ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಿಎಲ್‌, ಎಲ್‌ಎಲ್‌ಆರ್‌ | ದಾವಣಗೆರೆ ಆರ್‌ಟಿಒ ಕಚೇರಿಯ ಬ್ರೋಕರ್‌ಗಳು ಎಸಿಬಿ ಬಲೆಗೆ

Last Updated 17 ಸೆಪ್ಟೆಂಬರ್ 2019, 14:46 IST
ಅಕ್ಷರ ಗಾತ್ರ

ದಾವಣಗೆರೆ: ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಮಂಗಳವಾರ ಇಲ್ಲಿನ ಪ್ರಾದೇಶಿಕ ಸಾರಿಗೆ ಕಚೇರಿಗೆ ಸ್ವಯಂ ಪ್ರೇರಿತ ದಾಳಿ ನಡೆಸಿದ್ದು 15 ಬ್ರೋಕರ್‌ಗಳಿಂದ ₹ 1.76 ಲಕ್ಷ ವಶಪಡಿಸಿಕೊಂಡಿದೆ.

ತಬ್ರೀಜ್‌, ಧರಣೇಂದ್ರ ಪ್ರಸಾದ್‌, ಮೋಹನ್‌ ಗೌಡ, ತೌಸಿಫ್‌, ತಿಪ್ಪೇಶ್‌, ಸೆಂಥಿಲ್‌ ಕುಮಾರ್‌, ಮಂಜಣ್ಣ, ಅಲ್ತಾಫ್‌ ಅಹಮ್ಮದ್‌, ಹನುಮಂತಪ್ಪ, ಮುಜಾಮಿನ್‌, ಶೇಖರ ನಾಯ್ಕ, ಹಬೀದ್‌ಖಾನ್‌, ಶೇರ್‌ ಅಲಿ, ದಾದಾಪೀರ್‌, ಸೈಯದ್‌ ಗೌಸ್‌ ಸಿಕ್ಕಿಬಿದ್ದ ಬ್ರೋಕರ್‌ಗಳು.

ಡಿಎಲ್‌, ಎಲ್‌ಎಲ್‌ಆರ್‌ ಮುಂತಾದ ಕೆಲಸಗಳನ್ನು ಮಾಡಿಸಿಕೊಡಲು ಸಾರ್ವಜನಿಕರಿಂದ ಹಣ ಪಡೆಯುತ್ತಿದ್ದ ವೇಳೆ ಎಸಿಬಿ ಸಿಬ್ಬಂದಿ ದಾಳಿ ಮಾಡಿದ್ದಾರೆ. ಆರ್‌ಟಿಒ ಕಚೇರಿಯ ಸಿಬ್ಬಂದಿಗೂ ಈ ಹಣದಲ್ಲಿ ಸ್ವಲ್ಪ ಭಾಗ ಸಂದಾಯವಾಗುತ್ತಿತ್ತು ಎಂಬ ದೂರುಗಳೂ ಇವೆ. ಆದರೆ ಬ್ರೋಕರ್‌ಗಳು ಯಾರಿಗೆ ನೀಡುತ್ತಿದ್ದರು ಎಂಬುದು ಇನ್ನೂ ಗೊತ್ತಾಗಿಲ್ಲ ಎಂದು ಎಸಿಬಿ ಅಧಿಕಾರಿಗಳು ತಿಳಿಸಿದ್ದಾರೆ.

ಎಸಿಬಿ ಡಿವೈಎಸ್‌ಪಿ ಪರಮೇಶ್ವರ್‌ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಇನ್‌ಸ್ಪೆಕ್ಟರ್‌ಗಳಾದ ಮಧುಸೂದನ್‌, ನಾಗಪ್ಪ, ಶಿವಮೊಗ್ಗ ಎಸಿಬಿ ಇನ್‌ಸ್ಪೆಕ್ಟರ್‌ ತಿಪ್ಪೇಸ್ವಾಮಿ ಮತ್ತು ಸಿಬ್ಬಂದಿ ಭಾಗವಹಿಸಿದ್ದರು. ತನಿಖೆ ಮುಂದುವರಿದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT