ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

₹ 12 ಸಾವಿರ ವೇತನ ನಿಗದಿಗೆ ಆಗ್ರಹ

Last Updated 18 ಅಕ್ಟೋಬರ್ 2019, 14:36 IST
ಅಕ್ಷರ ಗಾತ್ರ

ದಾವಣಗೆರೆ: ಆಶಾ ಕಾರ್ಯಕರ್ತೆಯರನ್ನು ಕಾರ್ಮಿಕರು ಎಂದು ಪರಿಗಣಿಸಿ ಅವರಿಗೆ ತಿಂಗಳಿಗೆ ₹12 ಸಾವಿರ ವೇತನ ನಿಗದಿಗೊಳಿಸಬೇಕು ಎಂದು ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ರಾಜ್ಯ ಕಾರ್ಯದರ್ಶಿ ಡಿ. ನಾಗಲಕ್ಷ್ಮಿ ಆಗ್ರಹಿಸಿದರು.

ದಾವಣಗೆರೆಯ ಸ್ಕೌಟ್ಸ್ ಅಂಡ್ ಗೈಡ್ಸ್ ಸಭಾಂಗಣದಲ್ಲಿ ಶುಕ್ರವಾರ ನಡೆದ ದಾವಣಗೆರೆ ತಾಲ್ಲೂಕು ಸಮಾವೇಶದಲ್ಲಿ ಅವರು ಮಾತನಾಡಿದರು.

‘ಎಐಯುಟಿಯುಸಿ ಹೋರಾಟದ ಫಲವಾಗಿ ₹200 ರಿಂದ ₹300 ವೇತನ ಪಡೆಯುತ್ತಿದ್ದ ಆಶಾ ಕಾರ್ಯಕರ್ತೆಯರು ಈಗ ಸಾವಿರಾರು ರೂಪಾಯಿಗಳನ್ನು ಕಾಣುವಂತಾಗಿದೆ. ಎಐಯುಟಿಯುಸಿ ಹಗಲು ರಾತ್ರಿ ಎನ್ನದೇ ಹೋರಾಟ ಮಾಡಿದ ಫಲವಾಗಿ ಅಂದಿನ ಆರೋಗ್ಯ ಸಚಿವರಾಗಿದ್ದ ರಮೇಶ್‌ಕುಮಾರ್ ಅವರು ₹3,500 ನಿಗದಿ ಮಾಡಿ ಸ್ಥಳದಲ್ಲೇ ಘೋಷಿಸಿದರು’ ಎಂದು ಹೇಳಿದರು.

‘ಜೆಡಿಎಸ್ ಪ್ರಣಾಳಿಕೆಯಲ್ಲಿ ₹ 500 ಘೋಷಣೆ ಮಾಡಿದ್ದು, ಕುಮಾರಸ್ವಾಮಿ ಅವರ ಸರ್ಕಾರ ಈಗ ಇಲ್ಲ. ಆದ್ದರಿಂದ ಇಂದಿನ ಬಿಜೆಪಿ ಸರ್ಕಾರ ಇದನ್ನು ಮುಂದುವರಿಸುವ ನಿರೀಕ್ಷೆ ಇದ್ದು, ನವೆಂಬರ್‌ನಿಂದ ₹3,500 ಗಳಿಂದ ₹4,000 ಆಗುತ್ತದೆ’ ಎಂದು ಹೇಳಿದರು.

‘ರಾಜ್ಯ ಸರ್ಕಾರದಿಂದ ಗೌರವಧನ ನಿಗದಿಯಾಯಿತು ಆದರೆ ಕೇಂದ್ರ ಸರ್ಕಾರದಿಂದ ಸರಿಯಾಗಿ ಗೌರವಧನ ಬರುತ್ತಿಲ್ಲ. ನಾವು ಕಾರ್ಮಿಕರಿಗಿಂತ ಹೆಚ್ಚಿನ ಕೆಲಸ ಮಾಡುತ್ತಿದ್ದೇವೆ. ಕಾರ್ಮಿಕ ಕಾಯ್ದೆ ಪ್ರಕಾರ ಕನಿಷ್ಠ ವೇತನ ನೀಡಬೇಕು ಎಂದು ಆಗ್ರಹಿಸಿದ ಅವರು, ಕೇಂದ್ರ ಸರ್ಕಾರ ₹6 ಸಾವಿರ ಹಾಗೂ ರಾಜ್ಯ ಸರ್ಕಾರದಿಂದ ₹6 ಸಾವಿರ ಸೇರಿ ₹12 ಸಾವಿರ ವೇತನ ನಿಗದಿಗೊಳಿಸಬೇಕು’ ಎಂದು ಆಗ್ರಹಿಸಿದರು.

‘ಆಂಧ್ರಪ್ರದೇಶದಲ್ಲಿ ₹10 ಸಾವಿರ ಇದ್ದು, ಅದರಂತೆಯೇ ನಮ್ಮ ರಾಜ್ಯದಲ್ಲೂ ನೀಡಬೇಕು ಎಂದು ಬೆಂಗಳೂರು ಹಾಗೂ ಬಳ್ಳಾರಿಗಳಲ್ಲಿ ಸಚಿವ ಶ್ರೀರಾಮುಲು ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದೇವೆ. ಆಂಧ್ರ ಪ್ರದೇಶ ನೀಡುವುದಕ್ಕಿಂತ ಹೆಚ್ಚು ನೀಡುತ್ತೇವೆ. ಎರಡು ತಿಂಗಳಲ್ಲಿ ಹೆಚ್ಚು ಮಾಡುತ್ತೇನೆ’ ಎಂದು ಭರವಸೆ ನೀಡಿದ್ದಾರೆ ಎಂದು ಹೇಳಿದರು.

ಒಂದು ವರ್ಷದಿಂದ ಕೇಂದ್ರ ಸರ್ಕಾರದಿಂದ ವೇತನ ಬಂದಿಲ್ಲ. ಎಂಸಿಪಿಎಸ್ ಹಾಗೂ ನಾನ್ ಎಂಸಿಪಿಎಸ್‌ ಸಂಬಂಧ ಆಶಾ ಕಾರ್ಯಕರ್ತೆಯರಿಗೆ ಸೆಪ್ಟೆಂಬರ್‌ ತಿಂಗಳಿನಿಂದ ಗೌರವಧನ ಬಂದಿಲ್ಲ. ಆರ್‌ಸಿಎಚ್ ಪೋರ್ಟಲ್‌ ಕಾರ್ಯ ನಿರ್ವಹಿಸದೇ ಇರುವುದರಿಂದ 10 ತಿಂಗಳಿನಿಂದ ಹಣ ಬಂದಿಲ್ಲ. ‘ಆಶಾ ಸಾಫ್ಟ್’ ಕೂಡ ಕಾರ್ಯನಿರ್ವಹಿಸದೇ ತೊಂದರೆಯಾಗಿದೆ. ಕೂಡಲೇ ಇವುಗಳನ್ನು ರದ್ದುಮಾಡಬೇಕು. ಇನ್ನೂ ಎರಡು ತಿಂಗಳು ಹೆಚ್ಚಿನ ಕೆಲಸ ಕೊಟ್ಟರೂ ಮಾಡುತ್ತೇವೆ. ಆದರೆ ₹12 ಸಾವಿರ ವೇತನ ನೀಡಬೇಕು ಎಂದು ಆಗ್ರಹಿಸಿದರು.

‘ಒಂದು ಸಾವಿರ ಜನಸಂಖ್ಯೆಗೆ ಒಬ್ಬ ಆಶಾಗೆ ತಿಂಗಳಿಗೆ ₹3,000 ನಿಗದಿ ಮಾಡಿಕೊಡಬೇಕು. ಕೊಟ್ಟಿರುವ ಹಣವನ್ನು ಕಳೆದು ಉಳಿದ ಹಣವನ್ನು ಒಟ್ಟಿಗೆ ನೀಡಬೇಕು. ನಮ್ಮ ಆರೋಗ್ಯಕ್ಕೆ ಏನಾದರೂ ಆದಾಗ ‘ಆಶಾ ಕ್ಷೇಮಾಭಿವದ್ಧಿ’ ಸ್ಥಾಪಿಸಿ ಅವರಿಗೆ ತೊಂದರೆಯಾದಾಗ ಸಹಾಯಧನ ನೀಡಬೇಕು. ಓಡಾಟವೇ ಸಹಾಯಧನದಲ್ಲಿ ದ್ವಿಚಕ್ರವಾಹನ ನೀಡಬೇಕು. ಅಂಗನವಾಡಿ, ಬಿಸಿಯೂಟ, ಆಶಾ ಕಾರ್ಯಕರ್ತೆಯರನ್ನು ಕಾರ್ಮಿಕರು ಎಂದು ಪರಿಗಣಿಸಬೇಕು. ಆಗ ಅವರಿಗೆ ಕನಿಷ್ಠ ವೇತನ ಹಾಗೂ ಪಿ.ಎಫ್‌, ಇಎಸ್‌ಐ ಸೌಲಭ್ಯ ದೊರಕುತ್ತದೆ’ ಎಂದು ಹೇಳಿದರು.

ಆಶಾ ಕಾರ್ಯಕರ್ತೆಯರ ವಿವಿಧ ಬೇಡಿಕೆಗಳನ್ನು ಎರಡು ತಿಂಗಳಲ್ಲಿ ಈಡೇರಿಸುವುದಾಗಿ ಆರೋಗ್ಯ ಸಚಿವ ಶ್ರೀರಾಮುಲು ಅವರು ಭರವಸೆ ನೀಡಿದ್ದು, ಬೇಡಿಕೆ ಈಡೇರದಿದ್ದರೆ ಡಿಸೆಂಬರ್ ತಿಂಗಳಲ್ಲಿ ನಮ್ಮ ಹೋರಾಟವನ್ನೇ ಬ್ರೇಕ್ ಮಾಡುವ ರೀತಿಯಲ್ಲಿ ಮತ್ತೊಮ್ಮೆ ಉಗ್ರ ಹೋರಾಟ ಮಾಡುತ್ತೇವೆ ಎಂದರು ಎಚ್ಚರಿಸಿದರು.

ಸಂಘದ ತಿಪ್ಪೇಸ್ವಾಮಿ, ಅನಿತಾ ಅನಗೋಡು, ನೀಲಮ್ಮ ಅತ್ತಿಗೇರಿ, ಭಾರತಿ ಕಾರ್ಯಕ್ರಮದಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT