ಸಂತೇಬೆನ್ನೂರು: ಎರಡು ದಶಕಗಳ ಹಿಂದೆಯೇ ಶಿಥಿಲಾವಸ್ಥೆ ತಲುಪಿರುವ ಜಲಸಂಪನ್ಮೂಲ ಇಲಾಖೆಯ ಪ್ರವಾಸಿ ಮಂದಿರದ ನೆಲಸಮಕ್ಕೆ ನಿರ್ಲಕ್ಷ್ಯ ವಹಿಸಿದ ಪರಿಣಾಮ ಇಡೀ ಕಟ್ಟಡ ಪಾಳು ಬಿದ್ದು, ಭೂತ ಬಂಗಲೆಯಂತಾಗಿದೆ.

ಕುಮಟಾ– ಕಡಮಡಗಿ ರಾಜ್ಯ ಹೆದ್ದಾರಿ ಬದಿಯಲ್ಲಿ ಇರುವ ಅಂದಾಜು ನಾಲ್ಕು ಎಕರೆ ಪ್ರದೇಶದಲ್ಲಿನ ಈ ಕಟ್ಟಡದ ಸುತ್ತ ಮರ-ಗಿಡಗಳು, ಪೊದೆ ಬೆಳೆದುಕೊಂಡಿದ್ದು, ಪ್ರವಾಸಿ ಮಂದಿರ ಹೊರತಾಗಿ ನಿವೇಶನದಲ್ಲಿ ಇಲಾಖೆ ನೌಕರರಿಗೆ ನಿರ್ಮಿಸಿದ್ದ ವಸತಿ ಗೃಹಗಳೂ ಪಾಳು ಬಿದ್ದಿವೆ. ಸಾರ್ವಜನಿಕರು ಈ ಬಗ್ಗೆ ಹಲವು ಬಾರಿ ಇಲಾಖೆ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ.

‘ಪಾಳು ಬಿದ್ದ ಕಟ್ಟಡಗಳ ಸುತ್ತ ಇರುವ ಪೊದೆಗಳು ವಿಷಜಂತುಗಳ ಆವಾಸ ಸ್ಥಾನವಾಗಿವೆ. ರಾತ್ರಿ ಮುಖ್ಯ ರಸ್ತೆಯತ್ತ ಹಾವುಗಳು ಹರಿದಾಡುತ್ತಿದ್ದು, ಸಾರ್ವಜನಿಕರಲ್ಲಿ ಭಯ ಉಂಟುಮಾಡಿವೆ. ನಿವೇಶನದ ಸುತ್ತ ಇರುವ ಕೆಲವು ಮನೆಗಳ ನಿವಾಸಿಗಳು ಪೊದೆಗಳಿಂದಾಗಿ ಭಯಭೀತರಾಗಿದ್ದಾರೆ’ ಎನ್ನುತ್ತಾರೆ ಅಲ್ಲಿನ ನಿವಾಸಿ ನಾಗರಾಜ್.

ಬೇಸಿಗೆ ಆರಂಭದಲ್ಲಿ ಪ್ರವಾಸಿ ಮಂದಿರದ ಆವರಣದಲ್ಲಿನ ಪೊದೆಗಳಿಗೆ ಆಕಸ್ಮಿಕ ಬೆಂಕಿ ತಗುಲಿತ್ತು. ಅಗ್ನಿಶಾಮಕ ದಳದ ಸಿಬ್ಬಂದಿ ತಕ್ಷಣಕ್ಕೆ ಧಾವಿಸಿ ಬೆಂಕಿ ನಂದಿಸಿದರು. ಇಲ್ಲದಿದ್ದರೆ ಸುತ್ತಮುತ್ತಲ ಮನೆಗಳವರಿಗೂ ಸಮಸ್ಯೆ ಆಗುತ್ತಿತ್ತು ಎಂದು ಸ್ಥಳೀಯರು ಹೇಳಿದರು.

70ರ ದಶಕದಲ್ಲಿ ಭದ್ರಾ ನಾಲೆ ನಿರ್ಮಾಣದ ನಂತರ ಪ್ರವಾಸಿ ಮಂದಿರ ನಿರ್ಮಿಸಲಾಗಿತ್ತು. ಸುಸಜ್ಜಿತ ಕೊಠಡಿಗಳು ಹಾಗೂ ಸ್ವಚ್ಛ ಪರಿಸರದಿಂದ ಅದು ಮನ ಸೆಳೆಯುತ್ತಿತ್ತು. ರಾಜಕಾರಣಿಗಳು, ಅಧಿಕಾರಿಗಳು ಈ ಭಾಗದ ಭೇಟಿ ಸಂದರ್ಭ ತಂಗಲು, ಸಭೆ ನಡೆಸಲು, ಭೋಜನ ವ್ಯವಸ್ಥೆ ಕಲ್ಪಿಸಲು ಅನುಕೂಲಕರವಾಗಿತ್ತು. ಕಟ್ಟಡ ಹಳೆಯದಾದಂತೆ ನಿರ್ವಹಣೆಯಿಲ್ಲದೆ ಪಾಳು ಬಿದ್ದು ನಂತರ ಗ್ರಾಮಕ್ಕೆ ಭೇಟಿ ನೀಡುವ ಅಧಿಕಾರಿಗಳಿಗೆ ಸೂಕ್ತ ವ್ಯವಸ್ಥೆ ಇಲ್ಲದಂತಾಗಿದೆ.

‘ಈ ಊರು ದೊಡ್ಡದಾಗಿದ್ದು, ಸುಸಜ್ಜಿತ ಪ್ರವಾಸಿ ಮಂದಿರ ನಿರ್ಮಿಸಲು ಜನಪ್ರತಿನಿಧಿಗಳು ಪ್ರಯತ್ನಿಸಿದರೂ ಪ್ರಯೋಜನವಾಗಿಲ್ಲ’ ಎನ್ನುತ್ತಾರೆ ಎಪಿಎಂಸಿ ಮಾಜಿ ಅಧ್ಯಕ್ಷ ಎಂ.ಸಿದ್ದಪ್ಪ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260513-43-1432465151

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.