ಲಿಂಗದೊಳಗೊಂದು ಲಿಂಗ: ವದಂತಿಗೆ ಜನಜಾತ್ರೆ

7

ಲಿಂಗದೊಳಗೊಂದು ಲಿಂಗ: ವದಂತಿಗೆ ಜನಜಾತ್ರೆ

Published:
Updated:
Deccan Herald

ಹರಿಹರ: ನಗರದ ಹಳ್ಳದಕೇರಿಯ ಭರಮಪ್ಪಸ್ವಾಮಿ ದೇವಸ್ಥಾನದ ಕಪ್ಪು ಕಲ್ಲಿನ ಲಿಂಗದಲ್ಲಿ ಬಿಳಿ ಬಣ್ಣದ ಲಿಂಗವೊಂದು ಕಾಣುತ್ತಿದೆ ಎಂಬ ವದಂತಿ ಜನರ ಆಕರ್ಷಣೆಗೆ ಕಾರಣವಾಗಿದೆ.

ಆಲದಮರ, ಬೇವಿನ ಮರ ಹಾಗೂ ಬನ್ನಿ ಗಿಡಗಳು ಒಂದೆಡೆ ಬೆಳೆದ ಜಾಗದ ಸುತ್ತಲೂ ಕಟ್ಟೆ ಇದ್ದು, ವಿವಿಧ ಬಗೆಯ ಲಿಂಗಗಳಿಗೆ ಅಲ್ಲಿ ಹಲವು ವರ್ಷಗಳಿಂದ ಪೂಜೆ ನಡೆಸಲಾಗುತ್ತಿದೆ. ಶ್ರಾವಣ ಮಾಸದ ಆರಂಭದ ಹಿನ್ನೆಲೆಯಲ್ಲಿ ಕಟ್ಟೆಯ ಮೇಲಿನ ಕಲ್ಲಿನ ಮೂರ್ತಿ, ಲಿಂಗಗಳಿಗೆ ಸುಣ್ಣ ಬಳಿಯುತ್ತಿದ್ದರು. ಆಗ ಒಂದು ಲಿಂಗದಲ್ಲಿ ಬಿಳಿ ಆಕಾರ ಕಂಡು ಬಂದಿದೆ. ಏನಿದು ಎಂದು ಆಸಕ್ತಿಯಿಂದ ಹತ್ತಿರದಿಂದ ಪರೀಕ್ಷಿಸಿದಾಗ ಕಪ್ಪು ಲಿಂಗದೊಳಗೆ ಬಿಳಿ ಬಣ್ಣದ ಚಿಕ್ಕ ಉಬ್ಬು ಕಂಡು ಬಂದಿದೆ.

‘ಕೆಲ ಅರ್ಚಕರನ್ನು ಸ್ಥಳಕ್ಕೆ ಕರೆಸಲಾಯಿತು. ಅವರು ಪರೀಕ್ಷಿಸಿ, ಲಿಂಗದೊಳಗೆ ಇನ್ನೊಂದು ಲಿಂಗ ಉದ್ಭವವಾಗುತ್ತಿದೆ ಎಂದು ಹೇಳಿದರು. ನಂತರ ಭಕ್ತರು ಈ ಲಿಂಗಕ್ಕೆ ವಿಶೇಷ ಪೂಜೆ ಸಲ್ಲಿಸಿದರು. ಸುದ್ದಿ ತಿಳಿದು ಸುತ್ತಲಿನ ಆಸ್ತಿಕ ಮಹಿಳೆಯರು, ಮಕ್ಕಳು, ಜನರು ಗುಂಪಾಗಿ ಬಂದು ಉದ್ಭವ ಲಿಂಗವನ್ನು ಕೌತುಕದಿಂದ ವೀಕ್ಷಣೆ ಮಾಡುತ್ತಿದ್ದಾರೆ’ ಎಂದು ಸ್ಥಳೀಯರು ತಿಳಿಸಿದರು.

ಲಿಂಗದೊಳಗೆ ಉದ್ಭವವಾಗಿರುವ ಲಿಂಗವನ್ನು ಪುರೋಹಿತ ವಿಶ್ವನಾಥ ಶಾಸ್ತ್ರಿ ಪರೀಕ್ಷಿಸಿದ್ದಾರೆ. ಇದು ದೇವರ ಪವಾಡವೆಂದು ಹೇಳಿದ್ದಾರೆ. ಜನರು ಆಸಕ್ತಿಯಿಂದ ವೀಕ್ಷಿಸಿ ಪೂಜೆ ಸಲ್ಲಿಸುತ್ತಿದ್ದಾರೆ
-ಸಿ.ಬಿ. ರಾಘವೇಂದ್ರ, ವಕೀಲ, ಹಳ್ಳದಕೇರಿ

Tags: 

ಬರಹ ಇಷ್ಟವಾಯಿತೆ?

  • 0

    Happy
  • 0

    Amused
  • 0

    Sad
  • 0

    Frustrated
  • 0

    Angry

Comments:

0 comments

Write the first review for this !