ಶುಕ್ರವಾರ, ಏಪ್ರಿಲ್ 16, 2021
27 °C

ವೃತ್ತಿ ರಂಗಭೂಮಿ ಕೇಂದ್ರಕ್ಕೆ ವಿಶೇಷಾಧಿಕಾರಿ ನೇಮಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಕೊಂಡಜ್ಜಿ ಬೆಟ್ಟದ ಪರಿಸರದಲ್ಲಿ ನಿರ್ಮಾಣಗೊಳ್ಳಲಿರುವ ‘ವೃತ್ತಿ ರಂಗಭೂಮಿ ಕೇಂದ್ರ’ಕ್ಕೆ ವಿಶೇಷಾಧಿಕಾರಿಯನ್ನಾಗಿ ಮೈಸೂರಿನ ಹಿರಿಯ ರಂಗ ನಿರ್ದೇಶಕ ಪಿ. ಗಂಗಾಧರಸ್ವಾಮಿ ಅವರನ್ನು ಸರ್ಕಾರ ನೇಮಕ ಮಾಡಿ ಆದೇಶ ಹೊರಡಿಸಿದೆ.

ಮೈಸೂರು, ಧಾರವಾಡ ರಂಗಾಯಣಗಳ ಹುಟ್ಟು ಬೆಳವಣಿಗೆಯಲ್ಲಿ ಅಪಾರ ಶ್ರಮ ಮತ್ತು ಸೇವೆ ಸಲ್ಲಿಸಿದ ಗಂಗಾಧರಸ್ವಾಮಿ ಬಹುಶೃತ ರಂಗಕರ್ಮಿ. ಅನೇಕ ನಾಟಕ ಕಂಪನಿಗಳಿಗೆ ವೃತ್ತಿ ನಾಟಕಗಳ ನಿರ್ದೇಶನ ಮಾಡಿರುವ ಅವರು ಪ್ರಯೋಗಶೀಲತೆಯ ಆಧುನಿಕ ರಂಗಭೂಮಿ, ಜನಪದ ರಂಗಭೂಮಿಯ ದೊಡ್ಡಾಟದಲ್ಲೂ ಪರಿಣತಿ ಹೊಂದಿದವರು. ಸಮುದಾಯ ರಂಗ ಸಂಘಟನೆಯ ಸ್ಥಾಪಕರಲ್ಲೊಬ್ಬರಾದ ಗಂಗಾಧರಸ್ವಾಮಿ ನಟ, ನಿರ್ದೇಶಕ, ನೇಪಥ್ಯ ರಂಗ ಶಿಕ್ಷಕರಾಗಿ ಮೈಸೂರು ರಂಗಾಯಣದಲ್ಲಿ ಬಿ.ವಿ. ಕಾರಂತರೊಂದಿಗೆ ಕೆಲಸ ಮಾಡಿದವರು.

ಕೊಂಡಜ್ಜಿಯಲ್ಲಿ ಈ ಹಿಂದೆ ಸಮುದಾಯದ ಅನೇಕ ಶಿಬಿರಗಳನ್ನು ನಡೆಸಿ ಕೊಟ್ಟಿರುವ ಅವರು ‘ರಂಗ ಶಿಬಿರಗಳ ಚಕ್ರವರ್ತಿ’ ಎಂದು ಹೆಸರು ಪಡೆದಿದ್ದರು ಎಂದು ಕರ್ನಾಟಕ ರಂಗ ಸಮಾಜ ಸದಸ್ಯ ಮಲ್ಲಿಕಾರ್ಜುನ ಕಡಕೋಳ ತಿಳಿಸಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.