ಸಿದ್ಧರಾಮೇಶ್ವರ ರಥೋತ್ಸವ 13ರಂದು

7

ಸಿದ್ಧರಾಮೇಶ್ವರ ರಥೋತ್ಸವ 13ರಂದು

Published:
Updated:

ದಾವಣಗೆರೆ: ಜಗದ್ಗುರು ಸಿದ್ಧರಾಮೇಶ್ವರ ಮಹಾಸಂಸ್ಥಾನ ದಾವಣಗೆರೆ ಶಾಖೆ ನೇತೃತ್ವದಲ್ಲಿ ಆಗಸ್ಟ್‌ 13ರಂದು ಬೆಳಿಗ್ಗೆ 9ಕ್ಕೆ ವೆಂಕಾಭೋವಿ ಕಾಲೊನಿಯಲ್ಲಿ ಶಿವಯೋಗಿ ಸಿದ್ಧರಾಮೇಶ್ವರ ಅವರ 56ನೇ ರಥೋತ್ಸವ ಜರುಗಲಿದೆ ಎಂದು ಸಮಾಜದ ಮುಖಂಡ ಡಿ. ಬಸವರಾಜ್ ಹೇಳಿದರು.

ಇದೇ ಸಂದರ್ಭದಲ್ಲಿ ಸಿದ್ಧರಾಮೇಶ್ವರ ಸ್ವಾಮೀಜಿ ಅವರ 16ನೇ ಸಂಸ್ಮರಣೋತ್ಸವ ನಡೆಸಲಾಗುವುದು. ಭೋವಿ ಪೀಠಾಧ್ಯಕ್ಷ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ರಥೋತ್ಸವದ ಹಿನ್ನೆಲೆಯಲ್ಲಿ ಇದೇ 11ರಂದು ಬೆಳಿಗ್ಗೆ 9ಕ್ಕೆ ವಚನಾಭಿಷೇಕ ಕಾರ್ಯಕ್ರಮ ಏರ್ಪಡಿಸಲಾಗಿದೆ. ಸಂಜೆ 7ಕ್ಕೆ ಸಿದ್ಧರಾಮೇಶ್ವರ ಜೀವನ ದರ್ಶನ ಕುರಿತು ಪ್ರವಚನ ನಡೆಯಲಿದೆ. 12ರಂದು ರಾತ್ರಿ 10ರಿಂದ ಮಹಾವಚನ ಭಜನೆ ನೆರವೇರಲಿದೆ ಎಂದರು.

ಭೋವಿ ಕಾಲೊನಿ, ಸಿದ್ಧರಾಮೇಶ್ವರ ದೇಗುಲ, ಕೆ.ಆರ್‌. ರಸ್ತೆ, ಚಾಮರಾಜಪೇಟೆ, ಹರ್ಡೇಕರ್‌ ಮಂಜಪ್ಪ ರಸ್ತೆ ಮಾರ್ಗದಲ್ಲಿ ರತೋತ್ಸವ ಜರುಗಿ, ದೇವಸ್ಥಾನಕ್ಕೆ ಹಿಂತಿರುಗಲಿದೆ. ರಥೋತ್ಸವದ ನಂತರ ಅನ್ನ ಸಂತರ್ಪಣೆ ಕಾರ್ಯ ನಡೆಯಲಿದೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಸಮಾಜದ ಮುಖಂಡರಾದ ಬಿ.ಟಿ. ಸಿದ್ದಪ್ಪ, ಎಚ್‌. ಜಯಣ್ಣ, ಆರ್‌. ಶ್ರೀನಿವಾಸ್, ಎ.ಬಿ. ನಾಗರಾಜ್, ಎಚ್‌.ಸಿದ್ದರಾಮಪ್ಪ, ಡಿ. ವಿಜಯಕುಮಾರ್, ಡಿ. ಶಿವಕುಮಾರ್, ಎಚ್‌. ಚಂದ್ರಪ್ಪ ಅವರೂ ಇದ್ದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !