ಬುಧವಾರ, ಸೆಪ್ಟೆಂಬರ್ 22, 2021
22 °C

ಕೆಎಸ್‌ಆರ್‌ಟಿಸಿಯಿಂದ ಜೋಗ, ಶಿರಸಿಗೆ ವಿಶೇಷ ಪ್ಯಾಕೇಜ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಕೆಎಸ್‌ಆರ್‌ಟಿಸಿ ದಾವಣಗೆರೆ ವಿಭಾಗದಿಂದ ಜೋಗ ಜಲಪಾತ ಹಾಗೂ ಶಿರಸಿಗೆ ರಾಜಹಂಸ ವಿಶೇಷ ಪ್ಯಾಕೇಜ್ ಸಾರಿಗೆ ಸೌಲಭ್ಯ ಕಲ್ಪಿಸಲಾಗಿದೆ.

ವಾರಾಂತ್ಯ ಹಾಗೂ ರಜಾ ದಿನಗಳಲ್ಲಿ ದಾವಣಗೆರೆ ಹಾಗೂ ಹರಿಹರದಿಂದ ಈ ಸೌಲಭ್ಯ ಕಲ್ಪಿಸಿದ್ದು, ಜುಲೈ 25ರಂದು ಬೆಳಿಗ್ಗೆ 6.30ಕ್ಕೆ ಹೈಸ್ಕೂಲ್ ಮೈದಾನದ ಬಸ್‌ ನಿಲ್ದಾಣದಲ್ಲಿ ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಸಿದ್ದೇಶ್ವರ್ ಹೆಬ್ಬಾಳ್ ಚಾಲನೆ ನೀಡುವರು.

ಭಾನುವಾರ ಬೆಳಿಗ್ಗೆ 7ಗಂಟೆಗೆ ದಾವಣಗೆರೆಯಿಂದ ಹೊರಡಲಿದ್ದು, ಬೆಳಿಗ್ಗೆ 10.30ಕ್ಕೆ ಶಿರಸಿ ತಲುಪಲಿದೆ. ಮಾರಿಕಾಂಬೆಯ ದರ್ಶನ ಪಡೆದ ಬಳಿಕ ಮಧ್ಯಾಹ್ನ 12ಕ್ಕೆ ಶಿರಸಿಯಿಂದ ಹೊರಟು ಮಧ್ಯಾಹ್ನ 1.30ಕ್ಕೆ ಜೋಗವನ್ನು ತಲುಪಲಿದೆ. ಜೋಗ ಜಲಪಾತ ವೀಕ್ಷಣೆಯ ಬಳಿಕ ಸಂಜೆ 4.30ಕ್ಕೆ ಜೋಗದಿಂದ ಹೊರಟು ರಾತ್ರಿ 8ಕ್ಕೆ ವಾಪಸ್ ದಾವಣಗೆರೆ ತಲುಪಲಿದೆ.

ಒಬ್ಬರಿಗೆ ಎರಡೂ ಕಡೆಗೆ ₹ 500 ಹಾಗೂ ಮಕ್ಕಳಿಗೆ ₹ 375 ದರ ನಿಗದಿಪಡಿಸಲಾಗಿದೆ. ಹರಿಹರದಿಂದ ಬೆಳಿಗ್ಗೆ 7.30ಕ್ಕೆ ಹೊರಡಲಿದ್ದು, ₹ 475 ಹಾಗೂ ಮಕ್ಕಳಿಗೆ ₹ 350 ದರ ನಿಗದಿಪಡಿಸಲಾಗಿದೆ ಎಂದು ವಿಭಾಗೀಯ ನಿಯಂತ್ರಣಾಧಿಕಾರಿ ಸಿದ್ದೇಶ್ವರ್ ಹೆಬ್ಬಾಳ್ ತಿಳಿಸಿದ್ದಾರೆ.

ಬುಕ್ಕಿಂಗ್‌ಗಾಗಿ ವೆಬ್‌ಸೈಟ್ www.ksrtc.in ಅನ್ನು ಸಂಪರ್ಕಿಸಬಹುದು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.