ಭಾನುವಾರ, ಡಿಸೆಂಬರ್ 15, 2019
24 °C

ರಘು ಆಚಾರ್ ರಾಜೀನಾಮೆಗೆ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ಹರಿಹರ: ಸಾಣೇಹಳ್ಳಿಯ ಪಂಡಿತಾರಾಧ್ಯ ಸ್ವಾಮೀಜಿ ಅವರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿರುವ ವಿಧಾನ ಪರಿಷತ್ ಸದಸ್ಯ ರಘು ಆಚಾರ್ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿ ಶನಿವಾರ ಸಾಣೆಹಳ್ಳಿ ಮಠದ ಭಕ್ತರು ಹಾಗೂ ಅಭಿಮಾನಿಗಳು ಪ್ರತಿಭಟನೆ ನಡೆಸಿ, ತಾಲ್ಲೂಕು ಕಚೇರಿ ಅಧಿಕಾರಿಗೆ ಮನವಿ ಸಲ್ಲಿಸಿದರು.

ನಗರದ ಪಕ್ಕೀರಸ್ವಾಮಿ ಮಠದಿಂದ ಪ್ರಾರಂಭವಾದ ಪ್ರತಿಭಟನಾ ಮೆರವಣಿಗೆ, ಶಿವಮೊಗ್ಗ ವೃತ್ತ, ರಾಣಿ ಚೆನ್ನಮ್ಮ ವೃತ್ತ, ಮುಖ್ಯರಸ್ತೆ, ಮಹಾತ್ಮಗಾಂಧಿ ವೃತ್ತದ ಮೂಲಕ ತಾಲ್ಲೂಕು ಕಚೇರಿ ತಲುಪಿತು.

ಪ್ರತಿಭಟನೆಯ ನೇತೃತ್ವ ವಹಿಸಿದ್ದ ಮಾಜಿ ಶಾಸಕ ಬಿ.ಪಿ. ಹರೀಶ್, ‘ಸಮಾಜ ಸುಧಾರಣೆಗೆ ಕ್ರಾಂತಿಕಾರ ಪ್ರಯತ್ನಗಳ ಮೂಲಕ ಜನರಲ್ಲಿ ಪೂಜ್ಯ ಭಾವನೆಗಳನ್ನು ಪಡೆದಿರುವಪಂಡಿತಾರಾಧ್ಯ ಸ್ವಾಮೀಜಿ ಅವರಿಗೆ ಪೀಠ ತ್ಯಾಗ ಮಾಡಿ ಎಂಬ ಹೇಳಿಕೆ ನೀಡುವ ಮೂಲಕ ರಘು ಆಚಾರ್‍ ಶ‍್ರೀಗಳನ್ನು ಅವಮಾನಿದ್ದಾರೆ’ ಎಂದು ಆರೋಪಿಸಿದರು.

ಕಾಯಕ-ದಾಸೋಹ ತತ್ವದ ಮೂಲಕ ರಾಜ್ಯದಲ್ಲಿ ಲಕ್ಷಾಂತರ ಭಕ್ತರನ್ನು ಹೊಂದಿರುವ ಗುರುಗಳ ಮಹತ್ವ ಅರಿಯದೇ, ಹಣದ ಅಹಂಕಾರದಿಂದ ಅವರ ಬಗ್ಗೆ ಹೇಳಿಕೆ ನೀಡಿರುವ ರಘು ಆಚಾರ್‍ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವ ಜತೆಗೆ ಬಹಿರಂಗ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದರು.

ಮುಖಂಡರಾದ ಬೆಳ್ಳೂಡಿ ರಾಮಚಂದ್ರಪ್ಪ, ಬಾತಿ ಚಂದ್ರಶೇಖರ್, ಕೆ.ಎಸ್. ಹನುಮಂತಪ್ಪ, ಎಚ್.ಎಚ್. ಬಸವರಾಜಪ್ಪ, ಜಿ. ದಯಾನಂದ, ಎಂ. ಶಿವಕುಮಾರ್, ಎಚ್. ಕರಿಬಸಪ್ಪ ಇದ್ದರು.

ಪ್ರತಿಕ್ರಿಯಿಸಿ (+)