ಲೈಂಗಿಕ ಕಿರುಕುಳ ಆರೋಪ: ಉಪನ್ಯಾಸಕನಿಗೆ ಥಳಿಸಿದ ವಿಡಿಯೊ ವೈರಲ್‌

ಬುಧವಾರ, ಜೂನ್ 19, 2019
22 °C

ಲೈಂಗಿಕ ಕಿರುಕುಳ ಆರೋಪ: ಉಪನ್ಯಾಸಕನಿಗೆ ಥಳಿಸಿದ ವಿಡಿಯೊ ವೈರಲ್‌

Published:
Updated:

ದಾವಣಗೆರ: ವಿದ್ಯಾರ್ಥಿನಿಯರಿಗೆ ಅಶ್ಲೀಲ ಸಂದೇಶ ಕಳುಹಿಸುವ ಮೂಲಕ ಕಿರುಕುಳ ನೀಡುತ್ತಿದ್ದಾನೆ ಎಂದು ಆರೋಪಿಸಿ ಉಪನ್ಯಾಸಕನಿಗೆ ವಿದ್ಯಾರ್ಥಿಗಳು ಅಟ್ಟಾಡಿಸಿ ಹೊಡೆಯುವ ವಿಡಿಯೊ ವೈರಲ್‌ ಆಗಿದೆ.

ಇಲ್ಲಿನ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಕನ್ನಡ ಉಪನ್ಯಾಸಕ ಬಿ.ಕೆ. ಬಸವರಾಜ್‌ ಏಟು ತಿಂದವರು. ವಿದ್ಯಾರ್ಥಿನಿಯರ ಮೊಬೈಲ್‌ ಸಂಖ್ಯೆ ಪಡೆದು ಅದಕ್ಕೆ ಏನೇನೋ ಸಂದೇಶ ಕಳುಹಿಸುತ್ತಿದ್ದ. ಅದನ್ನು ವಿದ್ಯಾರ್ಥಿನಿಯರು ಕೆಲವು ವಿದ್ಯಾರ್ಥಿಗಳಿಗೆ ತಿಳಿಸಿದ್ದಾರೆ. ಶನಿವಾರ ಸಂಜೆ ಕಾಲೇಜು ಆವರಣದಲ್ಲಿಯೇ ವಿದ್ಯಾರ್ಥಿಗಳ ಗುಂಪೊಂದು ಈ ಬಗ್ಗೆ ಪ್ರಶ್ನಿಸಿ ಏಟು ನೀಡಿದೆ. ಉಪನ್ಯಾಸಕ ತಪ್ಪಿಸಿಕೊಂಡು ಓಡುತ್ತಿದ್ದರೂ ಅಟ್ಟಾಡಿಸಿ ಹೊಡೆದಿದ್ದಾರೆ. ಇದರ ವಿಡಿಯೊ ಸೋಮವಾರ ನಗರದಾದ್ಯಂತ ಹರಡಿದೆ.

ಪೊಲೀಸರಿಗೆ ಮನವಿ: ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಳಗವು ಸೋಮವಾರ ಹೆತ್ತವರ ಜತೆಗೆ ಕಾಲೇಜಿಗೆ ಬಂದು ಈ ಬಗ್ಗೆ ವಿಚಾರಿಸಿದ್ದಾರೆ. ಬಳಿಕ ಬಡಾವಣೆ ಪೊಲೀಸರಿಗೆ ಮನವಿ ನೀಡಿದ್ದು, ಈ ಉಪನ್ಯಾಸಕ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದೆ. ವೇದಿಕೆಯ ಅಧ್ಯಕ್ಷೆ ಸುವರ್ಣಮ್ಮ, ಪುಷ್ಪಾವತಿ, ನೀಲಮ್ಮ, ಎಂ. ರಾಜಕುಮಾರ್‌ ಅವರೂ ಇದ್ದರು.

ದೂರು ಬಂದರೆ ನೋಟಿಸ್‌: ತೊಂದರೆಗೆ ಈಡಾದ ವಿದ್ಯಾರ್ಥಿನಿಯರಾಗಲಿ, ಅವರ ಹೆತ್ತವರಾಗಲಿ, ಏಟು ನೀಡಿದವರಾಗಲಿ, ಏಟು ತಿಂದವರಾಗಲಿ ಯಾರೂ ದೂರು ನೀಡಿಲ್ಲ. ಆ ಉಪನ್ಯಾಸಕ ಸಂಪರ್ಕಕ್ಕೂ ಸಿಕ್ಕಿಲ್ಲ. ದೂರು ಬಂದರೆ ಆ ಉಪನ್ಯಾಸಕರಿಗೆ ಕಾರಣ ಕೇಳಿ ನೋಟಿಸ್‌ ನೀಡಲಾಗುವುದು. ಅವರಿಂದ ಉತ್ತರ ಪಡೆದು ಮೇಲಧಿಕಾರಿಗಳಿಗೆ ಬರೆಯಲಾಗುವುದು ಎಂದು ಪ್ರಾಂಶುಪಾಲ ಪ್ರೊ. ತೂ.ಕ. ಶಂಕರಯ್ಯ ತಿಳಿಸಿದ್ದಾರೆ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !