ಮಂಡಕ್ಕಿ ಭಟ್ಟಿಯಲ್ಲಿ ಅತ್ಯಾಧುನಿಕ ಶೌಚಾಲಯ, ಸ್ನಾನಗೃಹ ಉದ್ಘಾಟನೆ

7

ಮಂಡಕ್ಕಿ ಭಟ್ಟಿಯಲ್ಲಿ ಅತ್ಯಾಧುನಿಕ ಶೌಚಾಲಯ, ಸ್ನಾನಗೃಹ ಉದ್ಘಾಟನೆ

Published:
Updated:
Deccan Herald

ದಾವಣಗೆರೆ : ಸ್ಮಾರ್ಟ್‌ ಸಿಟಿ ಯೋಜನೆಯಡಿ ನಗರದ ಮಂಡಕ್ಕಿ ಭಟ್ಟಿ ಪ್ರದೇಶದಲ್ಲಿ ₹ 32.36 ಲಕ್ಷ ವೆಚ್ಚದಲ್ಲಿ ನಿರ್ಮಿಸಿದ ಅತ್ಯಾಧುನಿಕ ಶೌಚಾಲಯ, ಸ್ನಾನಗೃಹವನ್ನು ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಶಾಮನೂರು ಶಿವಶಂಕರಪ್ಪ ಭಾನುವಾರ ಉದ್ಘಾಟಿಸಿದರು.

ಸ್ಮಾರ್ಟ್‌ ಸಿಟಿ ಯೋಜನೆಯಡಿ ಪೂರ್ಣಗೊಂಡಿರುವ ಪ್ರಥಮ ಕಾಮಗಾರಿ ಇದಾಗಿದೆ. ನಾಗರಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಶಾಸಕರು ಸಲಹೆ ನೀಡಿದರು.

ಈ ಅತ್ಯಾಧುನಿಕ ಶೌಚಾಲಯದಲ್ಲಿ ಎರಡು ಬ್ಲಾಕ್‌ಗಳನ್ನು ನಿರ್ಮಿಸಲಾಗಿದೆ. ಪುರುಷರು ಹಾಗೂ ಮಹಿಳೆಯರಿಗೆ ಪ್ರತ್ಯೇಕ ಬ್ಲಾಕ್‌ಗಳನ್ನು ಮೀಸಲಿಡಲಾಗಿದೆ. ಎರಡು ಬ್ಲಾಕ್‌ಗಳಲ್ಲೂ ಐದು ಸ್ನಾನದ ಕೋಣೆಗಳು, ನಾಲ್ಕು ಶೌಚಾಲಯ ಕೋಣೆಗಳಿವೆ. ಶೌಚಾಲಯಗಳ ನಿರ್ವಹಣೆ ಮಾಡಲು ಗುತ್ತಿಗೆ ನೀಡಲಾಗಿದೆ ಎಂದು ಶಾಮನೂರು ತಿಳಿಸಿದರು.

ಮೇಯರ್‌ ಶೋಭಾ ಪಲ್ಲಾಗಟ್ಟೆ, ಉಪ ಮೇಯರ್‌ ಕೆ. ಚಮನ್ ಸಾಬ್, ಸದಸ್ಯರಾದ ಎ.ಬಿ. ರಹೀಂಸಾಬ್, ಅಲ್ತಾಫ್ ಹುಸೇನ್, ‘ಧೂಡಾ’ ಮಾಜಿ ಅಧ್ಯಕ್ಷ ಅಯೂಬ್ ಪೈಲ್ವಾನ್, ಕಾರ್ಯಪಾಲಕ ಎಂಜಿನಿಯರ್‌ಗಳಾದ ಗುರುಪಾದಯ್ಯ, ಚಂದ್ರಶೇಖರ್, ಹೈಡೆಕ್ ಸಂಸ್ಥೆಯ ಶ್ರೀನಾಥ್ ರೆಡ್ಡಿ, ಚಂದ್ರಶೇಖರ್, ಮಂಡಕ್ಕಿ ಭಟ್ಟಿ ಸಂಘದ ಕಾರ್ಯದರ್ಶಿ ಎಂ.ಆರ್.ಸಿದ್ದಿಕ್, ಮುಖಂಡರಾದ ಜಾಕೀರ್, ದಾದಾಪೀರ್ ಉಪಸ್ಥಿತರಿದ್ದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !