ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈರುಳ್ಳಿ ರಫ್ತು ನಿಯಮ ಸಡಿಲು

Last Updated 27 ಫೆಬ್ರುವರಿ 2018, 19:30 IST
ಅಕ್ಷರ ಗಾತ್ರ

ನವದೆಹಲಿ: ಈರುಳ್ಳಿ ರಫ್ತು ಮೇಲಿನ ನಿರ್ಬಂಧಗಳನ್ನು ಕೇಂದ್ರ ಸರ್ಕಾರ ಸಡಿಲಿಸಿದೆ.

ಕನಿಷ್ಠ ರಫ್ತು ಬೆಲೆ (ಎಂಇಪಿ) ಅಥವಾ ಹಣ ಪಾವತಿಯ ಖಾತರಿ ಪತ್ರ  (ಎಲ್‌ಸಿ) ಇಲ್ಲದೇ ರಫ್ತು ಮಾಡಬಹುದಾಗಿದೆ ಎಂದು ವಿದೇಶ ವ್ಯಾಪಾರದ ಮಹಾ ನಿರ್ದೇಶನಾಯಲ (ಡಿಜಿಎಫ್‌ಟಿ) ಸ್ಪಷ್ಟನೆ ನೀಡಿದೆ.

‘ಎಲ್‌ಸಿ’ ರದ್ದುಪಡಿಸಿದ್ದರೂ ಕಸ್ಟಮ್ಸ್‌ ಇಲಾಖೆಯು ಸರಕಿನ ರಫ್ತಿಗೆ ಅವಕಾಶ ಮಾಡಿಕೊಡುತ್ತಿಲ್ಲ ಎಂದು ಈರುಳ್ಳಿ ರಫ್ತುದಾರರು ದೂರು ಸಲ್ಲಿಸಿದ್ದರು. ಫೆಬ್ರುವರಿ 2ರಿಂದಲೇ ‘ಎಂಇಪಿ’ ಮತ್ತು ‘ಎಲ್‌ಸಿ’ ಇಲ್ಲದೇ ರಫ್ತಿಗೆ ಅವಕಾಶ ಮಾಡಿಕೊಡಲಾಗಿದೆ. ಇದು ಮುಂದಿನ ಆದೇಶದವರೆಗೆ ಜಾರಿಯಲ್ಲಿ ಇರಲಿದೆ.

ಉತ್ಪಾದನೆ ಹೆಚ್ಚಳಗೊಂಡು ಬೆಲೆ ಕುಸಿತಗೊಂಡ ಕಾರಣಕ್ಕೆ ರಫ್ತು ಉತ್ತೇಜಿಸಲು ಈ ನಿಬಂಧನೆಗಳನ್ನು ತೆರವುಗೊಳಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT