ಜಾತಿನಿಂದನೆ ಕಾಲಂನಡಿ ಹಾಲುಮತ ಸಮಾಜ ತನ್ನಿ: ಕಾಗಿನೆಲೆ ಶ್ರೀ

7

ಜಾತಿನಿಂದನೆ ಕಾಲಂನಡಿ ಹಾಲುಮತ ಸಮಾಜ ತನ್ನಿ: ಕಾಗಿನೆಲೆ ಶ್ರೀ

Published:
Updated:

ದಾವಣಗೆರೆ: ‘ಸರ್ಕಾರದಿಂದ ಕೋಟ್ಯಂತರ ರೂಪಾಯಿ ಅನುದಾನ ಕೊಡಿ ಎಂದು ನಾವು ದೇವರಾಣೆಗೂ ಕೇಳುವುದಿಲ್ಲ; ನಮಗೆ ಒಂದೇ ಒಂದು ನೋವಿದೆ. ಹಾಲುಮತ ಸಮಾಜದವರನ್ನು ‘ಏ ಹುಂಬ ಕುರುಬ’ ಎಂದು ಜಾತಿ ಹಿಡಿದು ನಿಂದಿಸುತ್ತಿದ್ದಾರೆ. ಹೀಗಾಗಿ ನಮ್ಮ ಸಮಾಜವನ್ನೂ ಜಾತಿ ನಿಂದನೆ ಕಾಲಂನಡಿ ತರಬೇಕು’ ಎಂದು ಕಾಗಿನೆಲೆ ಕನಕ ಗುರುಪೀಠದ ನಿರಂಜನಾನಂದಪುರಿ ಸ್ವಾಮೀಜಿ ಒತ್ತಾಯಿಸಿದರು.

ನಗರದಲ್ಲಿ ಭಾನುವಾರ ನಡೆದ ಶ್ರೀಹಾಲುಮತ ಸೌಹಾರ್ದ ಪತ್ತಿನ ಸಹಕಾರ ನಿಯಮಿತ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಹಾಲುಮತ ಸಮಾಜದವರಾಗಿದ್ದರೂ ನೀವು ಎಸ್‌.ಟಿ ಸೌಲಭ್ಯ ಪಡೆದು ಸಚಿವರಾಗಿದ್ದೀರಿ. ಹೀಗಾಗಿ ರಾಜ್ಯದ ಎಲ್ಲಾ ಭಾಗದ ಹಾಲುಮತ ಸಮಾಜದವರಿನ್ನೂ ಎಸ್‌.ಟಿ.ಗೆ ಸೇರಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಬಲಗೈಯಂತಿರುವ ನೀವು ಕೆಲಸ ಮಾಡಬೇಕು. ಆಗ ನಮ್ಮ ಸಮಾಜವೂ ಶೈಕ್ಷಣಿಕ ಹಾಗೂ ರಾಜಕೀಯವಾಗಿ ಮುಂದೆ ಬರಲು ಸಾಧ್ಯ’ ಎಂದು ಸ್ವಾಮೀಜಿ ಸಹಕಾರ ಸಚಿವ ಬಂಡೆಪ್ಪ ಕಾಶೆಂಪೂರ ಅವರನ್ನು ಕೋರಿದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !