ಹೊನ್ನಾಳಿ: ತಾಲ್ಲೂಕಿನ ಸುಕ್ಷೇತ್ರ ಸೊರಟೂರು ಗ್ರಾಮದ ಹನುಮಂತ ದೇವರು ಹಾಗೂ ತಿಮ್ಮಪ್ಪ ದೇವರ ರಥೋತ್ಸವ ಏ. 2ರಂದು ಶ್ರದ್ಧಾಭಕ್ತಿಯಿಂದ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ನಡೆಯಿತು.

ಮಾರ್ಚ್ 30ರಂದು ದೇವರಿಗೆ ಕಂಕಣಧಾರಣೆ ಮಾಡಲಾಯಿತು. 31ರಂದು ಬೆಳಿಗ್ಗೆ ರಥದ ಕಳಸಾರೋಹಣ ಹಾಗೂ ರಾತ್ರಿ 10ಕ್ಕೆ ಪರವು, ಹೂವಿನ ರಥೋತ್ಸವ ನಡೆಯಿತು. ಏ. 1ರಂದು ರಾತ್ರಿ 1 ಗಂಟೆಗೆ ಹೂವಿನ ರಥೋತ್ಸವ ನಡೆಯಿತು.

ಏಪ್ರಿಲ್ 2ರಂದು ಮಧ್ಯಾಹ್ನ ಹನುಮಂತ ದೇವರ ರಥೋತ್ಸವ ನಡೆಯಿತು. ರಥೋತ್ಸವದಲ್ಲಿ ಹೊಂಡದ ರಾಮೇಶ್ವರ, ರಟ್ಟೆಹಳ್ಳಿ ತಾಲ್ಲೂಕಿನ ಬುಳ್ಳಾಪುರ ದುರ್ಗಮ್ಮ ದೇವಿ, ತುಗ್ಗಲಹಳ್ಳಿಯ ಬಸವಣ್ಣ ದೇವರು, ಮಾರಿಕೊಪ್ಪದ ಹಳದಮ್ಮ ದೇವಿ, ಜೀನಹಳ್ಳಿಯ ಮರಿಯಮ್ಮ ದೇವಿಯ ಉತ್ಸವಮೂರ್ತಿಗಳು ಪಾಲ್ಗೊಂಡಿದ್ದವು.

ರಥದಲ್ಲಿ ತಿಮ್ಮಪ್ಪ ದೇವರ ಹಾಗೂ ಹನುಮಂತ ದೇವರ ಉತ್ಸವ ಮೂರ್ತಿಗಳನ್ನು ಪ್ರತಿಷ್ಠಾಪನೆ ಮಾಡುತ್ತಿದ್ದಂತೆ ಜೈಕಾರ ಮುಗಿಲು ಮುಟ್ಟಿತು. ಭಕ್ತರು ಉತ್ತುತ್ತಿ, ಮಂಡಕ್ಕಿ, ಮೆಣಸಿನಕಾಳು ಹಾಗೂ ರಥದ ಕಳಸಕ್ಕೆ ಬಾಳೆಹಣ್ಣು ಎಸೆದು ಭಕ್ತಿ ಸಮರ್ಪಿಸಿದರು.

ರಥವನ್ನು ಮೂರು ಬಾರಿ ಹಿಂದೆ ಮುಂದಕ್ಕೆ ಚಲಿಸುವಂತೆ ಮಾಡಿ ನಂತರ ಎಳೆಯಲಾಯಿತು. ಉತ್ಸವದ ನಂತರ ಭಕ್ತರು ಪ್ರಸಾದ ಸೇವನೆ ಮಾಡಿದರು.

ಏಪ್ರಿಲ್ 3ರಂದು 3 ಗಂಟೆಗೆ ದಾಸಪ್ಪಗಳಿಂದ ಮಣೇವು ಆಡಿಸುವ ಕಾರ್ಯಕ್ರಮ ನಡೆಯಿತು. ನಂತರ ಓಕಳಿ ಆಡಿಸುವ ಕಾರ್ಯಕ್ರಮಗಳು ಜರುಗಲಿವೆ ಎಂದು ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷರು, ಕಾರ್ಯದರ್ಶಿ ಗಳು ತಿಳಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260403-43-1507852613

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.