ಬಾಲ್ಯ ವಿವಾಹ ತಡೆದಾಗ ಬಯಲಾಯ್ತು ಅತ್ಯಾಚಾರ

7

ಬಾಲ್ಯ ವಿವಾಹ ತಡೆದಾಗ ಬಯಲಾಯ್ತು ಅತ್ಯಾಚಾರ

Published:
Updated:

ಹರಪನಹಳ್ಳಿ: ತಾಲ್ಲೂಕಿನ ಗ್ರಾಮವೊಂದರಲ್ಲಿ ನಡೆಯುತ್ತಿದ್ದ ಬಾಲ್ಯವಿವಾಹವನ್ನು ತಡೆದ ಅಧಿಕಾರಿಗಳಿಗೇ ಈಗ ಆಘಾತವಾಗಿದೆ.

ಕೆಲ ದಿನಗಳ ಹಿಂದೆ ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿದ ಸಿಡಿಪಿಒ ನೇತೃತ್ವದ ಸಿಬ್ಬಂದಿ, ಬಾಲಕಿಯನ್ನು ರಕ್ಷಿಸಿದ್ದರು. ನಂತರ ದಾವಣಗೆರೆಯ ಬಾಲಕಿಯರ ಬಾಲಮಂದಿರದಲ್ಲಿ ಆಕೆಗೆ ರಕ್ಷಣೆ ಒದಗಿಸಲಾಗಿತ್ತು.

ಬಾಲಮಂದಿರದ ಆಪ್ತ ಸಮಾಲೋಚಕಿ ಮಮತಾ, ಬಾಲಕಿಯೊಂದಿಗೆ ಸಮಾಲೋಚನೆ ನಡೆಸಿದಾಗ ಅತ್ಯಾಚಾರದ ಮಾಹಿತಿ ಬಹಿರಂಗವಾಗಿದೆ. ಬಾಲಕಿಯ ಅಕ್ಕನ ಗಂಡನೇ ಅತ್ಯಾಚಾರ ಎಸಗಿರುವುದನ್ನು ಆಕೆ ತಿಳಿಸಿದ್ದಾಳೆ.

ಬಾಲಕಿ ಹೇಳಿಕೆ ಆಧರಿಸಿ ಪೋಕ್ಸೊ ಕಾಯ್ದೆಯಡಿ ದೂರು ದಾಖಲಿಸಿಕೊಂಡ ಚಿಗಟೇರಿ ಠಾಣೆ ಪೊಲೀಸರು, ಆರೋಪಿ ದೇವರಾಜ್‌ ಎಂಬುವವನನ್ನು ಬಂಧಿಸಿದ್ದಾರೆ.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !