ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೆಹಲಿಯಲ್ಲಿ ₹ 74.08ಕ್ಕೇರಿದ ಲೀ. ಪೆಟ್ರೋಲ್‌ ಬೆಲೆ: 2013ರ ಬಳಿಕ ಗರಿಷ್ಠ ದರ

Last Updated 20 ಏಪ್ರಿಲ್ 2018, 10:38 IST
ಅಕ್ಷರ ಗಾತ್ರ

ನವದೆಹಲಿ: ದೆಹಲಿಯಲ್ಲಿ ಪೆಟ್ರೋಲ್‌ ಬೆಲೆ ₹ 74.08ಕ್ಕೆ ಏರಿದ್ದು, ಕಳೆದ ಐದು ವರ್ಷಗಳಲ್ಲೇ ಇದು ಅತ್ಯಂತ ಗರಿಷ್ಠ ದರವಾಗಿದೆ. ರಾಜಧಾನಿಯಲ್ಲಿ 2013ರ ಸೆಪ್ಟೆಂಬರ್‌ನಲ್ಲಿ ಪೆಟ್ರೋಲ್‌ ದರ ₹ 74.10 ರಷ್ಟಿತ್ತು.

ಕೊಲ್ಕತ್ತ, ಮುಂಬೈ ಹಾಗೂ ಚೆನ್ನೈನಲ್ಲಿಯೂ ಪೆಟ್ರೋಲ್‌ ದರ ಹೆಚ್ಚಳವಾಗಿದ್ದು, ಇತ್ತೀಚಿನ ವರ್ಷಗಳಲ್ಲಿ ಇದು ಗರಿಷ್ಠ ಬೆಲೆಯಾಗಿದೆ. ಈ ನಗರಗಳಲ್ಲಿನ ಪೆಟ್ರೋಲ್‌ ದರ ಕ್ರಮವಾಗಿ ₹ 76.78, ₹81.93 ಹಾಗೂ ₹ 76.85 ಇದೆ ಎಂದು ಇಂಡಿಯನ್‌ ಆಯಿಲ್‌ ವೆಬ್‌ಸೈಟ್‌ನಲ್ಲಿ ಉಲ್ಲೇಖಿಸಲಾಗಿದೆ.

ಕೊಲ್ಕತ್ತದಲ್ಲಿ 2014ರ ಆಗಸ್ಟ್‌ನಲ್ಲಿ ₹ 78.03, ಮುಂಬೈನಲ್ಲಿ 2017ರ ಮಾರ್ಚ್‌ನಲ್ಲಿ ₹ 82.07 ಮತ್ತು ಚೆನ್ನೈನಲ್ಲಿ 2014ರ ಜುಲೈನಲ್ಲಿ ₹ 76.93 ಇದ್ದದ್ದು ಇದುವರೆಗಿನ ಗರಿಷ್ಠ ಮೊತ್ತವಾಗಿದೆ.

ಡಿಸೇಲ್‌ ದರವೂ ಏರಿಕೆ ಕಂಡಿದೆ. ದೆಹಲಿ, ಕೊಲ್ಕತ್ತ, ಮುಂಬೈ ಹಾಗೂ ಚೆನ್ನೈನಲ್ಲಿ ಡಿಸೇಲ್‌ ಬೆಲೆ ಕ್ರಮವಾಗಿ ₹ 65.31, ₹ 68.01, ₹ 69.54 ಮತ್ತು ₹ 68.90ಕ್ಕೆ ಹೆಚ್ಚಳವಾಗಿದೆ.

ಬೆಂಗಳೂರಿನಲ್ಲಿ ಪೆಟ್ರೋಲ್‌ ಹಾಗೂ ಡಿಸೇಲ್‌ ಬೆಲೆ ಕ್ರಮವಾಗಿ ₹ 75.25, ₹ 66.41 ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT