ಮಾತೆ ಮಹಾದೇವಿ ಆರೋಗ್ಯ ವಿಚಾರಿಸಿದ ಶಾಸಕ ಶಾಮನೂರು ಶಿವಶಂಕರಪ್ಪ

7

ಮಾತೆ ಮಹಾದೇವಿ ಆರೋಗ್ಯ ವಿಚಾರಿಸಿದ ಶಾಸಕ ಶಾಮನೂರು ಶಿವಶಂಕರಪ್ಪ

Published:
Updated:

ದಾವಣಗೆರೆ: ಅನಾರೋಗ್ಯದಿಂದ ಬಳಲಿರುವ ಕೂಡಲ ಸಂಗಮದ ಬಸವಧರ್ಮ ಪೀಠದ ಅಧ್ಯಕ್ಷೆ ಮಾತೆ ಮಹಾದೇವಿ ಅವರ ಆರೋಗ್ಯವನ್ನು ಅಖಿಲ ಭಾರತ ವೀರಶೈವ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ವಿಚಾರಿಸಿದ್ದಾರೆ.

ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ಭೇಟಿ ನೀಡಿದ ಶಿವಶಂಕರಪ್ಪ, ಮಾತೆ ಮಹಾದೇವಿ ಅವರ ಆರೋಗ್ಯದ ಬಗ್ಗೆ ವೈದ್ಯರ ಜತೆಗೆ ಚರ್ಚಿಸಿದರು.

ಮಾತೆ ಮಹಾದೇವಿ ಅವರು ಶೀಘ್ರ ಗುಣಮುಖರಾಗಲಿ ಎಂದು ಪ್ರಾರ್ಥಿಸಿರುವ ಶಾಮನೂರು, ‘ವೀರಶೈವ-ಲಿಂಗಾಯಿತ ಧರ್ಮವಷ್ಟೇ ಅಲ್ಲ. ಜಗತ್ತಿಗೆ ಶರಣರು, ಸಾಧು-ಸಂತರ ಕೊಡುಗೆ ಅಪಾರ. ಸಮಾಜಕ್ಕೆ ಅವರ ಮಾರ್ಗದರ್ಶನದ ಅಗತ್ಯವಿದೆ’ ಎಂದು ಹೇಳಿದರು.

ಈ ಸಂದರ್ಭದಲ್ಲಿ ಅಥಣಿ ವೀರಣ್ಣ, ಡಾ. ಬಲ್ಲಾಳ್, ಡಾ. ಶಿವಶಂಕರ್, ದಾವಣಗೆರೆ ಪಾಲಿಕೆ ಸದಸ್ಯ ದಿನೇಶ್ ಕೆ. ಶೆಟ್ಟಿ ಅವರೂ ಇದ್ದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !