ಸಾಸ್ವೆಹಳ್ಳಿ: ಸಮೀಪದ ಲಿಂಗಾಪುರ ಗ್ರಾಮದಲ್ಲಿ ಹುಲಿಗೆಮ್ಮ ದೇವಿಯ ಜಾತ್ರಾ ಮಹೋತ್ಸವ ಗುರುವಾರ ಸಂಭ್ರಮದಿಂದ ಜರುಗಿತು.

ಈ ಭಾಗದ ಜನರ ಆರಾಧ್ಯ ದೈವವಾಗಿರುವ ದೇವಿಯ ಪವಾಡಗಳನ್ನು ವೀಕ್ಷಿಸಲು ಭಕ್ತರು ಸೇರಿದ್ದರು. ಗ್ರಾಮದಲ್ಲಿ ಹಬ್ಬದ ವಾತಾವರಣ ಮನೆ ಮಾಡಿತ್ತು.

ಮಂಗಳವಾರ ಮತ್ತು ಬುಧವಾರ ಗ್ರಾಮದಲ್ಲಿ ದೇವಿಯ ಮೆರವಣಿಗೆ ನಡೆಯಿತು. ಗುರುವಾರ ಬೆಳಿಗ್ಗೆ ಗಂಗಾ ಪೂಜೆಯೊಂದಿಗೆ ಸಂಭ್ರಮ ಕಳೆಗಟ್ಟಿತು. ದೇವತಾ ಮೂರ್ತಿಯನ್ನು ಹೊತ್ತಿದ್ದ ಲೋಹಿತ್ ಸ್ವಾಮಿಗಳು ಹಾಗೂ ಗ್ರಾಮಸ್ಥರು ವಾದ್ಯಮೇಳದೊಂದಿಗೆ ಹತ್ತಿರದ ಭದ್ರಾ ಕಾಲುವೆಗೆ ತೆರಳಿ ಪುಣ್ಯಸ್ನಾನ ಮಾಡಿ, ಗಂಗಾ ಪೂಜೆ ನೆರವೇರಿಸಿದರು. ನಂತರ ಗ್ರಾಮದಾದ್ಯಂತ ಮೆರವಣಿಗೆ ನಡೆಯಿತು.

ಗ್ರಾಮಸ್ಥರು ಅಗ್ನಿಕುಂಡವನ್ನು ಸಿದ್ಧಪಡಿಸಿದ್ದರು. ಹುಲಿಗಮ್ಮ ದೇವಿಯನ್ನು ಹೊತ್ತ ಸ್ವಾಮಿಗಳು ಮೊದಲು ಕೆಂಡ ಹಾಯುವ ಮೂಲಕ ಕೆಂಡಾರ್ಚನೆಗೆ ಚಾಲನೆ ನೀಡಿದರು. ಇವರನ್ನು ಅನುಸರಿಸಿ ಗ್ರಾಮದ ಮತ್ತು ಸುತ್ತಮುತ್ತಲಿನ ಊರುಗಳಿಂದ ಆಗಮಿಸಿದ್ದ ಭಕ್ತರು ‘ಹುಲಿಗಮ್ಮ ತಾಯಿಗೆ ಜೈ’ ಎಂಬ ಘೋಷಣೆಯೊಂದಿಗೆ ಕೆಂಡವನ್ನು ಹಾಯ್ದು ತಮ್ಮ ಹರಕೆ ತೀರಿಸಿದರು.

ಜಾತ್ರೆಯ ಪ್ರಮುಖ ಆಕರ್ಷಣೆಯಾದ ‘ಪಾಯಸದ ಪವಾಡ’ ಭಕ್ತರಲ್ಲಿ ಭಕ್ತಿ ಭಾವದ ಜೊತೆಗೆ ರೋಮಾಂಚನ ಉಂಟುಮಾಡಿತು. ಒಲೆಯ ಮೇಲೆ ಕುದಿಯುತ್ತಿರುವ ಬಿಸಿ ಪಾಯಸಕ್ಕೆ ಸ್ವಾಮಿಗಳು ಬರಿಗೈ ಹಾಕಿ ನೈವೇದ್ಯಕ್ಕೆ ಎಡೆ ತೆಗೆದರು.

‘ಪಾಯಸವು ಪಾತ್ರೆಯ ಎಲ್ಲ ಭಾಗಗಳಲ್ಲೂ ಸಮನಾಗಿ ಬೆಂದಿದ್ದರೆ, ಆ ವರ್ಷ ಯಾವುದೇ ಸಂಕಷ್ಟಗಳಿಲ್ಲದೆ ಸಕಾಲಕ್ಕೆ ಮಳೆ-ಬೆಳೆಯಾಗಿ ಸಮೃದ್ಧಿ ನೆಲೆಸುತ್ತದೆ’ ಎಂಬುದು ಇಲ್ಲಿನವರ ನಂಬಿಕೆ. ಈ ಬಾರಿ ಪಾಯಸ ಉತ್ತಮವಾಗಿ ಬೆಂದಿರುವುದು ಗ್ರಾಮಸ್ಥರಲ್ಲಿ ಸಮಾಧಾನ ತಂದಿತು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260515-43-641332905

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.