ಮಗಳನ್ನು ಮದುವೆ ಮಾಡಿ ಕೊಡಲ್ಲವೆಂದ ಪ್ರೀಯತಮೆಯ ತಂದೆಗೆ ಗುಂಡು ಹಾರಿಸಿದ ಯೋಧನ ಬಂಧನ

ಬುಧವಾರ, ಜೂನ್ 19, 2019
27 °C

ಮಗಳನ್ನು ಮದುವೆ ಮಾಡಿ ಕೊಡಲ್ಲವೆಂದ ಪ್ರೀಯತಮೆಯ ತಂದೆಗೆ ಗುಂಡು ಹಾರಿಸಿದ ಯೋಧನ ಬಂಧನ

Published:
Updated:
Prajavani

ಹೊನ್ನಾಳಿ (ದಾವಣಗೆರೆ ಜಿಲ್ಲೆ): ತಾಲ್ಲೂಕಿನ ಬಿದರಗಡ್ಡೆಯಲ್ಲಿ ತಾನು ಪ್ರೀತಿಸುತ್ತಿದ್ದ ಹುಡುಗಿಯನ್ನು ಮದುವೆ ಮಾಡಿಕೊಡಲು ನಿರಾಕರಿಸಿದ್ದರಿಂದ ಸಿಟ್ಟಿಗೆದ್ದ ಯೋಧ ದೇವರಾಜ್‌, ಆಕೆಯ ತಂದೆ ಪ್ರಕಾಶ್‌ ಅವರ ಮೇಲೆ ಶುಕ್ರವಾರ ರಾತ್ರಿ ಪಿಸ್ತೂಲ್‌ನಿಂದ ಗುಂಡು ಹಾರಿಸಿ ಕೊಲೆ ಮಾಡಲು ಯತ್ನಿಸಿದ್ದಾನೆ. ಬಳಿಕ ಪೊಲೀಸ್‌ ಠಾಣೆಗೆ ತೆರಳಿ ಶರಣಾಗಿದ್ದಾನೆ.

ಬಿದರಗಡ್ಡೆಯ ಪ್ರಕಾಶ್‌ ಅವರಿಗೆ ಎರಡು ಗುಂಡುಗಳು ತಗಲಿದ್ದು, ಶಿವಮೊಗ್ಗದ ಖಾಸಗಿ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ನಡೆಸಿ ಒಂದು ಗುಂಡನ್ನು ಹೊರಗೆ ತೆಗೆಯಲಾಗಿದೆ. ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಬಿದರಗಡ್ಡೆಯ ಗ್ರಾಮದ ದೇವರಾಜ್‌ ಎಂಟು ವರ್ಷಗಳ ಹಿಂದೆ ಸೇನೆಗೆ ಸೇರಿದ್ದ ಎನ್ನಲಾಗಿದೆ. ಮೂರು–ನಾಲ್ಕು ವರ್ಷಗಳಿಂದ ಪ್ರಕಾಶ್‌ ಅವರ ಮಗಳನ್ನು ಈತ ಪ್ರೀತಿಸುತ್ತಿದ್ದ. ಪ್ರಕಾಶ್‌ ಅವರ ಮಗಳು ದಾವಣಗೆರೆಯ ಕಾಲೇಜೊಂದರಲ್ಲಿ ಓದುತ್ತಿದ್ದಳು. ದೇವರಾಜ್‌ ಜೊತೆಗೆ ಮದುವೆ ಮಾಡಿಕೊಡಲು ಪ್ರಕಾಶ್‌ ಕುಟುಂಬದವರಿಗೆ ಮನಸ್ಸಿರಲಿಲ್ಲ. ಮನೆಯತ್ತ ಸುಳಿಯದಂತೆ ದೇವರಾಜ್‌ಗೆ ತಾಕೀತು ಮಾಡಿದ್ದರು.

ರಜೆಯ ಮೇಲೆ ಬಂದಿದ್ದ ದೇವರಾಜ್‌ ಶುಕ್ರವಾರ ರಾತ್ರಿ 11 ಗಂಟೆಯ ಹೊತ್ತಿಗೆ ಪ್ರಕಾಶ್‌ ಅವರ ಮನೆಯ ಬಳಿ ಬಂದು ಮೂರು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿದ್ದಾನೆ. ಬಳಿಕ ಮನೆಯ ಬಾಗಿಲು ಬಡಿದಿದ್ದಾನೆ. ಬಾಗಿಲು ತೆಗೆಯುತ್ತಿದ್ದಂತೆ ಪ್ರಕಾಶ್‌ ಮೇಲೆ ಎರಡು ಸುತ್ತು ಗುಂಡು ಹಾರಿಸಿದ್ದಾನೆ. ಒಂದು ಗುಂಡು ಹೊಟ್ಟೆ ಹಾಗೂ ಇನ್ನೊಂದು ಎದೆಯ ಬಳಿ ತಗುಲಿದೆ. ಹೀಗಿದ್ದರೂ ಪ್ರಕಾಶ್‌ ಅವರು ದೇವರಾಜ್‌ನನ್ನು ಬೆನ್ನಟ್ಟಿ ಸುಮಾರು 150 ಮೀಟರ್‌ ದೂರಕ್ಕೆ ಹೋಗಿದ್ದಾರೆ. ಆದರೆ, ಬಳಿಕ ಅಸ್ವಸ್ಥಗೊಂಡು ಕುಸಿದು ಬಿದ್ದಿದ್ದಾರೆ. ಬಳಿಕ ಅವರಿಗೆ ಹೊನ್ನಾಳಿ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ, ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ಒಯ್ಯಲಾಯಿತು.

ಈ ನಡುವೆ ಪ್ರಕಾಶ್‌ ಅವರ ಪತ್ನಿ ರತ್ನಮ್ಮ ಅವರ ಮೊಬೈಲ್‌ಗೆ ಕರೆ ಮಾಡಿದ ದೇವರಾಜ್‌, ಎಲ್ಲಿರುವುದಾಗಿ ವಿಚಾರಿಸಿದ್ದಾನೆ. ಹೊನ್ನಾಳಿ ಪೊಲೀಸ್‌ ಠಾಣೆಯಲ್ಲಿರುವುದಾಗಿ ಅವರು ಸುಳ್ಳು ಹೇಳಿದ್ದಾರೆ. ಬಳಿಕ ದೇವರಾಜ್‌ ತಡ ರಾತ್ರಿ ಹೊನ್ನಾಳಿ ಠಾಣೆಗೆ ಪಿಸ್ತೂಲ್‌ನೊಂದಿಗೆ ಬಂದು ಶರಣಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಟಿ.ಜೆ. ಉದೇಶ್‌ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 10

  Happy
 • 1

  Amused
 • 2

  Sad
 • 0

  Frustrated
 • 3

  Angry

Comments:

0 comments

Write the first review for this !