ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಮನಸೆಳೆದ ‘ಸಖಿ’ ಪಿಂಕ್‌ ಮತಗಟ್ಟೆಗಳು

ಮತಗಟ್ಟೆಗಳಿಂದ ಉತ್ತಮ ಪ್ರತಿಕ್ರಿಯೆ
Last Updated 13 ಮೇ 2018, 10:36 IST
ಅಕ್ಷರ ಗಾತ್ರ

ಬೇಲೂರು: ವಿಧಾನಸಭಾ ಚುನಾಣೆ ಹಿನ್ನಲೆ ಮಹಿಳಾ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿರುವ ಕಡೆ ಸಖಿ ಪಿಂಕ್‌ ಮಹಿಳಾ ಮತಗಟ್ಟೆ ಸ್ಥಾಪಿಸಲಾಗಿತ್ತು.

ಈ ಮತಗಟ್ಟೆಗಳಲ್ಲಿ ಉತ್ತಮ ಪ್ರತಿಕ್ರಿಯೆ ದೊರೆತಿದ್ದು, ಬೆಳಗಿನಿಂದಲೇ ಮಹಿಳೆಯರು ಸರತಿ ಸಾಲಿನಲ್ಲಿ ನಿಂತು ತಮ್ಮ ಹಕ್ಕು ಚಲಾಯಿಸಿದರು.

ಪಿಂಕ್‌ ಮತಗಟ್ಟೆಯ ಕೊಠಡಿಗಳನ್ನು ಗುಲಾಬಿ ಬಣ್ಣದಿಂದಲೇ ಶೃಂಗರಿಸಲಾಗಿತ್ತು. ಮಹಿಳಾ ಸಿಬ್ಬಂದಿಯೇ  ಇದ್ದರು.

ಮತದಾರರು ಸಕ್ರಿಯ ಭಾಗವಹಿಸುವಿಕೆ ಉತ್ತೇಜಿಸಲು ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಮಹಿಳೆಯರ ಸಂಖ್ಯೆ ಗಮನಿಸಿ ಕ್ಷೇತ್ರಕ್ಕೆ ಎರಡು ಮಹಿಳಾ ಮತಗಟ್ಟೆ ಸ್ಥಾಪಿಸಲು ಸೂಚಿಸಲಾಗಿತ್ತು.

ಬೇಲೂರು ವಿಧಾನಸಭಾ ಚುನಾವಣೆಯಲ್ಲಿ ಮತಗಟ್ಟೆ 238ರ ಅರೇಹಳ್ಳಿ ಮತ್ತು ಮತಗಟ್ಟೆ 199ರ ಚೀಕನಹಳ್ಳಿ ಮತಗಟ್ಟೆಗಳಲ್ಲಿ ಅತಿಹೆಚ್ಚು ಮಹಿಳಾ ಮತದಾರರನ್ನು ಹೊಂದಿರುವ ಕಾರಣ ಎರಡು ಮಹಿಳಾ ಮತಗಟ್ಟೆ ನೀಡಿದ್ದು, ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಮತದಾನ ಮಾಡಿದರು.

‘ಮಹಿಳೆಯರು ಅಂಜಿಕೆ ಇಲ್ಲದೆ ಮತದಾನ ಮಾಡಬೇಕು ಎಂದು ಮಹಿಳೆಯರಿಗೆ ಪ್ರತ್ಯೇಕ ಮತಗಟ್ಟೆ ನಿರ್ಮಿಸಿದ್ದು, ನಿಜಕ್ಕೂ ಉತ್ತಮವಾಗಿದೆ. ಮತಗಟ್ಟೆಯನ್ನು ಸಿಂಗಾರ ಮಾಡಿರುವುದು ನಮಗೆ ಮತದಾನ ಮಾಡಲು ಪ್ರೊತ್ಸಾಹ ನೀಡಿದೆ.’ ಎನ್ನುತ್ತಾರೆ ಚೀಕನಹಳ್ಳಿಯ ಸುನೀತಾ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT