಟಕ ರಾಜ್ಯಕ್ಕೆ ಬಹುದೊಡ್ಡ ಕಂಪನಿಗಳು ಬರುತ್ತಿದ್ದು, ಅನೇಕ ಉದ್ಯೋಗಗಳು ಸೃಷ್ಟಿಯಾಗುತ್ತಿವೆ. ಐಟಿ– ಬಿಟಿ, ಕಾರ್ಖಾನೆ, ಖಾಸಗಿ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಉದ್ಯೋಗವೇ ಇರಬಹುದು. ರಾಜ್ಯದಲ್ಲಿ ಮೂಲಸೌಲಭ್ಯ ಪಡೆಯುವವರು ಶೇ 85ರಷ್ಟು ಉದ್ಯೋಗ ನೀಡುವಂತೆ ಯಾವುದೇ ರಾಜೀ ಇಲ್ಲದೇ ಒತ್ತಡ ಹಾಕುತ್ತೇವೆ’ ಎಂದು ಹೇಳಿದರು.

‘ಬಸವಸಿರಿ’ ಪ್ರಶಸ್ತಿ ಸ್ವೀಕರಿಸಿದ ಕಬೀರಾನಂದ ಆಶ್ರಮದ ಶಿವ
ಲಿಂಗಾನಂದ ಸ್ವಾಮೀಜಿ, ‘ಜೀವನದಲ್ಲಿ ಎಷ್ಟೇ ಘಟನೆಗಳು ನಡೆದರೂ ನಮ್ಮ ಮನಸ್ಸಿನ ಇಂಗಿತವನ್ನು ವ್ಯಕ್ತಪಡಿಸುವ ಭಾಷೆ ಕನ್ನಡಎಂದು ಮುಕ್ತ ಕಂಠದಿಂದ ಹೇಳಬಹುದು’ ಎಂದು ಹೇಳಿದರು.

‘ಪ್ರಜಾವಾಣಿ’ ಛಾಯಾಗ್ರಾಹಕ ಸತೀಶ ಬಡಿಗೇರ್, ಜಿ.ಎನ್‌.ರಾಮು, ಒ.ಎನ್. ಸಿದ್ದಯ್ಯ ಒಡೆಯರ್, ಎ.ಆರ್. ಪುನೀತ್, ವೈದ್ಯ ಡಾ.ರಮೇಶ್ ಪೂಜಾರ್, ಡಿವೈಎಸ್‌ಪಿ ನಾಗೇಶ್ ಐತಾಳ್, ಸಣ್ಣೀರಪ್ಪ, ಸಮಾಜ ಸೇವಕರಾದ ಉಮೇಶ್, ಶಿವಮೂರ್ತಿಸ್ವಾಮಿ, ಚಿತ್ರಕಲೆಯಲ್ಲಿ ನಾ.ರೇವನ್, ಎಲ್ಲಪ್ಪ ಕಂಬಾರ್, ಸಾಹಿತ್ಯದಲ್ಲಿ ಮಲ್ಲಿಕಾರ್ಜುನ್ ಕಡಕೋಳ, ವಕೀಲ ಶ್ರೀಧರ್, ಆರ್.ಆರ್.ತಿಪ್ಪೇಸ್ವಾಮಿ, ಪತ್ರಿಕಾ ವಿತರಕ ಸುಧಾಕರ್, ಕ್ರೀಡಾ ಕ್ಷೇತ್ರದಲ್ಲಿ ಆರ್. ಕೆ.ಪಿ.ಜೋಸ್, ರಂಗಭೂಮಿಯಲ್ಲಿ ವಿಜಯಲಕ್ಷ್ಮಿ ಅವರನ್ನು ಸನ್ಮಾನಿಸಲಾಯಿತು.

ಕರವೇ ಜಿಲ್ಲಾ ಘಟಕದ ಅಧ್ಯಕ್ಷ ರಾಮೇಗೌಡ ಎಂ.ಎಸ್., ಗೌರವಾಧ್ಯಕ್ಷ ವಾಸುದೇವ ರಾಯ್ಕರ್, ಮಹಿಳಾ ಘಟಕದ ಅಧ್ಯಕ್ಷೆ ಬಸಮ್ಮ, ಉಪಾಧ್ಯಕ್ಷೆ ಮಂಜುಶ್ರೀ ಗೌಡ್ರು, ಭರತ್‌ಗೌಡ, ಶಾಂತಮ್ಮ ಬೆಳಗಾವಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT