ನೆರೆ ಸಂತ್ರಸ್ತರಿಗೆ ಪರಿಹಾರ: ಭರವಸೆ

7
ನೆರೆಪೀಡಿತ ಗ್ರಾಮಗಳಿಗೆ ಶಾಸಕ ಜಿ.ಕರುಣಾಕರರೆಡ್ಡಿ ಭೇಟಿ

ನೆರೆ ಸಂತ್ರಸ್ತರಿಗೆ ಪರಿಹಾರ: ಭರವಸೆ

Published:
Updated:
Deccan Herald

ಹರಪನಹಳ್ಳಿ: ನೆರೆ ಹಾವಳಿಗೆ ತುತ್ತಾದ ತಾಲ್ಲೂಕಿನ ನದಿ ಪಾತ್ರದ ಗ್ರಾಮಗಳಿಗೆ ಶನಿವಾರ ಶಾಸಕ ಜಿ. ಕರುಣಾಕರರೆಡ್ಡಿ ಹಾಗೂ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಕೆ.ಆರ್. ಜಯಶೀಲಾ ಭೇಟಿ ನೀಡಿ ಪರಿಶೀಲಿಸಿದರು.

ನಾಲ್ಕೈದು ದಿನಗಳಿಂದ ತಾಲ್ಲೂಕಿನ ಹಲವಾಗಲು, ಗರ್ಭಗುಡಿ, ನಿಟ್ಟೂರು, ನಿಟ್ಟೂರು ಬಸಾಪುರ, ತಾವರಗುಂದಿ, ಕಡತಿ ಹಾಗೂ ನಂದ್ಯಾಲ ಗ್ರಾಮಗಳಲ್ಲಿ ತುಂಗಭದ್ರಾ ನದಿ ನೀರು ನುಗ್ಗಿ ಕೃಷಿ ಜಮೀನುಗಳು ಜಲಾವೃತಗೊಂಡಿದ್ದವು. ಅಲ್ಲದೇ ಹಲವಾಗಲು-ಗರ್ಭಗುಡಿ, ಹಲವಾಗಲು-ಕಣವಿ, ಹಲವಾಗಲು-ಕಡತಿ ರಸ್ತೆ ಸಂಪರ್ಕಗಳು ಕಡಿತಗೊಂಡು ಜನಜೀವನಕ್ಕೆ ತೊಂದರೆ ಆಗಿತ್ತು. ಈ ಹಿನ್ನೆಲೆಯಲ್ಲಿ ಶಾಸಕರು ಮತ್ತು ಜಿಲ್ಲಾ ಪಂಚಾಯಿತಿ ಅಧ್ಯಕ್ಷರು ಕಂದಾಯ ಅಧಿಕಾರಿಗಳೊಂದಿಗೆ ನದಿ ಪಾತ್ರದ ಗ್ರಾಮಗಳ ಪರಿಸ್ಥಿತಿ ಅವಲೋಕಿಸಿದರು.

ನದಿ ತೀರದ ಗ್ರಾಮಗಳ ಜಮೀನುಗಳಿಗೆ ನೀರು ಸಾವಿರಾರು ಎಕರೆ ಜಮೀನಿನಲ್ಲಿ ಬೆಳೆದಿದ್ದ ಬೆಳೆ ಜಲಾವೃತಗೊಂಡಿವೆ. ಇದರಿಂದ ಬೆಳೆದಿದ್ದ ಭತ್ತ, ಮೆಕ್ಕೆಜೋಳ, ಚಂಡು ಹೂವು, ಬೆಂಡೆ ಸೇರಿ ವಿವಿಧ ಬೆಳೆಗಳು ಹಾನಿಗೀಡಾಗಿದ್ದವು. ಇನ್ನೂ ಕೆಲ ಪ್ರದೇಶಗಳಲ್ಲಿ ನೀರು ನಿಂತಿದ್ದು, ಈ ಬಗ್ಗೆ ಪರಿಶೀಲಿಸಿ ಮೂರು ದಿನದೊಳಗಾಗಿ ಸಮೀಕ್ಷೆ ನಡೆಸಿ ನಷ್ಟದ ಬಗ್ಗೆ ಸರ್ಕಾರಕ್ಕೆ ವರದಿ ಸಲ್ಲಿಸಿ ಸೂಕ್ತ ಪರಿಹಾರಕ್ಕೆ ಕ್ರಮ ಕೈಗೊಳ್ಳುವಂತೆ ತಹಶೀಲ್ದಾರ್‌ಗೆ ಶಾಸಕರು ಸೂಚಿಸಿದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ‘ಅನಾವೃಷ್ಟಿಯಿಂದ ಹಾನಿಗೊಳಗಾಗಿರುವ ಬಗ್ಗೆ ಪರಿಶೀಲಿಸಿ ತಕ್ಷಣ ಪರಿಹಾರ ವಿತರಣೆಗೆ ಕ್ರಮಕೈಗೊಳ್ಳಲಾಗುವುದು. ಗರ್ಭಗುಡಿ-ಹಲುವಾಗಲು ಮಾರ್ಗದ ಮಧ್ಯದ ಹಳ್ಳಕ್ಕೆ ನದಿ ನೀರು ನುಗ್ಗುತ್ತಿರುವುದರಿಂದ ರಸ್ತೆ ಸಂಪರ್ಕ ಕಡಿತಗೊಳ್ಳುತ್ತದೆ. ಶಾಶ್ವತ ಪರಿಹಾರಕ್ಕಾಗಿ ಎರಡು ಸೇತುವೆ ನಿರ್ಮಾಣಕ್ಕೆ ₹5 ಕೋಟಿ ಮೊತ್ತದ ಪ್ರಸ್ತಾವವನ್ನು ಸರ್ಕಾರಕ್ಕೆ ಕಳುಹಿಸಲಾಗಿದೆ ಎಂದು ತಿಳಿಸಿದರು.

ನಿಟ್ಟೂರು ಹಾಗೂ ಕಡತಿ ಗ್ರಾಮಗಳ ಮೀನುಗಾರರು ಮೀನುಗಾರಿಕೆ ಸಾಕಾಣಿಕೆಯನ್ನು ಮಾಡಿಕೊಳ್ಳಲು ಹೊಂಡಗಳನ್ನು ನಿರ್ಮಿಸಿ ಸಾಕಾಣಿಕೆ ಮಾಡುತ್ತಿದ್ದರು. ಈ ಸಾಕಾಣಿಕೆ ಘಟಕಕ್ಕೆ ನದಿ ನೀರು ನುಗ್ಗಿ ಅದರಲ್ಲಿದ್ದ ಸಾಕುವ ಮೀನುಗಳು ಸಹ ಕೊಚ್ಚಿಹೋಗಿವೆ. ಈ ಬಗ್ಗೆ ಶಾಸಕರ ಗಮನಕ್ಕೆ ತಂದಾಗ ಮೀನುಗಾರಿಕೆ ಇಲಾಖೆಯ ಅಧಿಕಾರಿ ಮಂಜುಳಾ ಅವರಿಗೆ ಕೂಡಲೇ ಅವರಿಗೆ ಪರಿಹಾರ ನೀಡುವಂತೆ ಸೂಚಿಸಿದರು.

ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷ ಎಚ್.ಕೆ. ಹಾಲೇಶ್, ಉಪಾಧ್ಯಕ್ಷ ಕೆ. ಸತ್ಯನಾರಾಯಣ, ಸದಸ್ಯ ಎಂ. ವೆಂಕಟೇಶ್, ತಹಶೀಲ್ದಾರ ಕೆ. ಗುರುಬಸವರಾಜ, ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷ ಎಲ್. ಮಂಜ್ಯನಾಯ್ಕ, ಸದಸ್ಯರಾದ ನಾಗರಾಜ, ಈರಣ್ಣ, ಬಿಜೆಪಿ ತಾಲ್ಲೂಕು ಅಧ್ಯಕ್ಷ ಕೆ. ಲಕ್ಷ್ಮಣ, ಜಿಲ್ಲಾ ಉಪಾಧ್ಯಕ್ಷ ಎಂ.ಪಿ. ನಾಯ್ಕ, ಮುಖಂಡರಾದ ಮಲ್ಕಪ್ಪ ಅಧಿಕಾರ, ರಾಘವೇಂದ್ರಶೆಟ್ಟಿ, ಆರ್. ಲೋಕೇಶ್, ಸಂತೋಷ್, ಬಾಗಳಿ ಕೊಟ್ರೇಶಪ್ಪ, ನಿಟ್ಟೂರು ಸಣ್ಣ ಹಾಲಪ್ಪ, ಎಚ್. ಕೊಟ್ರಬಸಪ್ಪ, ಮಡಿವಾಳಜ್ಜ, ನವೀನಪಾಟೀಲ್, ಕರೇಗೌಡ, ಸತ್ತೂರು ಹಾಲೇಶ್, ಎಚ್.ಟಿ. ಗಿರೀಶಪ್ಪ, ಮಂಜಾಚಾರ್ಯ, ಕೃಷ್ಣ ಅವರೂ ಇದ್ದರು.

1,800 ಎಕರೆ - ಬೆಳೆ ಜಲಾವೃತ
₹5 ಕೋಟಿ - ವೆಚ್ಚದಲ್ಲಿ ಸೇತುವೆ ನಿರ್ಮಾಣಕ್ಕೆ ಪ್ರಸ್ತಾವ ಸಲ್ಲಿಕೆ

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !