ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭದ್ರಾ ನೀರಲ್ಲಿ ಭತ್ತ ಬೆಳೆಯದಿರಲು ಮನವಿ

Last Updated 21 ಆಗಸ್ಟ್ 2019, 10:15 IST
ಅಕ್ಷರ ಗಾತ್ರ

ದಾವಣಗೆರೆ: ಭದ್ರಾ ಜಲಾಶಯದಿಂದ ನೀರು ಹರಿಸುತ್ತಿದ್ದು, ಹೆಚ್ಚು ನೀರು ಬೇಡುವ ಭತ್ತವನ್ನು ಬೆಳೆಯದೇ ಪರ್ಯಾಯ ಬೆಳೆ ಬೆಳಯುವಂತೆ ನೀರಾವರಿ ನಿಗಮದ ಕಾರ್ಯಪಾಲಕ ಎಂಜಿನಿಯರ್‌ ತಿಳಿಸಿದ್ದಾರೆ.

ಎಡದಂಡೆ ನಾಲೆ, ಬಲದಂಡೆ ನಾಲೆ, ಆನವೇರಿ, ದಾವಣಗೆರೆ, ಮಲೆಬೆನ್ನೂರು, ಹರಿಹರ ಶಾಖಾ ನಾಲೆಗಳಿಗೆ ಆ.16ರಿಂದ ನೀರು ಹರಿಸಲಾಗುತ್ತಿದೆ. ಅದರಂತೆ ಭದ್ರಾ ಬಲದಂಡೆ ಕಾಲುವೆ ವಿಭಾಗದಡಿ ಬರುವ ಎಲ್ಲ ವಿತರಣಾ ಕಾಲುವೆಗಳಿಗೆ ಆ.23ರಿಂದ ಪ್ರತಿ 10 ದಿನಗಳ ಅವಧಿಯ ಸರದಿಯಲ್ಲಿ ನೀರು ಹರಿಸಲಾಗುತ್ತದೆ.

ಹೆಚ್ಚು ನೀರುಣ್ಣುವ ಭತ್ತ ಇನ್ನಿತರ ಬೆಳೆಗಳನ್ನು ಬೆಳೆಯಬಾರದು. ನೀರಾವರಿ ಕಾಲುವೆ, ಕಟ್ಟಡಗಳನ್ನು ಜಖಂಗೊಳಿಸಬಾರದು. ನಿಯಮಿತ ಪ್ರಮಾಣಕ್ಕಿಂತ ಹೆಚ್ಚು ನೀರು ಬಳಸಬಾರದು. ಅನಧಿಕೃತವಾಗಿ ಪಂಪ್‌ಸೆಟ್‌ ಅಳವಡಿಸಿ ನೀರು ಹಾಯಿಸಬಾರದು ಎಂದು ಅವರು ಪ್ರಕಟಣೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT