ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಜೆಟ್‌ ಅಧಿವೇಶನದೊಳಗೆ ಮೀಸಲಾತಿ ಘೋಷಿಸಿ: ಬಸವಜಯ ಮೃತ್ಯುಂಜಯ ಸ್ವಾಮೀಜಿ

ಕೂಡಲಸಂಗಮ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ
Last Updated 21 ಫೆಬ್ರುವರಿ 2022, 19:58 IST
ಅಕ್ಷರ ಗಾತ್ರ

ದಾವಣಗೆರೆ: ‘ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಬಜೆಟ್ ಅಧಿವೇಶನದಲ್ಲಿ ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ಘೋಷಿಸಬೇಕು ’ ಎಂದು ಕೂಡಲಸಂಗಮ ಪಂಚಮಸಾಲಿ ಪೀಠದ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಆಗ್ರಹಪಡಿಸಿದರು.

ಪಂಚಮಸಾಲಿ ಸಮಾಜದ ಬೆಂಗಳೂರು ಪಾದಯಾತ್ರೆಗೆ ಒಂದು ವರ್ಷದ ತುಂಬಿದ ಪ್ರಯುಕ್ತ ಇಲ್ಲಿನ ಗುರುಭವನದಲ್ಲಿ ನಡೆದ ಸಭೆಯ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.

‘ಡಿ.16ರಂದು ಬೆಳಗಾವಿಯಲ್ಲಿ ನಡೆದ ಪಂಚಮಸಾಲಿ ಸಮಾಜದ ಹಾಲಿ ಮಾಜಿ ಶಾಸಕರ ಸಭೆಯಲ್ಲಿಬಜೆಟ್ ಅಧಿವೇಶನದಲ್ಲಿ ಮೀಸಲಾತಿ ನೀಡುವುದಾಗಿ ಮುಖ್ಯಮಂತ್ರಿ ಕೊಟ್ಟ ಮಾತನ್ನು ನಡೆಸಬೇಕು. ಇಲ್ಲದಿದ್ದರೆ ಶಾಸಕ ಬಸನಗೌಡ ಯತ್ನಾಳ್‌ ನೇತೃತ್ವದಲ್ಲಿ ಸಮಾಜದ ಶಾಸಕರು ಸೇರಿ ಹೋರಾಟದ ಬಗ್ಗೆ ನಿರ್ಧಾರ ಕೊಳ್ಳಲಾಗುವುದು’ ಎಂದರು.

ಶಾಖಾಮಠ ನಿರ್ಧರಿಸಿಲ್ಲ:‘ಸಮಾಜಕ್ಕೆ 2ಎ ಮೀಸಲಾತಿ ನೀಡುವವರೆಗೂ ಯಾವುದೇ ಮಠ ಕಟ್ಟುವ ನಿರ್ಧಾರ ಮಾಡಿಲ್ಲ’ ಹೇಳಿದರು.

‘ಬಸವಣ್ಣನವರು ಐಕ್ಯವಾದ ಕೂಡಲ ಸಂಗಮದಲ್ಲಿರುವ ಪೀಠವೊಂದೇ ಪಂಚಮಸಾಲಿಗಳಿಗೆ ಪೀಠ. ಉಳಿದ ಯಾವ ಮಠವೂ ಗೊತ್ತಿಲ್ಲ’ ಎಂದುಪಂಚಮಸಾಲಿ ಮೂರನೇ ಪೀಠದ ಬಗ್ಗೆ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT