ಬಸವಾಪಟ್ಟಣ: ಶಿವರಾತ್ರಿ ನಂತರ ಹೆಚ್ಚುತ್ತಿರುವ ಬಿಸಿಲು ಈಗ ಇನ್ನೂ ಚುರುಕುಗೊಂಡಿದ್ದು, ಜನರು ತಂಪು ನೀಡುವ ಕಲ್ಲಂಗಡಿ ಹಣ್ಣಿನ ಮೊರೆ ಹೋಗುತ್ತಿದ್ದಾರೆ.

‘ತಮಿಳುನಾಡಿನ ದಿಂಡಿಗಲ್ ಮತ್ತು ಸುತ್ತಲಿನ ಪ್ರದೇಶಗಳಲ್ಲಿ ಬೆಳೆಯುವ ತಿಳಿ ಹಸಿರು ಬಣ್ಣದ ನಾಮಧಾರಿ ಕಲ್ಲಂಗಡಿ ಹಣ್ಣು ಈಗ ಎಲ್ಲ ಕಡೆ ಜನಪ್ರಿಯವಾಗಿದ್ದು, ಇದರ ಬೇಡಿಕೆ ಹೆಚ್ಚಾಗಿದೆ. ತಮಿಳುನಾಡಿನಲ್ಲಿ ಈ ಹಣ್ಣಿನ ದರ ಟನ್ ಒಂದಕ್ಕೆ ₹ 17,000 ಇದ್ದು, ಅಲ್ಲಿಂದ ಇಲ್ಲಿಗೆ ಸಾಗಣೆ ವೆಚ್ಚ ಮತ್ತು ಇತರ ಖರ್ಚುಗಳನ್ನು ಸೇರಿಸಿದರೆ ಕೆ.ಜಿ.ಗೆ ₹ 26 ತಗಲುತ್ತದೆ. ಅದರ ಮೇಲೆ ಮೂರು ಅಥವಾ ನಾಲ್ಕು ರೂಪಾಯಿ ಲಾಭದಲ್ಲಿ ಮಾರುತ್ತಿದ್ದೇವೆ’ ಎನ್ನುತ್ತಾರೆ ಹಣ್ಣಿನ ಸಗಟು ವ್ಯಾಪಾರಿ ಸೈಯದ್ ಅಫಾನ್.

‘ಮಾರ್ಚ್ ತಿಂಗಳಲ್ಲಿ ಬೇಸಿಗೆ ಕಾಲಿಡುತ್ತಿದ್ದಂತೆ ಕತ್ತರಿಸಿ ಮಾರುವ ಕಲ್ಲಂಗಡಿ ಹಣ್ಣಿಗೆ ಬೇಡಿಕೆ ಹೆಚ್ಚಾಗುತ್ತದೆ. ಈ ಬಾರಿ ಬನಾಸ್ಪತ್ರೆ ಹಣ್ಣಿನ ಉತ್ಪಾದನೆ ಹೆಚ್ಚಾಗಿಲ್ಲ. ಆದ್ದರಿಂದ ಕಲ್ಲಂಗಡಿಗೆ ಜನ ಮುಗಿ ಬೀಳುತ್ತಿದ್ದಾರೆ. ಚಿಕ್ಕ ಗಾತ್ರದ ಕಡು ಹಸಿರು ಬಣ್ಣದ ಕಲ್ಲಂಗಡಿಯನ್ನು ರಾಜ್ಯದಲ್ಲಿ ಬೆಳೆಯುತ್ತಿದ್ದು, ರುಚಿ ಮತ್ತು ಮಾಧುರ್ಯ ಹೆಚ್ಚಾಗಿರುವ ತಮಿಳುನಾಡಿನ ಕಲ್ಲಂಗಡಿ ನಮ್ಮಲ್ಲಿ ಹೇರಳವಾಗಿ ಖರ್ಚಾಗುತ್ತಿದೆ. ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಈ ಹಣ್ಣಿನ ಬೇಡಿಕೆ ಇನ್ನೂ ಹೆಚ್ಚಾಗಲಿದೆ’ ಎನ್ನುತ್ತಾರೆ ಇಲ್ಲಿನ ಹಣ್ಣಿನ ವ್ಯಾಪಾರಿ ಫಾರೂಕ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.